ಇಂಡೆಕ್ಸ್ ಫಂಡ್ಗಳು ಪ್ಯಾಸಿವ್ ಮ್ಯೂಚುವಲ್ ಫಂಡ್ಗಳಾಗಿದ್ದು, ಇವು ಜನಪ್ರಿಯ ಮಾರ್ಕೆಟ್ ಇಂಡೈಸ್ಗಳನ್ನು ಅನುಕರಿಸುತ್ತವೆ. ಫಂಡ್ ಪೋರ್ಟ್ಫೋಲಿಯೋ ನಿರ್ಮಾಣದಲ್ಲಿ ಉದ್ಯಮಗಳು ಮತ್ತು ಸ್ಟಾಕ್ಗಳ ಆಯ್ಕೆಯಲ್ಲಿ ಸಕ್ರಿಯ ಪಾತ್ರವನ್ನು ಫಂಡ್ ಮ್ಯಾನೇಜರ್ ನಿರ್ವಹಿಸುವುದಿಲ್ಲ. ಆದರೆ ಆ ಇಂಡೆಕ್ಸ್ನಲ್ಲಿರುವ ಎಲ್ಲ ಸ್ಟಾಕ್ಗಳಲ್ಲೂ ಹೂಡಿಕೆ ಮಾಡಿರುತ್ತಾರೆ. ಫಂಡ್ನ ವೇಟೇಜ್ಗೂ ಇಂಡೆಕ್ಸ್ನಲ್ಲಿ ಪ್ರತಿ ಸ್ಟಾಕ್ನ ವೇಟೇಜ್ಗೂ ಹೋಲಿಕೆಯಾಗುತ್ತದೆ. ಇದು ಪ್ಯಾಸಿವ್ ಹೂಡಿಕೆ. ಅಂದರೆ ಪೋರ್ಫೋಲಿಯೋ ರೂಪಿಸುವಾಗ ಫಂಡ್ ಮ್ಯಾನೇಜರ್ ಸರಳವಾಗಿ ಇಂಡೆಕ್ಸ್ ಅನ್ನೇ ನಕಲು ಮಾಡುತ್ತಾರೆ ಮತ್ತು ಎಲ್ಲ ಸಮಯದಲ್ಲೂ ತಮ್ಮ ಇಂಡೆಕ್ಸ್ ಜೊತೆಗೆ ಸಿಂಕ್ ಆಗಿರುವಂತೆ ಪೋರ್ಟ್ಫೋಲಿಯೋವನ್ನು ನಿರ್ವಹಿಸುತ್ತಾರೆ.
ಇಂಡೆಕ್ಸ್ನಲ್ಲಿ ಸ್ಟಾಕ್ನ ತೂಕವು ಬದಲಾವಣೆಯಾದರೆ, ಫಂಡ್ ಮ್ಯಾನೇಜರ್ ಸ್ಟಾಕ್ನ ಯೂನಿಟ್ಗಳನ್ನು ಖರೀದಿ ಅಥವಾ ಮಾರಾಟ ಮಾಡಿ, ಇಂಡೆಕ್ಸ್ನಲ್ಲಿ ನಿಯೋಜಿಸಿದ ಪೋರ್ಟ್ಫೋಲಿಯೋದ ತೂಕವನ್ನು ನಿರ್ವಹಿಸುತ್ತಾರೆ. ಪ್ಯಾಸಿವ್ ನಿರ್ವಹಣೆಯನ್ನು ಮಾಡುವುದು ಸುಲಭವಾದರೂ, ಟ್ರ್ಯಾಕಿಂಗ್ ದೋಷದಿಂದಾಗಿ ಇಂಡೆಕ್ಸ್ನಷ್ಟೇ ರಿಟರ್ನ್ಸ್ ಅನ್ನು ಫಂಡ್ ಎಂದಿಗೂ ಕೊಡುತ್ತದೆ ಎಂದು ಹೇಳಲಾಗದು.
ಇಂಡೆಕ್ಸ್ನಲ್ಲಿರುವಷ್ಟೇ ಅನುಪಾತದ ಸೆಕ್ಯುರಿಟಿಗಳನ್ನು ನಿರ್ವಹಿಸುವುದು ಸುಲಭವಲ್ಲ ಮತ್ತು ಈ ನಿರ್ವಹಣೆಯ ವೇಳೆ ಫಂಡ್ಗೆ ವಹಿವಾಟು ವೆಚ್ಚ ಉಂಟಾಗುತ್ತದೆ. ಹೀಗಾಗಿ ಟ್ರ್ಯಾಕಿಂಗ್ ದೋಷ ಉಂಟಾಗುತ್ತದೆ. ಟ್ರ್ಯಾಕಿಂಗ್ ಹೊರತಾಗಿಯೂ, ಮ್ಯೂಚುವಲ್ ಫಂಡ್ಗಳು ಅಥವಾ ವೈಯಕ್ತಿಕ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವ ರಿಸ್ಕ್ ತೆಗೆದುಕೊಳ್ಳಲು ಬಯಸದೇ, ವಿಶಾಲ ಮಾರ್ಕೆಟ್ಗೆ ತೆರೆದುಕೊಂಡು ಲಾಭ ಮಾಡಿಕೊಳ್ಳುವವರಿಗೆ ಇಂಡೆಕ್ಸ್ ಫಂಡ್ಗಳು ಸೂಕ್ತವಾಗಿವೆ.