ಹಣವು ಲಾಕ್ ಅಪ್‌ ಆಗುವುದಿಲ್ಲ. ಹಣ ಹೂಡಿಕೆಯಾಗುತ್ತದೆ!

Video

ಹಣವು ಲಾಕ್ ಅಪ್‌ ಆಗುವುದಿಲ್ಲ. ಹಣ ಹೂಡಿಕೆಯಾಗುತ್ತದೆ!

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಅತ್ಯಂತ ಸಾಮಾನ್ಯ ಪ್ರಶ್ನೆಯೆಂದರೆ, ‘ನನ್ನ ಹಣ ಲಾಕ್ ಅಪ್‌ ಆಗುತ್ತದೆಯೇ?’ ಎಂಬುದಾಗಿರುತ್ತದೆ.

ಇದರಲ್ಲಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

a. ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಹಣವು ಹೂಡಿಕೆ ಮಾಡಲಾಗುತ್ತದೆ ಮತ್ತು ಲಾಕ್‌ ಆಗುವುದಿಲ್ಲ ಮತ್ತು ಹಣ ಎಂದಿಗೂ ನಿಮ್ಮದಾಗಿಯೇ ಇರುತ್ತದೆ. ಇದನ್ನು ವೃತ್ತಿಪರ ಫಂಡ್ ಮ್ಯಾನೇಜರ್ ನಿರ್ವಹಣೆ ಮಾಡುತ್ತಿರುತ್ತಾರೆ.

b. ನಿಮ್ಮ ಹಣ ಯಾವಾಗಲೂ ಸುಲಭವಾಗಿ ಲಭ್ಯವಾಗುವಂತಿರುತ್ತದೆ. ಮ್ಯೂಚುವಲ್‌ ಫಂಡ್‌ ಅನ್ನು ಆಕ್ಸೆಸ್‌ ಮಾಡಲು ಸುಲಭವಾಗುವಂತೆ ಅದರ ರಚನೆ ಇರುತ್ತದೆ. ನಿಮ್ಮ ಹೂಡಿಕೆಯನ್ನು ನೀವು ಭಾಗಶಃ ಅಥವಾ ಸಂಪೂರ್ಣವಾಗಿ ರಿಡೀಮ್‌ ಮಾಡಿಕೊಳ್ಳಬಹುದು. ನಿಮ್ಮ ಬ್ಯಾಂಕ್‌ ಖಾತೆಗೆ ನಿಗದಿತ ಮೊತ್ತವನ್ನು ತಿಂಗಳದ ಅಥವಾ ಪ್ರತಿ ತ್ರೈಮಾಸಿಕದ ನಿಗದಿತ ದಿನಾಂಕದಂದು ವರ್ಗಾವಣೆ ಮಾಡುವಂತೆ ಮ್ಯೂಚುವಲ್‌ ಫಂಡ್‌ ಕಂಪನಿಗೆ ಸ್ಥಾಯೀ ಆದೇಶಗಳನ್ನು (ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್‌ಗಳನ್ನು) ನೀಡಿ ನೀವು ರಿಡೆಂಪ್ಷನ್‌ ದಿನಾಂಕಗಳನ್ನು ಮೊದಲೇ ನಿಗದಿಪಡಿಸಬಹುದು. ಒಂದೇ ಮ್ಯೂಚುವಲ್‌ ಫಂಡ್‌ ಕಂಪನಿ ನಿರ್ವಹಿಸುತ್ತಿರುವ ಒಂದು ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಿಂದ ಇನ್ನೊಂದಕ್ಕೆ ನಿಮ್ಮ ಹೂಡಿಕೆಯನ್ನು ವರ್ಗಾವಣೆ ಮಾಡಲೂ ಆಯ್ಕೆ ಮಾಡಿಕೊಳ್ಳಬಹುದು. ಅಚ್ಚುಕಟ್ಟಾಗಿ ನಿರ್ವಹಿಸಿದ, ಸಮಗ್ರ / ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಖಾತೆ ಸ್ಟೇಟ್‌ಮೆಂಟ್ ಅನ್ನು ನೀವು ಯಾವಾಗಲೂ ಪಡೆಯಬಹುದು.

ಮುಂದುವರೆಯಿರಿ, ನೀವು ಬಯಸಿದ ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿ ಮತ್ತು ಫ್ಲೆಕ್ಸಿಬಿಲಿಟಿ, ಪಾರದರ್ಶಕತೆ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??