ಫ್ಯಾಕ್ಟ್ಶೀಟ್ ಎಂಬುದು ಅತ್ಯಂತ ಹೆಚ್ಚು ವಿಶ್ವಾಸಾರ್ಹ ಗೈಡ್ ಆಗಿದ್ದು, ಹೂಡಿಕೆದಾರರು ಸ್ಕೀಮ್ ಬಗ್ಗೆ ಒಂದೇ ಬಾರಿಗೆ ವಿವರವಾದ ಮಾಹಿತಿ ಪ್ರವೇಶಾವಕಾಶವನ್ನು ಪಡೆಯಬಹುದು. ವಿದ್ಯಾರ್ಥಿಯ ಮಾಸಿಕ ರಿಪೋರ್ಟ್ ಕಾರ್ಡ್ ಹೇಗೆ ಕಾಣುತ್ತದೆ ಎಂದು ನೀವು ನೋಡಿದ್ದೀರಾ? ಇದು ಮಗುವಿನ ಸಂಬಂಧಿತ ಅಂಶಗಳ ಅಕಾಡೆಮಿಕ್ ಕಾರ್ಯಕ್ಷಮತೆಯನ್ನು ಕವರ್ ಮಾಡುವುದರ ಜೊತೆಗೆ ಮಗುವಿನ ವರ್ತನೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಹಾಜರಾತಿ, ಶಿಸ್ತು ಮತ್ತು ಮಗುವಿನ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಎಲ್ಲವನ್ನೂ ಒಳಗೊಂಡಿರುತ್ತದೆ. ಕ್ಲಾಸ್ನ ಸರಾಸರಿಗೆ ಮಗುವಿನ ಕಾರ್ಯಕ್ಷಮತೆ ಹೋಲಿಕೆಯನ್ನೂ ರಿಪೋರ್ಟ್ ಕಾರ್ಡ್ ತೋರಿಸುತ್ತದೆ.
ಇದೇ ಸಂಗತಿ ಫ್ಯಾಕ್ಟ್ಶೀಟ್ನಲ್ಲೂ ನಡೆಯುತ್ತದೆ. ಹೂಡಿಕೆ ಉದ್ದೇಶ, ಬೆಂಚ್ಮಾರ್ಕ್, ಎಯುಎಂ, ಫಂಡ್ ಮ್ಯಾನೇಜರ್ಗಳು, ವೈಶಿಷ್ಟ್ಯಗಳಾದ ಲಭ್ಯ ಆಯ್ಕೆಗಳು, ಕನಿಷ್ಠ ಹೂಡಿಕೆ ಮೊತ್ತ, ಅನ್ವಯಿಕ ಎಕ್ಸಿಟ್ ಲೋಡ್ಗಳು ಮತ್ತು ವಿಭಿನ್ನ ಪ್ಲಾನ್ಗಳ ಎನ್ಎವಿಯಂತಹ ಸಂಭಾವ್ಯ ಅಥವಾ ಪ್ರಸ್ತುತ ಹೂಡಿಕೆದಾರರು ತಿಳಿಯಲೇಬೇಕಾದ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಫ್ಯಾಕ್ಟ್ಶೀಟ್ ನಂತರ ಪ್ರಮುಖ ಕಾರ್ಯಕ್ಷಮತೆ ಮತ್ತು ರಿಸ್ಕ್ ಮಾನದಂಡಗಳಾದ ಪ್ರಮಾಣಿತ ವೈವಿಧ್ಯ (ಅಸ್ಥಿರತೆಯ ಅಳತೆ), ಬೀಟಾ, ಶಾರ್ಪ್ ಅನುಪಾತ, ವಿಭಿನ್ನ ಪ್ಲಾನ್ಗಳ ವೆಚ್ಚ ಅನುಪಾತ ಮತ್ತು ಈಕ್ವಿಟಿ ಫಂಡ್ಗಳಿಗೆ ಪೋರ್ಟ್ಪೋಲಿಯೋ ಟರ್ನ್ಓವರ್ ಅನ್ನು ಒಳಗೊಂಡಿರುತ್ತದೆ ಮತ್ತು ಅವಧಿ, ಸರಾಸರಿ ಮೆಚ್ಯುರಿಟಿ ಮತ್ತು ಪೋರ್ಟ್ಫೋಲಿಯೋ ಯೀಲ್ಡ್ ಅನ್ನು ಡೆಟ್ ಫಂಡ್ಗಳಿಗೆ ಬಹಿರಂಗಗೊಳಿಸಲಾಗುತ್ತದೆ.
ವಿವಿಧ ವಲಯಗಳು ಮತ್ತು ಸೆಕ್ಯುರಿಟಿಗಳಲ್ಲಿ ಹಿಂದಿನ ತಿಂಗಳ ಪೋರ್ಟ್ಫೋಲಿಯೋ ಹೋಲ್ಡಿಂಗ್ಗಳನ್ನೂ ಫ್ಯಾಕ್ಟ್ಶೀಟ್ ಒಳಗೊಂಡಿರುತ್ತದೆ. ಇದು ಫಂಡ್ನ ಐತಿಹಾಸಿಕ ಕಾರ್ಯಕ್ಷಮತೆಯನ್ನು ತನ್ನ ಬೆಂಚ್ಮಾರ್ಕ್ಗೆ ಹೋಲಿಕೆಯಲ್ಲಿ ತೋರಿಸುತ್ತದೆ ಮತ್ತು ಫಂಡ್ನ ರಿಸ್ಕ್ ಮಟ್ಟವನ್ನು ನಿಗದಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹೂಡಿಕೆದಾರರಾಗಿ ನೀವು ತಿಳಿದಿರಬೇಕಾದ ಮಾಹಿತಿಯ ಪ್ರತಿ ಸಂಕೀರ್ಣ ಅಂಶವನ್ನೂ ಫ್ಯಾಕ್ಟ್ಶೀಟ್ ಒಳಗೊಂಡಿರುತ್ತದೆ.