ಡೈನಾಮಿಕ್ ಬಾಂಡ್ ಫಂಡ್ಸ್‌ ಎಂದರೇನು?

ಡೈನಾಮಿಕ್ ಬಾಂಡ್ ಫಂಡ್ಸ್‌ ಎಂದರೇನು? zoom-icon

ಡೈನಾಮಿಕ್ ಬಾಂಡ್ ಫಂಡ್ಸ್‌ ಡೆಟ್ ಫಂಡ್‌ಗಳ ವಿಭಾಗಕ್ಕೆ ಒಳಪಟ್ಟಿದ್ದು, ಹೂಡಿಕೆ ಅವಧಿಯಲ್ಲಿ ನಿರ್ವಹಣೆಯ ಫ್ಲೆಕ್ಸಿಬಿಲಿಟಿಗೆ ಇವು ಹೆಸರಾಗಿವೆ. ರಿಟರ್ನ್ಸ್ ಅನ್ನು ಹೆಚ್ಚಿಸುವ ಅವಕಾಶವಿದ್ದಾಗ ಬಡ್ಡಿ ದರದಲ್ಲಿ ಆಗುವ ಬದಲಾವಣೆಯನ್ನು ಬಳಸಿಕೊಳ್ಳುವುದೇ ಇವುಗಳ ಪ್ರಾಥಮಿಕ ಉದ್ದೇಶವಾಗಿದೆ. ಆಗಿನ ಸಮಯದ ಬಡ್ಡಿ ದರದ ಟ್ರೆಂಡ್‌ಗಳಿಗೆ ಅನುಗುಣವಾಗಿ ಫಂಡ್‌ನ ಪೋರ್ಟ್‌ಫೋಲಿಯೋದಲ್ಲಿ ಬಾಂಡ್‌ಗಳ ಅವಧಿಯನ್ನು ಹೊಂದಾಣಿಕೆ ಮಾಡುವ ಮೂಲಕ ಫಂಡ್ ಮ್ಯಾನೇಜರ್‌ಗಳು ಇದನ್ನು ಸಾಧಿಸುತ್ತಾರೆ. ಮಾರ್ಕೆಟ್ ಡೈನಾಮಿಕ್ಸ್ ಮತ್ತು ಬಡ್ಡಿ ದರ ಏರಿಳಿಕೆಗೆ ಅನುಗುಣವಾಗಿ ವಿವಿಧ ರೀತಿಯ ಬಾಂಡ್‌ಗಳು, ಪಕ್ವತೆಗಳು ಮತ್ತು ಕ್ರೆಡಿಟ್ ಕ್ವಾಲಿಟಿಗಳ ಮಧ್ಯೆ ಬದಲಾವಣೆ ಮಾಡುವ ಸಾಮರ್ಥ್ಯವನ್ನು ಡೈನಾಮಿಕ್ ಬಾಂಡ್ ಫಂಡ್‌ ಹೊಂದಿರುತ್ತವೆ.


ಮುಂದುವರಿದು, ಬಡ್ಡಿ ದರದ ವಿಷಯದಲ್ಲಿ ಫಂಡ್ ಮ್ಯಾನೇಜರ್‌ನ ಮುನ್ನೋಟವನ್ನು ಆಧರಿಸಿ ತಮ್ಮ ಪೋರ್ಟ್‌ಫೋಲಿಯೋದ ಅವಧಿಯನ್ನು ಡೈನಾಮಿಕ್ ಬಾಂಡ್ ಫಂಡ್‌ಗಳು ಅಳವಡಿಸಿಕೊಳ್ಳುತ್ತವೆ. ವಿವಿಧ ಅಲ್ಪಾವಧಿ ಕಾರ್ಯಕ್ಷಮತೆಗೆ ಕಾರಣವಾಗುವ ವಿಸ್ತರಿಸಿದ ಅವಧಿಗಳೊಂದಿಗೆ ಪ್ರೊಫೈಲ್‌ಗಳಿಗೆ ಈ ಹೊಂದಾಣಿಕೆಗಳು ಸಾಗುತ್ತವೆ. ಆದಾಗ್ಯೂ, ವಿಸ್ತರಿಸಿದ ಅವಧಿಯಲ್ಲಿ ಈ ಫಂಡ್‌ಗಳು ವಿವಿಧ ಬಡ್ಡಿ ದರ ಆವರ್ತನಗಳಿಗೆ ಹೊಂದಿಕೊಳ್ಳುತ್ತವೆ ಮತ್ತು ಸಂಭಾವ್ಯವಾಗಿ ಅಧಿಕ ರಿಟರ್ನ್ಸ್ ಅನ್ನು ಇವು ನೀಡುತ್ತವೆ. ನೀವು ಡೈನಾಮಿಕ್ ಬಾಂಡ್‌ಗಳನ್ನು ಅದರ ಪ್ರಾಥಮಿಕ ಗುಣಲಕ್ಷಣಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು.


ರಿಸ್ಕ್: ಡೈನಾಮಿಕ್ ಬಾಂಡ್‌ಗಳು ಸಾಮಾನ್ಯವಾಗಿ ಮಧ್ಯಮ ರಿಸ್ಕ್‌ ವ್ಯಾಪ್ತಿಗೆ ಒಳಪಡುತ್ತವೆ.

ಬಡ್ಡಿ ದರ: ಬಡ್ಡಿ ದರಕ್ಕೆ ಬಾಂಡ್‌ ಬೆಲೆಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಬಡ್ಡಿ ದರ ಏರಿದಾಗ ಸಾಮಾನ್ಯವಾಗಿ ಬಾಂಡ್‌ ಬೆಲೆಗಳು ಇಳಿಯುತ್ತವೆ ಮತ್ತು ಬಡ್ಡಿ ದರ ಇಳಿದಾಗ ಬಾಂಡ್ ಬೆಲೆಗಳು ಏರುತ್ತವೆ.


ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285

ಮ್ಯೂಚುವಲ್‌ ಫಂಡ್‌ ಸೂಕ್ತವೇ??