ನಿಮ್ಮ ಕೆವೈಸಿ ಪೂರ್ಣಗೊಂಡಿದ್ದರೆ ಆನ್ಲೈನ್ನಲ್ಲಾಗಲೀ ಅಥವಾ ಆಫ್ಲೈನ್ನಲ್ಲಾಗಲೀ ಮ್ಯೂಚುವಲ್ ಫಂಡ್ನಲ್ಲಿ ನೇರವಾಗಿ ಹೂಡಿಕೆ ಮಾಡಬಹುದು. ಆನ್ಲೈನ್ನಲ್ಲಿ ವಹಿವಾಟು ಮಾಡಲು ನಿಮಗೆ ಅನಾನುಕೂಲವಾಗಿದ್ದರೆ, ಸಮೀಪದ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಮ್ಯೂಚುವಲ್ ಫಂಡ್ ಸ್ಕೀಮ್ಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆನ್ಲೈನ್ ಅತ್ಯಂತ ಅನುಕೂಲವಾದ ವಿಧಾನವಾಗಿದ್ದು, ಇದರಲ್ಲಿ ನೀವು ಕಮಿಷನ್ಗಳನ್ನೂ ಉಳಿಸುತ್ತೀರಿ. ಫಂಡ್ನ ವೆಬ್ಸೈಟ್ ಅಥವಾ ಅದರ ಆರ್ಟಿಎ ಸೈಟ್ಗಳು ಅಥವಾ ಫಿನ್ಟೆಕ್ ಪ್ಲಾಟ್ಫಾರಂ ಮೂಲಕ ಹೂಡಿಕೆ ಮಾಡಬಹುದು. ಫಂಡ್ನ ವೆಬ್ಸೈಟ್ನಲ್ಲಿ ಹೂಡಿಕೆ ಮಾಡಿದರೆ ನೀವು ಹಲವು ಲಾಗಿನ್ ವಿವರಗಳನ್ನು ನಿರ್ವಹಿಸಬೇಕಾಗುತ್ತದೆ.
ಡೈರೆಕ್ಟ್ ಪ್ಲಾನ್ಗಳಲ್ಲಿ ಹೂಡಿಕೆ ಮಾಡಿದರೆ, ಹಣಕಾಸು ಪ್ಲಾನ್ ರಚನೆ ಮಾಡುವುದು, ನಿಮ್ಮ ಗುರಿಗಳಿಗೆ ಸೂಕ್ತವಾದ ಫಂಡ್ಗಳನ್ನು ಆಯ್ಕೆ ಮಾಡುವುದು, ಅಗತ್ಯವಿದ್ದರೆ ರಿಬ್ಯಾಲೆನ್ಸ್ ಮಾಡಲು ಪೋರ್ಟ್ಫೋಲಿಯೋವನ್ನು ಆಗಾಗ್ಗೆ ಮಾನಿಟರ್ ಮಾಡುವಂತಹ ಕೆಲಸಗಳ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕಾಗುತ್ತದೆ. ಸರಿಯಾದ ಫಂಡ್ಗಳನ್ನು ಆಯ್ಕೆ ಮಾಡಲು ಮತ್ತು ಪೋರ್ಟ್ಫೋಲಿಯೋ ನಿರ್ವಹಿಸಲು ಎಲ್ಲರಿಗೂ ಮ್ಯೂಚುವಲ್ ಫಂಡ್ಗಳಲ್ಲಿ ಸಾಕಷ್ಟು ತಿಳಿವಳಿಕೆ ಇರುವುದಿಲ್ಲ. ಹೀಗಾಗಿ, ಸುಲಭವಾಗಿ ನಿರ್ವಹಿಸಬಹುದಾದ ಹೂಡಿಕೆದಾರರನ್ನು ಮಾತ್ರ ಡೈರೆಕ್ಟ್ ಪ್ಲಾನ್ ಉದ್ದೇಶಿಸಿದೆ. ಮ್ಯೂಚುವಲ್ ಫಂಡ್ ಬಗ್ಗೆ ಸಾಕಷ್ಟು ತಿಳಿವಳಿಕೆ ಇಲ್ಲದವರು ವಿತರಕರ ಮೂಲಕ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ.