ನಿಮ್ಮ ಮಾಸಿಕ ಕೌಟುಂಬಿಕ ವೆಚ್ಚವನ್ನು ನಿರ್ವಹಿಸಲು ನಿಯತ ಆದಾಯದ ಒಳಹರಿವನ್ನು ನೀವು ನಿರೀಕ್ಷಿಸುತ್ತಿದ್ದರೆ, ಮ್ಯೂಚುವಲ್ ಫಂಡ್ನಲ್ಲಿ ಸಿಸ್ಟಮ್ಯಾಟಿಕ್ ವಿತ್ಡ್ರಾವಲ್ ಪ್ಲಾನ್ಗಳನ್ನು ಬಳಸಬೇಕು. ಸೂಕ್ತ ಸ್ಕೀಮ್ನಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು ಮತ್ತು ಒಂದು ವರ್ಷದ ನಂತರ ಎಸ್ಡಬ್ಲ್ಯೂಪಿ ಅನ್ನು ಆರಂಭಿಸಬೇಕು. ಆಗ ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆಯು ಅನ್ವಯವಾಗುವುದಿಲ್ಲ. ನೀವು ಪಾವತಿ ಮೊತ್ತ ಮತ್ತು ಆವರ್ತನವನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನಿರ್ಧರಿಸಬಹುದು ಮತ್ತು ನೀವು ಬಯಸಿದಾಗ ಇದನ್ನು ಬದಲಾವಣೆ ಮಾಡಬಹುದು.
ಮ್ಯೂಚುವಲ್ ಫಂಡ್ ಸ್ಕೀಮ್ನಲ್ಲಿ ಡಿವಿಡೆಂಡ್ ಆಯ್ಕೆಯನ್ನು ಮಾಡುವುದಕ್ಕಿಂತ ಎಸ್ಡಬ್ಲ್ಯೂಪಿ ಉತ್ತಮ ವಿಧಾನ. ಯಾಕೆಂದರೆ ಡಿವಿಡೆಂಡ್ ಪಾವತಿಗಳು ಖಚಿತವಾಗಿರುವುದಿಲ್ಲ. ನಿಮ್ಮ ಹಣವನ್ನು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ಗಳಲ್ಲಿನ ಕಂಪನಿಗಳು ಮಾಡಿದ ಲಾಭಕ್ಕೆ ಇದು ಒಳಪಟ್ಟಿರುತ್ತದೆ. ಮಾರ್ಕೆಟ್ ಕುಸಿದರೆ ಮತ್ತು ಪೋರ್ಟ್ಫೋಲಿಯೋದಲ್ಲಿ ನಿಮ್ಮ ಫಂಡ್ಗೆ ನಷ್ಟ ಉಂಟಾದರೆ ನೀವು ಯಾವುದೇ ಡಿವಿಡೆಂಡ್ಗಳನ್ನು ಪಡೆಯುವುದಿಲ್ಲ. ಎಸ್ಡಬ್ಲ್ಯೂಪಿ ವಿಚಾರದಲ್ಲಿ ಸ್ಕೀಮ್ ನಷ್ಟವನ್ನು ಎದುರಿಸುತ್ತಿದ್ದರೂ ನೀವು ಬಯಸಿದ ಮೊತ್ತವನ್ನು ಅಸಲಿನಿಂದ ತೆಗೆದುಕೊಡುತ್ತದೆ. ಹೀಗಾಗಿ, ಎಸ್ಡಬ್ಲ್ಯೂಪಿ ವಿಚಾರದಲ್ಲಿ ನೀವು ದೊಡ್ಡ ಮೊತ್ತದಿಂದ ಆರಂಭಿಸಬೇಕು. ನಿಮ್ಮ ಒಟ್ಟಾರೆ ಹೂಡಿಕೆಯ ಅನುಪಾತ (%) ಆಗಿ ನೀವು ಹಿಂಪಡೆಯುವ ಮೊತ್ತವನ್ನು ನಿಗದಿಸಬಹುದು. ಇದು ಫಂಡ್ನಿಂದ ನೀವು ನಿರೀಕ್ಷಿಸಿದ ರಿಟರ್ನ್ಸ್ಗಿಂತ ಸ್ವಲ್ಪ ಕಡಿಮೆ ಇರುತ್ತದೆ. ಆಗ ನಿಮ್ಮ ಅಸಲು ಬಹುತೇಕ ಸಮಯದಲ್ಲಿ ಹಾಗೆಯೇ ಇರುತ್ತದೆ.