ನಿಮ್ಮ ಆಯ್ಕೆಗಾಗಿ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಹೂಡಿಕೆ ಸ್ಕೀಮ್ ಗಳು

Video

ಮ್ಯೂಚುವಲ್‌ ಫಂಡ್‌ಗಳು ಅಲ್ಪಾವಧಿ ಅಥವಾ ದೀರ್ಘಾವಧಿಯ ಪೈಕಿ ಯಾವುದಕ್ಕೆ ಸೂಕ್ತ?

"ಮ್ಯೂಚುವಲ್‌ ಫಂಡ್‌ಗಳು ಅಲ್ಪಾವಧಿಗೆ ಉತ್ತಮ ಉಳಿತಾಯ ವಿಧಾನವಾಗಿರಬಹುದು."

"ನೀವು ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಸಹನೆ ಹೊಂದಿರಬೇಕು. ಇದು ಫಲಿತಾಂಶಗಳನ್ನು ನೀಡಲು ಸಮಯ ತೆಗೆದುಕೊಳ್ಳುತ್ತದೆ."

ಜನರಿಗೆ ಸಾಮಾನ್ಯವಾಗಿ ಈ ಮಾತು ಕಿವಿಗೆ ಬೀಳುತ್ತಲೇ ಇರುತ್ತದೆ. ಸಾಮಾನ್ಯವಾಗಿ ಇವೆರಡೂ ತದ್ವಿರುದ್ಧ.

ಹಾಗಾದರೆ ಯಾವ ಅವಧಿಗೆ ಮ್ಯೂಚುವಲ್‌ ಫಂಡ್‌ಗಳು ಸೂಕ್ತ? ಅಲ್ಪಾವಧಿಗೆ ಸೂಕ್ತವೇ ಅಥವಾ ದೀರ್ಘಾವಧಿಗೆ ಸೂಕ್ತವೇ?

ಇದು ನಮ್ಮ ಹೂಡಿಕೆಯ ಗುರಿಯನ್ನು ಅವಲಂಬಿಸಿರುತ್ತದೆ. ಅಷ್ಟೇ ಅಲ್ಲ, ಹಲವು ಗುರಿಗಳಿಗೆ ಕಾಲಾವಧಿಯೂ ಇರುತ್ತದೆ. ಅಲ್ಪಾವಧಿಗೆ ಸೂಕ್ತವಾದ ಹಲವು ಸ್ಕೀಮ್‌ಗಳಿವೆ. ಕೆಲವು ಸ್ಕೀಮ್‌ಗಳು ದೀರ್ಘಕಾಲಕ್ಕೆ ಸೂಕ್ತವಾಗಿವೆ. ಇನ್ನೂ ಕೆಲವು ಸ್ಕೀಮ್‌ಗಳು ಈ ಮಧ್ಯದ ಯಾವುದೇ ಅವಧಿಗೆ ಸೂಕ್ತವಾಗಿವೆ.

ನಿಮ್ಮ ಮ್ಯೂಚುವಲ್‌ ಫಂಡ್ ವಿತರಕರು ಅಥವಾ ನಿಮ್ಮ ಹೂಡಿಕೆ ಸಲಹೆಗಾರರ, ಸಲಹೆ ಪಡೆಯಿರಿ ಮತ್ತು ನಿಮ್ಮ ಹಣಕಾಸು ಗುರಿಗಳ ಬಗ್ಗೆ ಚರ್ಚೆ ನಡೆಸಿ ಮತ್ತು ನಂತರ ನೀವು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿ. ಉದಾಹರಣೆಗೆ,

  1. ಈಕ್ವಿಟಿ ಆಧರಿತ ಮ್ಯೂಚುವಲ್‌ ಫಂಡ್‌ಗಳು ದೀರ್ಘಾವಧಿಗೆ ಅಂದರೆ 5 ಹಾಗೂ ಅದಕ್ಕೂ ಹೆಚ್ಚು ವರ್ಷಗಳಿಗೆ ಸೂಕ್ತವಾಗಿವೆ.
  2. ಫಿಕ್ಸೆಡ್‌ ಇನ್‌ಕಮ್‌ ಆಧರಿತ ಮ್ಯೂಚುವಲ್‌ ಫಂಡ್‌ಗಳಾದ-
    1. ಲಿಕ್ವಿಡ್ ಫಂಡ್‌ಗಳು - ಅತ್ಯಂತ ಅಲ್ಪಾವಧಿಯಾದ 1 ವರ್ಷಕ್ಕಿಂತ ಕಡಿಮೆ ಸಮಯಕ್ಕೆ ಸೂಕ್ತವಾಗಿರುತ್ತವೆ.
    2. ಅಲ್ಪಾವಧಿ ಬಾಂಡ್ ಫಂಡ್‌ಗಳು ಮಧ್ಯಮ ಅವಧಿ ಅಂದರೆ 1 ರಿಂದ 3 ವರ್ಷಗಳಿಗೆ ಸೂಕ್ತ.
    3. ದೀರ್ಘಾವಧಿ ಬಾಂಡ್‌ ಫಂಡ್‌ಗಳು ದೀರ್ಘಾವಧಿಗೆ ಅಂದರೆ 3 ಅಥವಾ ಹೆಚ್ಚು ವರ್ಷಗಳಿಗೆ ಸೂಕ್ತವಾಗಿವೆ.
       

ನಮ್ಮ ವೆಬ್‌ಸೈಟ್‌ ಅನ್ನು ವಿವರವಾಗಿ ನೋಡುತ್ತಿದ್ದಂತೆಯೇ ವಿವಿಧ ರೀತಿಯ ಮ್ಯೂಚುವಲ್‌ ಫಂಡ್‌ಗಳ ಬಗ್ಗೆಯೂ ನೀವು ಹೆಚ್ಚು ತಿಳಿದುಕೊಳ್ಳುತ್ತೀರಿ. ನಿಮ್ಮ ಮ್ಯೂಚುಯಲ್ ಫಂಡ್ ವಿತರಕರು/ಹೂಡಿಕೆ ಸಲಹೆಗಾರರು ನಿಮ್ಮ ಗುರಿಗಳ ಪ್ರಕಾರ ಹೂಡಿಕೆ ಮಾಡಲು ಸರಿಯಾದ ರೀತಿಯ ಎಂ.ಎಫ್ ಅನ್ನು ಗುರುತಿಸಲು ಸಹ ನಿಮಗೆ ಸಹಾಯ ಮಾಡಬಹುದು!

437

ಮ್ಯೂಚುವಲ್‌ ಫಂಡ್‌ ಸೂಕ್ತವೇ??