ಸ್ಮಾರ್ಟ್‌ ಗೋಲ್‌ ಕ್ಯಾಲ್ಕುಲೇಟರ್

ನಿಮ್ಮ ಪ್ರಸ್ತುತ ಹೂಡಿಕೆಯನ್ನು ಪರಿಗಣಿಸಿ, SIP ಅಥವಾ ಒಟ್ಟಾರೆ ಮೊತ್ತದ
ಅಗತ್ಯವನ್ನು ಲೆಕ್ಕ ಮಾಡಿ ನಿಮ್ಮ ಹಣಕಾಸಿನ ಗುರಿಯನ್ನು ಯೋಜಿಸಿ.

ಟಾರ್ಗೆಟ್ ಮೊತ್ತ
ವರ್ಷಗಳು
%
ಹೂಡಿಕೆ ಮಾಡಿದ ಮೊತ್ತದ ಭವಿಷ್ಯದ ಮೌಲ್ಯ ₹54.74 ಲಕ್ಷ
ನಿಮ್ಮ ಗುರಿಯನ್ನು ತಲುಪಲು ಬಾಕಿ ಇರುವ ಮೊತ್ತ ₹45.26 ಲಕ್ಷ
ಊಹಿಸಿದ ರಿಟರ್ನ್‌ ದರ %
ಮಾಸಿಕ SIP ನಿವೇಶ ಮಾಡಬೇಕಾದ ಮೊತ್ತ ₹9,060.48
ಟಾರ್ಗೆಟ್ ಮೊತ್ತ
ವರ್ಷಗಳು
%
ಎಸ್‌ಐಪಿ ಹೂಡಿಕೆಯ ಅಂತಿಮ ಮೌಲ್ಯ ₹49.96 ಲಕ್ಷ
ನಿಮ್ಮ ಗುರಿಯನ್ನು ತಲುಪಲು ಬಾಕಿ ಇರುವ ಮೊತ್ತ ₹50.04 ಲಕ್ಷ
ನಿರೀಕ್ಷಿತ ರಿಟರ್ನ್‌ ದರ %
ಒಟ್ಟಾರೆಯಾಗಿ ಹೂಡಿಕೆ ಮಾಡಬೇಕಿರುವ ಮೊತ್ತ ₹9.14 ಲಕ್ಷ

ಹಕ್ಕುಹೇಳಿಕೆ:

ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.

ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿನ ಪ್ರತಿ ಅಸೆಟ್ ಕ್ಲಾಸ್‌ನಲ್ಲಿ ಒಂದು ಹಂತದ ರಿಸ್ಕ್‌ ಇರುತ್ತದೆ.

ನಿಮ್ಮ SIP ಮತ್ತು ಒಟ್ಟು ಮೊತ್ತದ ಹೂಡಿಕೆಯ ಭವಿಷ್ಯದ ಮೌಲ್ಯವನ್ನು ನಿರ್ಧಾರ ಮಾಡುವುದಕ್ಕೆ ಆನ್‌ಲೈನ್ ಕ್ಯಾಲ್ಕುಲೇಟರ್ ಒಂದು ಅಂದಾಜು ಮಾಡುವ ವಿಧಾನ. ಯಾವುದೇ ಹೂಡಿಕೆಯ ಭವಿಷ್ಯದ ರಿಟರ್ನ್‌ ಅಥವಾ ಪರ್ಫಾರ್ಮೆನ್ಸ್ ಅನ್ನು ಈ ಕ್ಯಾಲ್ಕುಲೇಟರ್ ನೀಡುವುದಿಲ್ಲ ಮತ್ತು ನಿಜವಾದ ಫಲಿತಾಂಶಗಳು ಮಾರುಕಟ್ಟೆ ಸ್ಥಿತಿಗತಿಗಳು, ತೆರಿಗೆ ಕಾನೂನುಗಳು ಮತ್ತು ಇತರ ಅಂಶಗಳನ್ನು ಆಧರಿಸಿ ಬದಲಾಗಬಹುದು.

ರಿಟರ್ನ್ಸ್‌ ಮೇಲೆ ಬಾಧಿಸಬಹುದಾದ, ಹೂಡಿಕೆಗೆ ಸಂಬಂಧಿಸಿದ ಎಲ್ಲ ಫೀಗಳು, ಶುಲ್ಕಗಳು ಮತ್ತು ವೆಚ್ಚಗಳನ್ನು ಪರಿಗಣಿಸದೇ ಇರಬಹುದು.

ನಿಮ್ಮದೇ ವಿಶ್ಲೇಷಣೆಯನ್ನು ಮಾಡುವ ಅಥವಾ ನಿರ್ಧಾರಕ್ಕೆ ಬರುವುದಕ್ಕೂ ಮೊದಲು ಹಣಕಾಸು ಸಲಹೆಗಾರರ ನೆರವನ್ನು ಪಡೆಯುವುದು ಸೂಕ್ತವಾಗಿದೆ.

ಸ್ಮಾರ್ಟ್ ಗೋಲ್ ಕ್ಯಾಲ್ಕುಲೇಟರ್ ಎಂದರೇನು?

ಒಟ್ಟು ಮೊತ್ತ ಅಥವಾ SIP ಮೂಲಕ ಅಥವಾ ಇವೆರಡರ ಸಂಯೋಜನೆಯ ಮೂಲಕ ಎಷ್ಟು ಹಣವನ್ನು ನೀವು ಹೂಡಿಕೆ ಮಾಡಿ, ನೀವು ನಿರೀಕ್ಷಿಸಿದ ಕಾಲಾವಧಿಯಲ್ಲಿ ನೀವು ಗುರಿ ಇಟ್ಟಿರುವ ನಿಧಿಯನ್ನು ಕ್ರೋಢೀಕರಿಸಬಹುದು ಎಂಬುದನ್ನು ನಿರ್ಧಾರ ಮಾಡಲು ನಿಮಗೆ ಸಹಾಯ ಮಾಡುವ ಪರಿಕರವು ಸ್ಮಾರ್ಟ್‌ ಗೋಲ್ ಕ್ಯಾಲ್ಕುಲೇಟರ್ ಆಗಿದೆ.

ನೀವು ಗುರಿ ಹಾಕಿಕೊಂಡಿರುವ ಮೊತ್ತ, ಹೂಡಿಕೆ ಅವಧಿ ಮತ್ತು ನಿರೀಕ್ಷಿತ ರಿಟರ್ನ್‌ಗಳಂತಹ ಕೆಲವು ಅಗತ್ಯ ವಿವರಗಳನ್ನು ಒದಗಿಸುವ ಮೂಲಕ, ಒಟ್ಟು ಮೊತ್ತ ಮತ್ತು SIP ಹೂಡಿಕೆಗಳ ಸೂಕ್ತ ನಿಯೋಜನೆಯನ್ನು ಕ್ಯಾಲ್ಕುಲೇಟರ್ ಲೆಕ್ಕ ಮಾಡುತ್ತದೆ.

ಸ್ಮಾರ್ಟ್ ಗೋಲ್ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?

ಸ್ಮಾರ್ಟ್ ಗೋಲ್ ಕ್ಯಾಲ್ಕುಲೇಟರ್ ಅನ್ನು ದಕ್ಷವಾಗಿ ಬಳಸಲು, ನಿಮ್ಮ ಹೂಡಿಕೆ ಯೋಜನೆಯ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನೀವು ಒದಗಿಸಬೇಕು:

  • ಟಾರ್ಗೆಟ್ ಮೊತ್ತ: ನಿಮ್ಮ ಹೂಡಿಕೆಯ ಮೂಲಕ ನೀವು ಕ್ರೋಢೀಕರಿಸಲು ಬಯಸುವ ಟಾರ್ಗೆಟ್ ಮೊತ್ತವನ್ನು ನಮೂದಿಸಿ. ಹೂಡಿಕೆ ಅವಧಿ: ನಿಮ್ಮ ಹಣಕಾಸು ಗುರಿಯನ್ನು ತಲುಪುವ ಕಾಲಾವಧಿಯನ್ನು ನಮೂದಿಸಿ.
  • ಒಟ್ಟಾರೆ ಮೊತ್ತ: ಒಂದು ಬಾರಿಯ ಒಟ್ಟು ಹೂಡಿಕೆಯನ್ನು ಮಾಡಲು ನೀವು ಯೋಜಿಸಿದರೆ (ಮತ್ತು ಹೂಡಿಕೆ ಮಾಡಬೇಕಿರುವ SIP ಮೊತ್ತವನ್ನು ಕಂಡುಕೊಳ್ಳಲು ನೀವು ಬಯಸಿದರೆ), ಆರಂಭದಲ್ಲಿ ನೀವು ಹೂಡಿಕೆ ಮಾಡಲು ಉದ್ದೇಶಿಸಿದ ಮೊತ್ತವನ್ನು ನಮೂದಿಸಿ.
  • SIP ಮೊತ್ತ:ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ ರೆಗ್ಯುಲರ್ ಹೂಡಿಕೆ ಮಾಡಲು ನೀವು ಬಯಸಿದರೆ, (ನೀವು ಹೂಡಿಕೆ ಮಾಡಬೇಕಿರುವ ಒಟ್ಟು ಮೊತ್ವನ್ನು ಕಂಡುಕೊಳ್ಳಲು ಬಯಸಿದರೆ) ಕಾಲಕಾಲಕ್ಕೆ ನೀವು ಮಾಡುವ ಹೂಡಿಕೆಯ ಮೊತ್ತವನ್ನು ನಮೂದಿಸಿ.
  • ನಿರೀಕ್ಷಿತ ರಿಟರ್ನ್‌ ದರ: ನಿಮ್ಮ ಹೂಡಿಕೆಯ ಮೇಲೆ ನೀವು ನಿರೀಕ್ಷಿಸುವ ವಾರ್ಷಿಕ ಸರಾಸರಿ ಅಂದಾಜು ರಿಟರ್ನ್ ದರವನ್ನು ಆಯ್ಕೆ ಮಾಡಿ.

ಈ ವಿವರಗಳನ್ನು ನೀವು ನಮೂದಿಸಿದ ನಂತರ, ಒಟ್ಟಾರೆಯಾಗಿ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಮತ್ತು ನೀವು ಆಯ್ಕೆ ಮಾಡಿದ ಕಾಲಾವಧಿಯೊಳಗೆ ನೀವು ನಿರೀಕ್ಷಿಸಿದ ಹಣಕಾಸು ಗುರಿಯನ್ನು ತಲುಪಲು SIP ಮೂಲಕ ನಿಯತವಾಗಿ ಎಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಎಂಬುದನ್ನು ಕ್ಯಾಲ್ಕುಲೇಟರ್ ಲೆಕ್ಕ ಮಾಡುತ್ತದೆ.

ಸ್ಮಾರ್ಟ್ ಗೋಲ್ ಕ್ಯಾಲಕ್ಯುಲೇಟರ್ ಅನ್ನು ಅರ್ಥ ಮಾಡಿಕೊಳ್ಳುವುದು

ಈ ಕ್ಯಾಲ್ಕುಲೇಟರ್ ಕಾರ್ಯನಿರ್ವಹಣೆಯನ್ನು ಚಿತ್ರಿಸಲು, ಉದಾಹರಣೆಯನ್ನು ನೋಡೋಣ.

ನೀವು 1 ಕೋಟಿ ರೂ. ನಿವೃತ್ತಿ ಗುರಿಯನ್ನು ಹೊಂದಿದ್ದೀರಿ ಎಂದು ಊಹಿಸೋಣ. ಮುಂದಿನ ತಿಂಗಳು, ನಿಮಗೆ 5 ಲಕ್ಷ ರೂ. ಬೋನಸ್ ಸಿಗುತ್ತದೆ ಮತ್ತು ಈ ಮೊತ್ತವನ್ನು ಬಳಸಿ ನೀವು ನಿಮ್ಮ ನಿವೃತ್ತಿಗಾಗಿ ಉಳಿತಾಯ ಮಾಡಲು ಬಯಸಿದ್ದೀರಿ. ಆದರೆ, ನಿವೃತ್ತಿಗೆ ನಿಮ್ಮ ಬಳಿ 15 ವರ್ಷಗಳು ಮಾತ್ರ ಇದೆ ಎಂದು ಪರಿಗಣಿಸಿದರೆ, ನಿಮ್ಮ ಗುರಿಯನ್ನು ಸಾಧಿಸಲು ಒಟ್ಟು ಮೊತ್ತ ಮಾತ್ರ ಸಾಲುವುದಿಲ್ಲ ಎಂದು ನಿಮಗೆ ತಿಳಿದಿದೆ. ನಿಮಗೆ ಇನ್ನೂ ಹೆಚ್ಚಿನ ಹೂಡಿಕೆ ಮಾಡಬೇಕಿದೆ ಎಂದು ತಿಳಿದಿದೆ. ಆದರೆ, ಇನ್ನೊಂದು ಒಟ್ಟು ಮೊತ್ತದ ಹೂಡಿಕೆ ಮಾಡಲು ಸಾಧ್ಯವಿಲ್ಲ. ಖುಷಿಯ ಸುದ್ದಿಯೇನೆಂದರೆ, ನೀವು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಆಯ್ಕೆ ಮಾಡಿಕೊಳ್ಳಬಹುದು ಮತ್ತು ತಿಂಗಳದ ಆಧಾರದಲ್ಲಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು.

ಈ ಉದ್ಭವಿಸುವ ಪ್ರಶ್ನೆಯೇನೆಂದರೆ: ನಿಮ್ಮ ನಿವೃತ್ತಿ ಗುರಿಯನ್ನು ಸಾಧಿಸಲು ಪ್ರತಿ ತಿಂಗಳು ನೀವು ಎಷ್ಟು ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಬೇಕು?

ನಿಮ್ಮ ಗುರಿ 1 ಕೋಟಿ ರೂ. ಕ್ರೋಢೀಕರಿಸುವುದು. 15 ವರ್ಷಗಳಿಗೆ 5 ಲಕ್ಷ ರೂ. ಒಟ್ಟು ಮೊತ್ತವನ್ನು ನೀವು ಹೂಡಿಕೆ ಮಾಡಿದ್ದೀರಿ. ಇದರಲ್ಲಿ ನೀವು 12% ರಿಟರ್ನ್‌ ನಿರೀಕ್ಷಿಸಿದ್ದೀರಿ. ಆದರೆ, ನಿಮ್ಮ ಪ್ರಸ್ತುತ ಹೂಡಿಕೆಯನ್ನು ಆಧರಿಸಿ ಅಂತಿಮ ಮೌಲ್ಯ ರೂ. 27,36,782.88 ಎಂದು ಕ್ಯಾಲ್ಕುಲೇಟರ್ ಲೆಕ್ಕ ಮಾಡಿದ್ದು, ನಿಮಗೆ ರೂ. 72,63,217.12 ಕಡಿಮೆ ಇದೆ.

ಈಗ, ಮಾಸಿಕ SIP ಹೂಡಿಕೆಗಳ ಮೂಲಕ ಈ ಕೊರತೆಯನ್ನು ನೀಗಿಸುವುದು ಹೇಗೆ ಎಂದು ನೋಡೋಣ. ಹೂಡಿಕೆ ಸ್ಕೀಮ್‌ ಬಹುತೇಕ ಹಾಗೆಯೇ ಇರುತ್ತದೆ. ಅಂದರೆ, 12% ರಿಟರ್ನ್‌ ನಿರೀಕ್ಷೆ ಹಾಗೆಯೇ ಇರುತ್ತದೆ.

ಕ್ಯಾಲ್ಕುಲೇಟರ್ ಗೆ ನೀವು ಈ ಸಂಖ್ಯೆಯನ್ನು ನಮೂದಿಸಿದಾಗ, ನಿರೀಕ್ಷಿಸಿದ ಗುರಿಯನ್ನು ನೀವು ತಲುಪುವುದಕ್ಕೆ ರೂ. 14,539 ಮಾಸಿಕ SIP ಹೂಡಿಕೆ ಮಾಡಬೇಕು ಎಂಬುದನ್ನು ಇದು ತಿಳಿಸುತ್ತದೆ.

ಇದೇ ರೀತಿ, SIP ಮೂಲಕ ಹೂಡಿಕೆ ಮಾಡುತ್ತಿದ್ದು, ನಿಮ್ಮ ಟಾರ್ಗೆಟ್ ಗುರಿಯನ್ನು ಸಾಧಿಸುವುದು ಕಷ್ಟ ಎಂದು ನಿಮಗೆ ಅನಿಸಿದರೆ, ಒಂದು ಒಟ್ಟು ಮೊತ್ತವನ್ನು ಹೂಡಿಕೆ ನಿಮ್ಮ ನಿವೃತ್ತಿ ಹೂಡಿಕೆಗೆ ಮಾಡಬಹುದು. ಕ್ಯಾಲ್ಕುಲೇಟರ್ ಗೆ ನೀವು ಈ ಎಲ್ಲ ಮೊತ್ತವನ್ನು ನಮೂದಿಸಿದಾಗ, ಸರಿಯಾದ ಸಮಯಕ್ಕೆ ನೀವು ನಿಮ್ಮ ಗುರಿಯನ್ನು ತಲುಪುತ್ತೀರಿ ಎಂಬುದನ್ನು ಖಚಿತಪಡಿಸಲು ನೀವು ನಿರೀಕ್ಷಿಸಿದ ಅವಧಿಗೆ ಹೂಡಿಕೆ ಮಾಡಬೇಕಿರುವ ಹೆಚ್ಚುವರಿ ಒಟ್ಟು ಮೊತ್ತವನ್ನು ನಿರ್ಧಾರ ಮಾಡಲು ಇದು ಸಹಾಯ ಮಾಡುತ್ತದೆ.

ಹಕ್ಕುಹೇಳಿಕೆ:

1. ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.

2. ಮ್ಯೂಚುವಲ್‌ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.

3. ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.