ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ ನಂತರ ಹಣ ಕಳೆದುಕೊಳ್ಳುವ ಬಗ್ಗೆ ನಿಮಗೆ ಚಿಂತೆ ಇದೆಯೇ? ಅಷ್ಟಕ್ಕೂ, ನಿಮಗೆ ಅಗತ್ಯವಿದ್ದಾಗ ನಿಮ್ಮ ಹಣವನ್ನು ಹಿಂಪಡೆಯವ ಸಂಪೂರ್ಣ ಸ್ವಾತಂತ್ರ್ಯವನ್ನು ನೀವು ಹೊಂದಿದ್ದೀರಿ. ಕಠಿಣ ರಿಡೆಂಪ್ಷನ್ ಪ್ರಕ್ರಿಯೆಯನ್ನು ನಡೆಸಬೇಕಿರುವುದರಿಂದ ತಮ್ಮ ಹಣ ಬ್ಲಾಕ್ ಆಗಿದೆ ಎಂದು ಹಲವು ಹೂಡಿಕೆದಾರರು ಭಾವಿಸುತ್ತಾರೆ. ಮ್ಯೂಚುವಲ್ ಫಂಡ್ನಿಂದ ನಿಮ್ಮ ಹಣವನ್ನು ಹಿಂಪಡೆಯುವುದು ನಿಮ್ಮ ಬ್ಯಾಂಕ್ನಿಂದ ಹಣ ಹಿಂಪಡೆದಷ್ಟೇ ಸುಲಭವಾಗಿದೆ. ನೀವು ಮಾಡಬೇಕಾದ್ದಿಷ್ಟೇ, ನಿಮ್ಮ ಮ್ಯೂಚುವಲ್ ಫಂಡ್ ಖಾತೆಗೆ ಲಾಗಿನ್ ಮಾಡಿ, “ರಿಡೀಮ್” ಬಟನ್ ಕ್ಲಿಕ್ ಮಾಡಿದರೆ ಸಾಕು.
ನೀವು ನಿಮ್ಮ ಡಿಸ್ಟ್ರಿಬ್ಯೂಟರ್ ಮೂಲಕವೂ ನಿಮ್ಮ ವಿನಂತಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ರಿಡೆಂಪ್ಷನ್ ವಿನಂತಿಯನ್ನು ಸಲ್ಲಿಸಲು ಮ್ಯೂಚುವಲ್ ಫಂಡ್ ಕಚೇರಿಗೆ ಭೇಟಿ ನೀಡಬಹುದು. ನೀವು ಆನ್ಲೈನ್ನಲ್ಲಿ ವಿನಂತಿ ಮಾಡುತ್ತೀರಾ ಅಥವಾ ಭೌತಿಕ ಅರ್ಜಿಯ ಮೂಲಕ ವಿನಂತಿ ಮಾಡುತ್ತೀರಾ ಮತ್ತು ಯಾವ ರೀತಿಯ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುದನ್ನು ಆಧರಿಸಿ 3-4 ಕೆಲಸದ ದಿನಗಳಲ್ಲಿ ನಿಮ್ಮ ನೋಂದಾಯಿತ ಬ್ಯಾಂಕ್ಖಾತೆಗೆ ಹಣ ಕ್ರೆಡಿಟ್ ಆಗುತ್ತದೆ. ಓವರ್ನೈಟ್ ಅಥವಾ ಲಿಕ್ವಿಡ್ ಫಂಡ್ಗಳಾದಲ್ಲಿ, ಅದೇ ದಿನವೇ ನೀವು ಹಣವನ್ನು ಪಡೆಯಬಹುದು. ಯಾಕೆಂದರೆ, ಕೆಲವು ಎಎಂಸಿಗಳು ತಮ್ಮ ಹೂಡಿಕೆದಾರರಿಗೆ ರೂ. 50,000 ವರೆಗೆ ಇನ್ಸ್ಟಂಟ್ ರಿಡೆಂಪ್ಷನ್ ಸೌಲಭ್ಯವನ್ನು ಒದಗಿಸುತ್ತವೆ. ಕೆಲವು ದಿನಗಳು ಅಥವಾ ವಾರಗಳವರೆಗೆ ಹೆಚ್ಚುವರಿ ಹಣವನ್ನು ಇಡುವ ಉದ್ದೇಶಕ್ಕೆ ಈ ಫಂಡ್ಗಳನ್ನು ಬಳಸುವುದರಿಂದ, ಇನ್ಸ್ಟಂಟ್ ರಿಡೆಂಪ್ಷನ್ ಸೌಲಭ್ಯವು ತುರ್ತು ನಗದು ಅಗತ್ಯವನ್ನು ಪೂರೈಸಲು ಅನುವು ಮಾಡುತ್ತದೆ. ಇದೇ ವೇಳೆ ನಿಮ್ಮ ಹಣವು ಒಂದಷ್ಟು ರಿಟರ್ನ್ ಅನ್ನೂ ಗಳಿಸಿರುತ್ತದೆ. ಆದರೆ, ರಿಡೆಂಪ್ಷನ್ಗಳ ಮೇಲೆ ವಿಧಿಸಲಾಗುವ ಎಕ್ಸಿಟ್ ಲೋಡ್ಗಳ ಬಗ್ಗೆಯೂ ಗಮನ ಹರಿಸಬೇಕು.