ಮ್ಯೂಚುವಲ್‌ ಫಂಡ್‌ಗಳಲ್ಲಿ ಬಡ್ಡಿ ದರಗಳು ಎಷ್ಟು?

Video

ಈ ಜಗತ್ತಿನಲ್ಲಿ ಉಚಿತವಾಗಿ ಎಲ್ಲೂ ಊಟ ಸಿಗುವುದಿಲ್ಲ. ನಾವು ಬಳಸುವ ಪ್ರತಿ ಉತ್ಪನ್ನ ಅಥವಾ ಸೇವೆಗೂ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಪಾವತಿ ಮಾಡಿರುತ್ತೇವೆ. ಉದಾಹರಣೆಗೆ, ಪಾರ್ಕಿಂಗ್‌ ಸ್ಥಳವನ್ನು ಬಳಸಿದ ಸಮಯಕ್ಕೆ ನೀವು ಪಾರ್ಕಿಂಗ್‌ ಫೀ ಪಾವತಿ ಮಾಡಿರುತ್ತೀರಿ. ನೀವು ಒಂದು ಕೊರಿಯರ್ ಕಳಿಸುವಾಗ ಕೊರಿಯರ್ ತೂಕ ಮತ್ತು ಅದು ಸಾಗಬೇಕಿರುವ ದೂರದಕ್ಕೆ ಅನುಗುಣವಾಗಿ ಪಾವತಿ ಮಾಡಿರುತ್ತೀರಿ. ಇತರರಿಂದ ಹಣವನ್ನು ನೀವು ಸಾಲ ಪಡೆದಾಗ, ನೀವು ಸಾಲ ಪಡೆಯುವ ಸಮಯ ಮತ್ತು ಮೊತ್ತಕ್ಕೆ ಒಂದು ಫೀಯನ್ನು ಸಾಲದಾತರು ವಿಧಿಸುತ್ತಾರೆ. ಪಡೆದ ಸಾಲದ ಅಸಲು ಮೊತ್ತದ ಶೇಕಡಾವಾರು ರೂಪದಲ್ಲಿ ವ್ಯಕ್ತಪಡಿಸಿದ ಫೀ ಒಂದು ವರ್ಷದ ಬಡ್ಡಿ ದರವಾಗಿರುತ್ತದೆ.

ಕಂಪನಿಗಳು, ಬ್ಯಾಂಕ್‌ಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಾರ್ವಜನಿಕರಿಂದ ಡೆಟ್‌ ಫಂಡ್‌ಗಳನ್ನು ಸಂಗ್ರಹಿಸಿವೆ ಮತ್ತು ತಮ್ಮ ವಹಿವಾಟಿನ ಕೆಲವು ಅಂಶಗಳಲ್ಲಿ ಈ ಬಂಡವಾಳವನ್ನು ಹೂಡಿಕೆ ಮಾಡಿವೆ. ಇಂತಹ ಸಾಲಗಳಿಗೆ ಅವರು ಫೀ ಪಾವತಿ ಮಾಡುತ್ತಾರೆ. ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು ಅವು ಬಾಂಡ್‌ಗಳನ್ನು ವಿತರಿಸುತ್ತವೆ ಮತ್ತು ಇದಕ್ಕೆ ಪ್ರತಿಯಾಗಿ ಬಾಂಡ್‌ದಾರರಿಗೆ ಬಡ್ಡಿ ದರವನ್ನು ಅವು ಪಾವತಿ ಮಾಡುತ್ತವೆ. ತಮ್ಮ ಹಣವನ್ನು ಹೂಡಿಕೆ ಮಾಡಿದ್ದಕ್ಕೆ ಬಾಂಡ್‌ದಾರರಿಗೆ ಪರಿಹಾರ ಬೇಕಾಗಿರುತ್ತದೆ. ನಿಮ್ಮ ಉಳಿತಾಯ ಅಥವಾ ಫಿಕ್ಸೆಡ್‌ ಡೆಪಾಸಿಟ್‌ಗಳ ಮೇಲೆ ಬಡ್ಡಿಯನ್ನು ಬ್ಯಾಂಕ್‌ ಪಾವತಿ ಮಾಡುತ್ತದೆ. ಇದೇ ರೀತಿ, ಕಂಪನಿಗಳು ಬಾಂಡ್‌ಗಳನ್ನು ವಿತರಿಸಿದಾಗ ಬಡ್ಡಿ ಪಾವತಿ ಮಾಡುತ್ತವೆ. ಮ್ಯೂಚುವಲ್‌ ಫಂಡ್‌ಗಳು ಈ ಬಾಂಡ್‌ಗಳನ್ನು ತಮ್ಮ ಪೋರ್ಟ್‌ಫೋಲಿಯೋಗಾಗಿ ಖರೀದಿ ಮಾಡಿದಾಗ ಅವರು ಬಡ್ಡಿಯನ್ನು ಗಳಿಸುತ್ತಾರೆ. ಬಾಂಡ್‌ಗಳ ಬೆಲೆಯು ಬಡ್ಡಿ ದರಕ್ಕೆ ತದ್ವಿರುದ್ಧ ಸಂಬಂಧವನ್ನು ಹೊಂದಿರುತ್ತವೆ. ಅಂದರೆ, ಅವು ಎಂದಿಗೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ.

434

ಮ್ಯೂಚುವಲ್‌ ಫಂಡ್‌ ಸೂಕ್ತವೇ??