ನಮ್ಮ ದೇಹದ ಒಟ್ಟಾರೆ ಪ್ರಗತಿ ಮತ್ತು ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು ನಾವು ಸೇವಿಸಬೇಕು.
ನಮ್ಮದೇಹವನ್ನು ಆರೋಗ್ಯಕರವಾಗಿ ಇರಿಸಲು ಮತ್ತು ಫಿಟ್ ಆಗಿರಲು ವಿಭಿನ್ನ ಪೋಷಕಾಂಶಗಳು ಬೇಕು ಮತ್ತು ಒಂದು ರೀತಿಯ ಆಹಾರವೇ ಎಲ್ಲ ಪೌಷ್ಠಿಕಾಂಶ ಅಗತ್ಯಗಳನ್ನು ಪೂರೈಸಲಾಗದು. ಹೀಗಾಗಿ, ನಮ್ಮದೇಹಕ್ಕಾಗಿ ನಾವು ಸರಿಯಾದ ಅನುಪಾತದಲ್ಲಿ ವಿವಿಧ ಆಹಾರಗಳನ್ನು ಸೇವಿಸಬೇಕು. ನಮ್ಮ ದೇಹದ ಆರೋಗ್ಯ ನಿರ್ವಹಣೆಗೆ ಪ್ರತಿ ಪೌಷ್ಠಿಕಾಂಶವೂ ವಿಶಿಷ್ಟ ಪಾತ್ರವನ್ನು ನಿರ್ವಹಿಸಯತ್ತದೆ (ಉದಾ., ಕಾರ್ಬೋಹೈಡ್ರೇಟ್‌ಗಳು ತ್ವರಿತ ಚೈತನ್ಯವನ್ನು ನೀಡುತ್ತದೆ ಮತ್ತು ಪ್ರೊಟೀನ್‌ಗಳು ಬೆಳವಣಿಗೆಯಲ್ಲಿ ಸಹಾಯ ಮಾಡುತ್ತವೆ ಮತ್ತು ಅಂಗಾಂಶಗಳನ್ನು ದುರಸ್ತಿ ಮಾಡುತ್ತದೆ).
ಇದೇ ರೀತಿ, ನಮ್ಮ ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ನಮಗೆ ಸಮತೋಲಿತ ಹೂಡಿಕೆ ಪ್ರೊಫೈಲ್ ಅಗತ್ಯವಿದೆ. ಪೋರ್ಟ್‌ಫೋಲಿಯೋದಲ್ಲಿ ನಮಗೆ ನಮ್ಮ ಆಹಾರದಲ್ಲಿ ವಿವಿಧ ಪೌಷ್ಠಿಕಾಂಶಗಳ ವಿಭಿನ್ನ ರೀತಿಯ ಸ್ವತ್ತುಗಳ ಮಿಶ್ರಣ ಅಗತ್ಯವಿದೆ. ನಾವು ಹಣಕಾಸು ಸುರಕ್ಷತೆ ಮತ್ತು ಸಂಪತ್ತಿಗಾಗಿ ವಿಭಿನ್ನ ಸ್ವತ್ತುಗಳಾದ ಈಕ್ವಿಟಿಗಳು, ಫಿಕ್ಸೆಡ್ ಇನ್‌ಕಮ್, ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಂತಹವುಗಳಲ್ಲಿ ಹೂಡಿಕೆ ಮಾಡಬೇಕು. ಫಿಕ್ಸೆಡ್ ಆದಾಯ, ಬಾಂಡ್‌ಗಳು ಮತ್ತು ಹಣ ಮಾರುಕಟ್ಟೆ ಸಲಕರಣೆಗಳಂತಹ ಕೆಲವು ಸ್ವತ್ತು ವಿಭಾಗಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದು ವೈಯಕ್ತಿಕ ಹೂಡಿಕೆದಾರರಿಗೆ ಕಷ್ಟಕರವಾಗಬಹುದು. ಇದರ ಬದಲಿಗೆ, ಅವರು ಇಂತಹ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಅವು ಕಡಿಮೆ, ಆದರೆ ಸ್ಥಿರವಾದ ರಿಟರ್ನ್ಸ್ ನೀಡುತ್ತವೆ. ಈ ಮೂಲಕ ಅವು ಈಕ್ವಿಟಿ, ಚಿನ್ನ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಯ ಪೋರ್ಟ್‌ಫೋಲಿಯೋಗೆ ಸಮತೋಲನ ನೀಡುತ್ತವೆ.