ಹೆಚ್ಚು ಅವಧಿಗೆ, ವಿಶೇಷವಾಗಿ ವರ್ಷಗಳು ಅಥವಾ ದಶಕಗಳವರೆಗೆ ಅಸೆಟ್‌ಗಳನ್ನು ಇಟ್ಟುಕೊಳ್ಳುವುದನ್ನು ದೀರ್ಘಕಾಲೀನ ಹೂಡಿಕೆ ಒಳಗೊಂಡಿರುತ್ತದೆ. ಈ ಕಾರ್ಯವಿಧಾನವು ಅನುಕೂಲಕರವಾಗಿದ್ದು, ಗಮನಾರ್ಹ ರಿಟರ್ನ್ಸ್ ಪಡೆಯುವುದಕ್ಕೆ ಕ್ರೋಢೀಕರಣದ ಅನುಕೂಲವನ್ನು ಇದು ಪರಿಣಾಮಕಾರಿಯಾಗಿ ಬಳಸುತ್ತದೆ. ಹೀಗಾಗಿ, ಮಾರ್ಕೆಟ್‌ನ ಅಸ್ಥಿರತೆಯನ್ನು ನಿವಾರಿಸಿಕೊಳ್ಳಲು ಹೂಡಿಕೆದಾರರಿಗೆ ಅನುಕೂಲವಾಗುತ್ತದೆ ಮತ್ತು ಅಲ್ಪಕಾಲೀನ ಏರಿಳಿತಗಳ ವಿರುದ್ಧ ಸ್ಥಿರತೆಯನ್ನು ಒದಗಿಸುತ್ತದೆ.
ಪರಿಣಾಮಕಾರಿಯಾದ ದೀರ್ಘಕಾಲೀನ ಮ್ಯೂಚುವಲ್ ಫಂಡ್ ಕಾರ್ಯತಂತ್ರವನ್ನು ಯೋಜಿಸುವುದಕ್ಕೆ ಚಿಂತನಶೀಲ ಮತ್ತು ಅತ್ಯಂತ ಉತ್ತಮವಾಗಿ ಯೋಜಿಸಿದ ಕಾರ್ಯವಿಧಾನ ಅಗತ್ಯವಿರುತ್ತದೆ. ಮೊದಲನೆಯದಾಗಿ, ನಿಮ್ಮ ಹಣಕಾಸಿನ ಗುರಿಗಳು ಮತ್ತು ಕಾಲಾವಧಿಯನ್ನು ಸ್ಪಷ್ಟವಾಗಿ ನಿರ್ಧಾರ ಮಾಡಿಕೊಳ್ಳಿ. ನಿಮ್ಮ ಹೂಡಿಕೆಯ ಉದ್ದೇಶವನ್ನು ಗುರುತಿಸಿಕೊಳ್ಳಿ. ನಿವೃತ್ತಿ ಯೋಜನೆ, ಶಿಕ್ಷಣಕ್ಕೆ ಹಣ ಕೂಡಿಡುವುದು, ಸಂಪತ್ತನ್ನು ಕ್ರೋಢೀಕರಿಸುವುದು ಇತ್ಯಾದಿ ಉದ್ದೇಶವನ್ನು ನಿರ್ಧರಿಸಿಕೊಳ್ಳಿ. ಮುಂದಿನದು, ನೀವು ಆರಾಮದಾಯಕವಾಗಿ ನಿರ್ವಹಿಸಬಹುದಾದ ಅಸ್ಥಿರತೆಯ ಮಟ್ಟವನ್ನು ನಿರ್ಧಾರ ಮಾಡಲು ನಿಮ್ಮ ಅಪಾಯವನ್ನು ಸಹಿಸಿಕೊಳ್ಳುವಿಕೆಯನ್ನು ವಿಶ್ಲೇಷಿಸಿ. ಕೊನೆಯದಾಗಿ, ನಿಮ್ಮ ಗುರಿಗಳು ಮತ್ತು ಅಪಾಯವನ್ನು ಸಹಿಸಿಕೊಳ್ಳುವುದಕ್ಕೆ ಅನುಗುಣವಾಗಿ, ನಿಮ್ಮ ಉದ್ದೇಶಗಳಿಗೆ ಹೊಂದಿಕೆಯಾಗುವ ಮ್ಯೂಚುವಲ್ ಫಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡಿ.
ವೈವಿಧ್ಯಗೊಳಿಸುವಿಕೆ ಅಥವಾ ಡೈವರ್ಸಿಫಿಕೇಶನ್ ಎಂಬುದು ಒಂದು ಬಲಿಷ್ಠ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ರೂಪಿಸಲು ಪ್ರಮುಖ ಸಿದ್ಧಾಂತವಾಗಿದೆ. ಬೇರೆ ಬೇರೆ ಸ್ವತ್ತು ವರ್ಗಗಳಾದ್ಯಂತ ಹೂಡಿಕೆಯನ್ನು ವಿಭಜಿಸುವ ಮೂಲಕ ನೀವು ಅಪಾಯವನ್ನು ಸಂಭಾವ್ಯವಾಗಿ ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಬೆಳವಣಿಗೆಯ ಸಾಧ್ಯತೆಗಳನ್ನು ಸುಧಾರಿಸಬಹುದು. ಮಾರ್ಕೆಟ್‌ನ ಏರಿಳಿತದಿಂದ ನಿಮ್ಮ ಪೋರ್ಟ್‌ಫೋಲಿಯೋವನ್ನು ಇದು ರಕ್ಷಿಸುವುದಷ್ಟೇ
ಇನ್ನಷ್ಟು ಓದಿ