ರೂಪಾಯಿ ವೆಚ್ಚ ಸರಾಸರಿ ಮಾಡುವುದು ಎಂದರೇನು?

Video

ನೀವು ನಗರದಲ್ಲಿ ಒಂದು ಸುತ್ತು ಹಾಕಿದಾಗ, ಕೆಲವು ಬಾರಿ ನಿಮಗೆ ಖಾಲಿ ರಸ್ತೆ ಸಿಗುತ್ತದೆ. ಆಗ ನೀವು ಗಂಟೆಗೆ 80 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು ಮತ್ತು ಟ್ರಾಫಿಕ್ ಅಥವಾ ಸ್ಪೀಡ್ ಬ್ರೇಕರ್ ಇದ್ದಾಗ ಗಂಟೆಗೆ 20 ಕಿ.ಮೀ ವೇಗದಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಂತಿಮವಾಗಿ, ನೀವು ಎಷ್ಟು ಬಾರಿ ನಿಧಾನವಾಗಿ ಪ್ರಯಾಣಿಸಬೇಕು ಅಥವಾ ವೇಗವಾಗಿ ಸಾಗಬೇಕು ಎಂಬುದನ್ನು ಅಧರಿಸಿ ಗಂಟೆಗೆ 45 ಕಿ.ಮೀ ಅಥವಾ ಗಂಟೆಗೆ 55 ಕಿ.ಮೀ ಸರಾಸರಿ ವೇಗವನ್ನು ನೀವು ಸಾಧಿಸುತ್ತೀರಿ.

ನಗರದಲ್ಲಿ ನೀವು ವೇಗವೂ ಅಲ್ಲದಂತೆ ನಿಧಾನವೂ ಅಲ್ಲದಂತೆ ಪ್ರಯಾಣ ಮಾಡುವ ಹಾಗೆ, ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಅತ್ಯಂತ ಆರಾಮವಾಗಿ ಮಾರುಕಟ್ಟೆಯ ಏಳು ಬೀಳುಗಳಲ್ಲಿ ನೀವು ಹೂಡಿಕೆ ಮಾಡಬಹುದು. ಮಾರುಕಟ್ಟೆಯ ಏಳುಬೀಳುಗಳನ್ನು ನಿಖರವಾಗಿ ಊಹಿಸುವುದು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತು. ಹೀಗಾಗಿ, ಮಾರುಕಟ್ಟೆಯ ಏಳು ಬೀಳುಗಳಲ್ಲಿ ಹೂಡಿಕೆ/ಖರೀದಿ ಮಾಡುವುದು ಉತ್ತಮ ವಿಧಾನವಾಗಿದೆ. ಇಂತಹ ಸನ್ನಿವೇಶದಲ್ಲಿ, ಹೂಡಿಕೆಗೆ ಶಿಸ್ತುಬದ್ಧವಾದ ವಿಧಾನವು ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವನ್ನು ಉತ್ತಮವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ದೀರ್ಘ ಸಮಯದಲ್ಲಿ ಪ್ರತಿ ತಿಂಗಳೂ ನಿಗದಿತ ದಿನಾಂಕದಂದು ಮ್ಯೂಚುವಲ್‌ ಫಂಡ್‌ನಲ್ಲಿ ನಿಗದಿತ ಮೊತ್ತವನ್ನು ನೀವು ಹೂಡಿಕೆ ಮಾಡಿದಾಗ, ನಿಮ್ಮ ಹೂಡಿಕೆಯ ಮೇಲೆ ಮಾರುಕಟ್ಟೆ ಅಸ್ಥಿರತೆಯ ಹೊರೆ ಕಡಿಮೆಯಾಗುತ್ತದೆ. ಯಾಕೆಂದರೆ, ಮಾರುಕಟ್ಟೆಯಲ್ಲಿ ಕುಸಿತ ಉಂಟಾದಾಗ ಹೆಚ್ಚು ಯುನಿಟ್‌ಗಳನ್ನು ಮತ್ತು ಮಾರುಕಟ್ಟೆ ಏರಿಕೆ ಕಂಡಾಗ ಅದೇ ಮೊತ್ತದಲ್ಲಿ ಕಡಿಮೆ ಯುನಿಟ್‌ಗಳನ್ನು ಖರೀದಿಸಿರುತ್ತೀರಿ. ಹೀಗಾಗಿ, ನೀವು ಹೊಂದಿರುವ ಒಟ್ಟು ಯುನಿಟ್‌ಗಳ ಸರಾಸರಿ ಯುನಿಟ್ ವೆಚ್ಚವು, ಈ ಅವಧಿಯಲ್ಲಿ ಮಾರುಕಟ್ಟೆ ಯಾವ ಕಡೆಗೆ ಸಾಗಿದರೂ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ಎಸ್‌ಐಪಿಗಳಲ್ಲಿ ರೂಪಾಯಿ ವೆಚ್ಚ ಸರಾಸರಿ ಮಾಡುವಿಕೆಯ ಮೂಲತತ್ವ ಇದಾಗಿದೆ.

ದೀರ್ಘಕಾಲದವರೆಗೆ ಅಂದರೆ ಐದು ವರ್ಷಗಳು ಅಥವಾ ಹೆಚ್ಚು ಕಾಲದವರೆಗೆ ನೀವು ಎಸ್‌ಐಪಿ ಹೂಡಿಕೆಯನ್ನು ಮುಂದುವರಿಸಿದರೆ, ಮಾರುಕಟ್ಟೆ ಏರಿಕೆ ಕಂಡರೆ, ಎನ್‌ಎವಿಗಿಂತ ಯುನಿಟ್‌ಗಳ ಸರಾಸರಿ ವೆಚ್ಚ ಕಡಿಮೆ ಇರುತ್ತದೆ.

ಸಂಚಯಗೊಳಿಸುವ ಶಕ್ತಿಯನ್ನು ಒದಗಿಸುವುದರ ಜೊತೆಗೆ ರೂಪಾಯಿ ವೆಚ್ಚ ಸರಾಸರಿ ಪ್ರಯೋಜನಗಳನ್ನು ಎಸ್‌ಐಪಿಗಳು ಒದಗಿಸುತ್ತವೆ.
ಸಂಚಯಗೊಳಿಸುವ ಶಕ್ತಿಯು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಯಾಕೆಂದರೆ, ನಿಮ್ಮ ಹೂಡಿಕೆ ದ್ವಿಗುಣಗೊಳ್ಳಲು ಹೆಚ್ಚು ಅವಕಾಶ ಸಿಗುತ್ತದೆ ಮತ್ತು ನಿಮ್ಮ ಜೇಬಿಗೆ ತುಂಬಾ ಹೊರೆಯಾಗದೇ ಸಂಪತ್ತು ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??