ಮ್ಯೂಚುವಲ್‌ ಫಂಡ್‌ಗಳಲ್ಲಿ ಜನರು ಹೂಡಿಕೆ ಮಾಡುವಾಗ ಯಾವ ತಪ್ಪುಗಳನ್ನು ಮಾಡುತ್ತಾರೆ?

ಮ್ಯೂಚುವಲ್‌ ಫಂಡ್‌ಗಳಲ್ಲಿ ಜನರು ಹೂಡಿಕೆ ಮಾಡುವಾಗ ಯಾವ ತಪ್ಪುಗಳನ್ನು ಮಾಡುತ್ತಾರೆ? zoom-icon

ಹೂಡಿಕೆ ಮಾಡುವಾಗ ತಪ್ಪು ಮಾಡುವಿಕೆಯು ಎಲ್ಲ ಹೂಡಿಕೆಯಲ್ಲೂ ನಡೆಯುತ್ತದೆ. ಇದು ಮ್ಯೂಚುವಲ್‌ ಫಂಡ್‌ಗಳಿಗೂ ಹೊರತಲ್ಲ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳೆಂದರೆ:

  1. ಉತ್ಪನ್ನದ ಬಗ್ಗೆ ತಿಳಿದುಕೊಳ್ಳದೇ ಹೂಡಿಕೆ ಮಾಡುವುದು: ಉದಾಹರಣೆಗೆ, ಈಕ್ವಿಟಿ ಫಂಡ್‌ಗಳು ದೀರ್ಘಕಾಲದ ಉದ್ದೇಶಕ್ಕಾಗಿರುತ್ತದೆ. ಆದರೆ ಅಲ್ಪಾವಧಿಯಲ್ಲಿ ಸುಲಭ ರಿಟರ್ನ್ಸ್ ಸಿಗುತ್ತದೆ ಎಂದು ಹೂಡಿಕೆದಾರರು ಭಾವಿಸುತ್ತಾರೆ.
  2. ರಿಸ್ಕ್ ಅಂಶಗಳನ್ನು ತಿಳಿಯದೇ ಹೂಡಿಕೆ ಮಾಡುವುದು: ಎಲ್ಲ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳೂ ಕೆಲವು ರಿಸ್ಕ್ ಅಂಶಗಳನ್ನು ಹೊಂದಿರುತ್ತವೆ. ಹೂಡಿಕೆ ಮಾಡುವುದಕ್ಕೂ ಮೊದಲು ಹೂಡಿಕೆದಾರರು ಅರ್ಥ ಮಾಡಿಕೊಳ್ಳಬೇಕು.
  3. ಸರಿಯಾದ ಮೊತ್ತವನ್ನು ಹೂಡಿಕೆ ಮಾಡದೇ ಇರುವುದು: ಕೆಲವು ಬಾರಿ ಹೂಡಿಕೆದಾರರು ನಿರ್ದಿಷ್ಟ ಗುರಿ ಅಥವಾ ಯೋಜನೆ ಇಲ್ಲದೇ ಯದ್ವಾತದ್ವಾ ಹೂಡಿಕೆ ಮಾಡುತ್ತಾರೆ. ಇಂತಹ ಪ್ರಕರಣಗಳಲ್ಲಿ, ಹೂಡಿಕೆ ಮಾಡಿದ ಮೊತ್ತವು ನಿರೀಕ್ಷಿತ ಫಲಿತಾಂಶವನ್ನು ಪಡೆಯದೇ ಇರಬಹುದು.
  4. ತುಂಬಾ ಬೇಗ ರಿಡೀಮ್ ಮಾಡಿಕೊಳ್ಳುವುದು: ಕೆಲವು ಬಾರಿ ಹೂಡಿಕೆದಾರರು ಸಹನೆ ಕಳೆದುಕೊಳ್ಳುತ್ತಾರೆ ಅಥವಾ ನಿರೀಕ್ಷಿತ ರಿಟರ್ನ್‌ ದರವನ್ನು ನೀಡಲು ಹೂಡಿಕೆದಾರರಿಗೆ ಅಗತ್ಯ ಸಮಯವನ್ನು ನೀಡುವುದಿಲ್ಲ. ಹೀಗಾಗಿ ಅವಧಿಗೂ ಮುನ್ನ ರಿಡೀಮ್ ಮಾಡಿಕೊಳ್ಳುತ್ತಾರೆ,
  5. ಬೇರೆಯವರ ಮಾತು ಕೇಳುವುದು: ಆಗಾಗ್ಗೆ ಹೂಡಿಕೆದಾರರು ತಮ್ಮ ವಿವೇಚನೆಯನ್ನು ಬಳಸಿ ನಿರ್ಧಾರ ಮಾಡುವುದಿಲ್ಲ ಮತ್ತು ಮಾರ್ಕೆಟ್ ಅಥವಾ ಮಾಧ್ಯಮದ ಗಾಳಿ ಸುದ್ದಿಗೆ ಕಿವಿಗೊಡುತ್ತಾರೆ. ಹೀಗಾಗಿ ತಪ್ಪು ಆಯ್ಕೆ ಮಾಡುತ್ತಾರೆ.
  6. ಯೋಜನೆ ಇಲ್ಲದೇ ಹೂಡಿಕೆ ಮಾಡುವುದು: ಇದು ಬಹುಶಃ ಅತಿದೊಡ್ಡ ತಪ್ಪು. ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಗೂ ಯೋಜನೆ ಅಥವಾ ಗುರಿ ಇರಬೇಕು.
434

ಮ್ಯೂಚುವಲ್‌ ಫಂಡ್‌ ಸೂಕ್ತವೇ??