ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆದಾರರು ಯಾವ ರೀತಿಯ ರಿಸ್ಕ್‌ಗಳಿಗೆ ತೆರೆದುಕೊಳ್ಳುತ್ತಾರೆ?

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆದಾರರು ಯಾವ ರೀತಿಯ ರಿಸ್ಕ್‌ಗಳಿಗೆ ತೆರೆದುಕೊಳ್ಳುತ್ತಾರೆ?

ಸ್ಟಾಕ್‌ಗಳು, ಬಾಂಡ್‌ಗಳು, ಚಿನ್ನ ಅಥವಾ ಇತರ ಸ್ವತ್ತು ವಿಭಾಗಗಳಂತಹ ವಿಭಿನ್ನ ಮಾರ್ಕೆಟ್‌ಗಳಲ್ಲಿ ಟ್ರೇಡ್ ಮಾಡುವ ಸೆಕ್ಯುರಿಟಿಗಳಲ್ಲಿ ಮ್ಯೂಚುವಲ್‌ ಫಂಡ್ ಹೂಡಿಕೆ ಮಾಡುತ್ತದೆ. ಯಾವುದೇ ಟ್ರೇಡ್ ಮಾಡಬಹುದಾದ ಸೆಕ್ಯುರಿಟಿಯು ಮಾರ್ಕೆಟ್‌ ರಿಸ್ಕ್‌ಗೆ ತೆರೆದುಕೊಳ್ಳುತ್ತದೆ. ಅಂದರೆ ಸೆಕ್ಯುರಿಟಿಯ ಮೌಲ್ಯವು ಮಾರ್ಕೆಟ್‌ ಚಲನೆಯಿಂದ ಉಂಟಾದ ಫ್ಲಕ್ಚುವೇಶನ್‌ಗಳಿಗೆ ಒಳಪಟ್ಟಿರುತ್ತದೆ. 

ಬಡ್ಡಿ ದರದಲ್ಲಿನ ಬದಲಾವಣೆಯು ಬಾಂಡ್‌ಗಳ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ಇದು ಡೆಟ್‌ ಫಂಡ್‌ಗಳ ಎನ್‌ಎವಿಯ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ, ಡೆಟ್‌ ಫಂಡ್‌ಗಳು ಭಾರಿ ಬಡ್ಡಿ ದರ ರಿಸ್ಕ್ ಹೊಂದಿರುತ್ತವೆ. ಇವು ಕ್ರೆಡಿಟ್ ರಿಸ್ಕ್‌ಗೆ ತೆರೆದುಕೊಂಡಿರುತ್ತವೆ (ಬಾಂಡ್ ವಿತರಕರು ಡೀಫಾಲ್ಟಿಂಗ್‌ನ ರಿಸ್ಕ್‌). ಕೆಲವು ಆದಾಯ ಆಧರಿತ ಡೆಟ್ ಫಂಡ್‌ಗಳು ಹಣದುಬ್ಬರ ರಿಸ್ಕ್‌ಗೆ ತೆರೆದುಕೊಂಡಿರುತ್ತದೆ. ಅಂದರೆ ಅವು ಉತ್ಪಾದಿಸಿದ ರಿಟರ್ನ್‌ ಹೂಡಿಕೆದಾರರ ಅನುಭವಕ್ಕೆ ಬಂದ ಹಣದುಬ್ಬರಕ್ಕೆ ಪರಿಹಾರ ನೀಡದೇ ಇರಬಹುದು. 

ಈಕ್ವಿಟಿ ಫಂಡ್‌ಗಳು ಮಾರ್ಕೆಟ್‌ ರಿಸ್ಕ್ ಅನ್ನು ಎದುರಿಸುತ್ತವೆ. ಇವು ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುವ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಷೇರು ಬೆಲೆಗಳಲ್ಲಿನ ವ್ಯತ್ಯಾಸವು ಈ ಫಂಡ್‌ಗಳ ಎನ್‌ಎವಿಗೆ ಬಾಧಿಸುತ್ತದೆ.

ಕೆಲವು ಸೆಕ್ಯುರಿಟಿಗಳು ಮಾರ್ಕೆಟ್‌ನಲ್ಲಿ ಸಕ್ರಿಯವಾಗಿ ಟ್ರೇಡ್‌ ಆಗುತ್ತವೆ ಮತ್ತು ಇನ್ನು ಕೆಲವು ಟ್ರೇಡ್‌ ಆಗುವುದಿಲ್ಲ. ಸಕ್ರಿಯವಾಗಿ ಟ್ರೇಡ್‌ ಆಗದ ಸೆಕ್ಯುರಿಟಿಗಳಲ್ಲಿ ಮ್ಯೂಚುವಲ್‌ ಫಂಡ್‌ ನಿಮ್ಮ ಹಣವನ್ನು ಹೂಡಿಕೆ ಮಾಡಿದ್ದರೆ, ಸರಿಯಾದ ಸಮಯದಲ್ಲಿ ಸೂಕ್ತ ಬೆಲೆಯಲ್ಲಿ ಖರೀದಿ ಮಾಡಲು ಅಥವಾ ಮಾರಾಟ ಮಾಡಲು ಕಷ್ಟವಾಗಬಹುದು. ಇದು ಲಿಕ್ವಿಡಿಟಿ ರಿಸ್ಕ್ ಆಗಿದ್ದು, ಫಂಡ್‌ನ ಪೋರ್ಟ್‌ಫೋಲಿಯೋದ ವಹಿವಾಟು ವೆಚ್ಚವನ್ನು ಹೆಚ್ಚಿಸಿ ಫಂಡ್‌ನ ಎನ್ಎವಿ ಮೇಲೆ ಪರಿಣಾಮ ಬೀರುತ್ತದೆ.

ಹೀಗಾಗಿ, ಹೂಡಿಕೆ ಮಾಡಿರುವ ಅಸೆಟ್‌ನ ವಿಧವನ್ನು ಆಧರಿಸಿ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆಯ ರಿಸ್ಕ್‌ ಇರುತ್ತದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??