ನೀವು ಮೊದಲ ಬಾರಿಗೆ ವಿಮಾನ ಹತ್ತಿದ್ದು ನೆನಪಿದೆಯೇ? ನಿಮ್ಮ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗಿತ್ತೇ ಅಥವಾ ವಾಕರಿಕೆ ಬಂದಂತಹ ಭಾವನೆ ಉಂಟಾಗಿತ್ತೇ? ಅಂತಿಮವಾಗಿ, ನಮ್ಮ ವಿಮಾನ ಮೆಲೆ ಹೋದಾಗ ನಮಗೆ ಆರಾಮದ ಭಾವ ಉಂಟಾಗಿತ್ತಲ್ಲವೇ? 30,000 ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಸೀಟ್ ಬೆಲ್ಟ್ ಕಟ್ಟಿಕೊಂಡಿದ್ದಾಗ ಮತ್ತು ಉತ್ತಮ ಕ್ಯಾಬಿನ್ ಸಿಬ್ಬಂದಿ ಮತ್ತು ಅರ್ಹ ಪೈಲಟ್ ನಿಮ್ಮ ಕಾಳಜಿ ವಹಿಸುತ್ತಿರುತ್ತಾರೆ.
ಆನ್ಲೈನ್ನಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಕೂಡ ಮೊದಲ ವಿಮಾನ ಪ್ರಯಾಣದಂತೆಯೇ ಇರುತ್ತದೆ. ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಆರಂಭದಲ್ಲಿ ನಿಮಗೆ ಚಿಂತೆಯಾದರೂ, ಹಣವು ಉದ್ದೇಶಿತ ಸ್ವೀಕೃತಿದಾರರನ್ನು ತಲುಪಿದರೆ, ಯಾವುದೇ ಇತರ ವಿಧಾನಕ್ಕಿಂತ ಆನ್ಲೈನ್ ಮೂಲಕ ಹೂಡಿಕೆ ಮಾಡುವುದು ಸುರಕ್ಷಿತವಾಗಿರುತ್ತದೆ. ಅಗತ್ಯದ ಎನ್ಕ್ರಿಪ್ಷನ್ ನಿಯಮಗಳನ್ನು ಹೊಂದಿರುವ ಆನ್ಲೈನ್ ಪಾವತಿ ಪ್ಲಾಟ್ಫಾರಂಗಳು ಸುರಕ್ಷಿತವಾಗಿವೆ. ಇದರಿಂದ ನಿಮ್ಮ ವೈಯಕ್ತಿಕ ಮತ್ತು ಹಣಕಾಸು ಡೇಟಾವನ್ನು,ಡೇಟಾ ವರ್ಗಾವಣೆಯಲ್ಲಿ ಟ್ಯಾಪ್ ಮಾಡಲು ಸಾಧ್ಯವಿಲ್ಲ. ನಿಮ್ಮ ಎಲ್ಲ ವಹಿವಾಟುಗಳನ್ನು ನೀವು ನೋಡಬಹುದು, ಯಾವುದೇ ಸಮಯದಲ್ಲಿ ಖರೀದಿ ಮತ್ತು ಮಾರಾಟ ಮಾಡಬಹುದು ಮತ್ತು ನಿಮ್ಮ ಪೋರ್ಟ್ಫೋಲಿಯೋ ಹೇಗಿದೆ ಎಂದು ನೋಡುವುದು ಸುಲಭವಾದ್ದರಿಂದ ಆನ್ಲೈನ್ ಪ್ರಕ್ರಿಯೆಯು ಅತ್ಯಂತ ಹೆಚ್ಚು ಅನುಕೂಲಕರವಾಗಿದೆ. ನೀವು ಆನ್ಲೈನ್ನಲ್ಲಿ ಹೂಡಿಕೆ ಮಾಡಿದಾಗ, ನಿಮ್ಮ ಹಣವನ್ನು ನೇರವಾಗಿ ಮ್ಯೂಚುವಲ್ ಫಂಡ್ನ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಇದು ನಿಮ್ಮ ಯೂನಿಟ್ಗಳನ್ನು ನಿಮಗೆ ನಿಯೋಜಿಸುತ್ತದೆ. ಇದನ್ನು ನೀವು ನಿಮ್ಮ ಖಾತೆಗೆ ಲಾಗಿನ್ ಆಗಿ ನೋಡಬಹುದು. ಸುರಕ್ಷತೆ ಮತ್ತು ಅನುಕೂಲತೆಯ ಹೊರತಾಗಿಯೂ, ಆಫ್ಲೈನ್ ಮೋಡ್ನಲ್ಲಿರುವಂತೆಯೇ ಪಾರದರ್ಶಕತೆಯನ್ನೂ ಆನ್ಲೈನ್ ವಿಧಾನವು ಒದಗಿಸುತ್ತದೆ. ಸಿಸ್ಟಂನಲ್ಲಿ ನಿಮ್ಮ ಹಣ ಸುರಕ್ಷಿತವಾಗಿದೆ!