ಮ್ಯೂಚುವಲ್‌ ಫಂಡ್ ಡಿವಿಡೆಂಡ್ ಎಂದರೇನು?

ಮ್ಯೂಚುವಲ್‌ ಫಂಡ್ ಡಿವಿಡೆಂಡ್ ಎಂದರೇನು?

ಒಂದು ಸ್ಟಾಕ್ ಅಥವಾ ಮ್ಯೂಚುವಲ್‌ ಫಂಡ್‌ನಿಂದ ವಿತರಿಸುವ ಗಳಿಕೆಯು ಡಿವಿಡೆಂಡ್ ಆಗಿರುತ್ತದೆ. ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಅದರ ಪೋರ್ಟ್‌ಫೋಲಿಯೋದಲ್ಲಿ ಸೆಕ್ಯುರಿಟಿಗಳ ಮಾರಾಟದ ಮೇಲೆ ಲಾಭವಾದಾಗ ಡಿವಿಡೆಂಡ್‌ಗಳನ್ನು ವಿತರಿಸಲಾಗುತ್ತದೆ.

ನಿಯಮಾವಳಿ ಪ್ರಕಾರ, ಪೋರ್ಟ್‌ಫೋಲಿಯೋದಲ್ಲಿನ ಸೆಕ್ಯುರಿಟಿಗಳ ಮಾರಾಟದಿಂದ ಗಳಿಸಿದ ಲಾಭದಿಂದ ಅಥವಾ ಬಡ್ಡಿ ಅಥವಾ ಡಿವಿಡೆಂಡ್‌ಗಳ ರೂಪದಲ್ಲಿ ಯಾವುದೇ ಪ್ರಸ್ತುತ ಆದಾಯದ ಮೂಲಕ ಗಳಿಸಿದ ಲಾಭದಿಂದ ಮಾತ್ರ ಡಿವಿಡೆಂಡ್‌ಗಳನ್ನು ಫಂಡ್‌ ಘೋಷಿಸಬಹುದು. ಇಂತಹ ಗಳಿಕೆಯನ್ನು ಡಿವಿಡೆಂಡ್ ಸಮಾನೀಕರಣ ಮೀಸಲಿಗೆ ವರ್ಗಾವಣೆ ಮಾಡಲಾಗುತ್ತದೆ ಮತ್ತು ಟ್ರಸ್ಟಿಗಳ ನಿರ್ಧಾರದ ಮೇರೆಗೆ ಡಿವಿಡೆಂಡ್ ಘೋಷಣೆ ಮಾಡಲಾಗುತ್ತದೆ.

ಸ್ಕೀಮ್‌ನ ಮುಖ ಬೆಲೆ (ಎಫ್‌ವಿ) ಶೇಕಡಾವಾರು ರೀತಿ ಡಿವಿಡೆಂಡ್‌ಗಳನ್ನು ಘೋಷಿಸಲಾಗುತ್ತದೆ. ಎನ್‌ಎವಿ ಮೇಲೆ ಘೋಷಿಸುವುದಿಲ್ಲ. ಪ್ರತಿ ಯುನಿಟ್‌ನ ಎಫ್‌ವಿ ರೂ. 10 ಆಗಿದ್ದು, ಡಿವಿಡೆಂಡ್ ದರವು 20% ಆಗಿದ್ದರೆ, ಡಿವಿಡೆಂಡ್ ಆಯ್ಕೆಯಲ್ಲಿನ ಪ್ರತಿ ಹೂಡಿಕೆದಾರರಿಗೆ ರೂ. 2 ಡಿವಿಡೆಂಡ್ ಸಿಗುತ್ತದೆ. ಆದರೆ, ಡಿವಿಡೆಂಡ್ ಘೋಷಿಸಿದ ನಂತರ ಸ್ಕೀಮ್‌ನ ಎನ್‌ಎವಿ ಇದೇ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಗ್ರೋತ್ ಆಯ್ಕೆಯ ಹೂಡಿಕೆದಾರರು ಡಿವಿಡೆಂಡ್ ಪಡೆಯುವುದಿಲ್ಲ ಮತ್ತು ಸ್ಕೀಮ್‌ನ ಲಾಭವನ್ನು ಈ ಸನ್ನಿವೇಶದಲ್ಲಿ ವಾಪಸ್ ಹಾಕಲಾಗುತ್ತದೆ. ಹೀಗಾಗಿ, ಡಿವಿಡೆಂಡ್ ಆಯ್ಕೆಗೆ ಹೋಲಿಸಿದರೆ ಗ್ರೋತ್ ಆಯ್ಕೆಯಲ್ಲಿ ಎನ್‌ಎವಿ ಹೆಚ್ಚಳವಾಗುತ್ತದೆ.

2020 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ಡಿವಿಡೆಂಡ್‌ಗೆ ಹೂಡಿಕೆದಾರರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಡಿವಿಡೆಂಡ್ ಪೇಔಟ್‌ ಆಯ್ಕೆ ಮಾಡಿಕೊಳ್ಳುವ ಹೂಡಿಕೆದಾರರು ತಮಗೆ ಅನ್ವಯವಾಗುವ ಅಧಿಕ ಆದಾಯ ತೆರಿಗೆ ದರದಲ್ಲಿ ಹಣಕಾಸು ವರ್ಷದಲ್ಲಿ ಸ್ವೀಕರಿಸಿದ ಯಾವುದೇ ಡಿವಿಡೆಂಡ್ ಆದಾಯದ ಮೇಲೆ ಆದಾಯ ತೆರಿಗೆ ಪಾವತಿ ಮಾಡಬೇಕು. ಡಿವಿಡೆಂಡ್ ಮರುಹೂಡಿಕೆ ಆಯ್ಕೆಯನ್ನು ಮಾಡುವ ಹೂಡಿಕೆದಾರರಿಗೆ ತಮ್ಮ ತೆರಿಗೆಗಳ ಮೇಲೆ ಯಾವುದೇ ಪರಿಣಾಮ ಕಂಡುಬರುವುದಿಲ್ಲ. ಯಾಕೆಂದರೆ, ತಮ್ಮ ಫಾಲಿಯೋದಲ್ಲಿ ಹೆಚ್ಚುವರಿ ಯುನಿಟ್‌ಗಳ ರೂಪದಲ್ಲಿ ಲಾಭವನ್ನು ಅವರು ಪಡೆಯುತ್ತಾರೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??