ಮನಿ ಮಾರ್ಕೆಟ್ ಫಂಡ್ ಎಂದರೇನು?

ಮನಿ ಮಾರ್ಕೆಟ್ ಫಂಡ್ ಎಂದರೇನು? zoom-icon

ಮನಿ ಮಾರ್ಕೆಟ್ ಫಂಡ್‌ಗಳು ಸಾಮಾನ್ಯವಾಗಿ ಒಂದು ವರ್ಷದಲ್ಲಿ ಮೆಚ್ಯೂರ್ ಆಗುವ ಮನಿ ಮಾರ್ಕೆಟ್ ಸಲಕರಣಗಳಲ್ಲಿ ಪ್ರಾಥಮಿಕವಾಗಿ ಹೂಡಿಕೆ ಮಾಡುವ ಒಂದು ರೀತಿಯ ಮ್ಯೂಚುವಲ್ ಫಂಡ್ ಆಗಿವೆ. ಮನಿ ಮಾರ್ಕೆಟ್ ಎಂದರೆ ಅತ್ಯಂತ ಅಲ್ಪಾವಧಿ ಫಿಕ್ಸೆಡ್ ಆದಾಯದ ಸಲಕರಣೆಗಳನ್ನು ನಿರ್ವಹಣೆ ಮಾಡುವ ಹಣಕಾಸು ಮಾರ್ಕೆಟ್‌ ಎಂದರ್ಥ. ಮನಿ ಮಾರ್ಕೆಟ್‌ ಫಂಡ್‌ಗಳು ಸಾಮಾನ್ಯವಾಗಿ ಬ್ಯಾಂಕ್‌ಗಳು, ಸಾಂಸ್ಥಿಕ ಹೂಡಿಕೆದಾರರು, ಕಾರ್ಪೊರೇಶನ್‌ಗಳು, ಇತರ ಹಣಕಾಸು ಸಂಸ್ಥೆಗಳು ಮತ್ತು ಇತರೆ ಆಗಿವೆ. 

ಮನಿ ಮಾರ್ಕೆಟ್‌ ಫಂಡ್ ಎಂಬುದು ನಿರ್ದಿಷ್ಟವಾಗಿ ಅಲ್ಪಾವಧಿ ಹೂಡಿಕೆ, ಅಧಿಕ ನಗದೀಕರಣ, ಕಡಿಮೆ ಬಡ್ಡಿ ದರಗಳು ಮತ್ತು ತುಲನಾತ್ಮಕವಾಗಿ ಕಡಿಮೆ ಯೀಲ್ಡ್‌ ಅನ್ನು ಹೊಂದಿರುತ್ತವೆ. 

ಸೆಕ್ಯುರಿಟಿಗಳಲ್ಲಿ 1 ವರ್ಷ ಅಥವಾ ಕಡಿಮೆ ಅವಧಿಗೆ ಮನಿ ಮಾರ್ಕೆಟ್ ಫಂಡ್‌ಗಳು ಹೂಡಿಕೆ ಮಾಡುವುದರಿಂದ, ಉತ್ತಮ ರಿಟರ್ನ್ಸ್ ಪಡೆಯಲು ಮತ್ತು ರಿಸ್ಕ್‌ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವಧಿಯನ್ನು ಅವು ಬದಲಾವಣೆ ಮಾಡುತ್ತಲೇ ಇರುತ್ತವೆ. 

ಅಷ್ಟಕ್ಕೂ, ಈ ಫಂಡ್‌ಗಳು ಬೇರೆ ಯಾವುದೇ ಇತರ ಮ್ಯೂಚುವಲ್ ಫಂಡ್‌ನಂತೆಯೇ ಕೆಲ ಸಮಾಡುತ್ತವೆ. ಆದರೆ, ಸಾಲ ನೀಡುವ ಅವಧಿಯಲ್ಲಿ ಹೊಂದಾಣಿಕೆ ಮಾಡುವ ಮೂಲಕ ರಿಸ್ಕ್‌ಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅಧಿಕ ರಿಟರ್ನ್ಸ್ ಅನ್ನು ಜನರೇಟ್ ಮಾಡಲು ಫಂಡ್ ಮ್ಯಾನೇಜರ್‌ಗೆ ಅವಕಾಶ ಮಾಡುವ ರೀತಿಯಲ್ಲಿ ಅವುಗಳನ್ನು ನಿರ್ಮಿಸಲಾಗಿದೆ. 

ಮನಿ ಮಾರ್ಕೆಟ್ ಫಂಡ್‌ನ ಪ್ರಾಥಮಿಕ ಗುಣಲಕ್ಷಣಗಳು ಈ ಮುಂದಿನಂತಿವೆ:

ಇವು ಕಡಿಮೆ ಮೆಚ್ಯುರಿಟಿ ಅವಧಿಯನ್ನು ಹೊಂದಿರುತ್ತವೆ: ಮನಿ ಮಾರ್ಕೆಟ್ ಫಂಡ್‌ಗಳು ಫಂಡ್ ವರ್ಗವನ್ನು ಆಧರಿಸಿ ದಿನದಿಂದ ವರ್ಷದವರೆಗೆ ವಿಸ್ತರಿಸಬಬಹುದು.

ಅವು ಕಡಿಮೆ ಬಡ್ಡಿ ದರವನ್ನು ಹೊಂದಿರುತ್ತವೆ: ಫಿಕ್ಸೆಡ್ ಆದಾಯ ಸೆಕ್ಯುರಿಟಿಗಳ ಬಡ್ಡಿ ದರ ಸಂವೇದನಾಶೀಲತೆಯು ಅವುಗಳ ಮೆಚ್ಯುರಿಟಿ ಅವಧಿಗೆ ನೇರವಾಗಿ ಲಿಂಕ್ ಆಗಿವೆ. ಮೆಚ್ಯುರಿಟಿ ಹೆಚ್ಚಿದಷ್ಟೂ, ಬಡ್ಡಿದರವೂ ಹೆಚ್ಚುತ್ತದೆ ಹಾಗೂ ಬಡ್ಡಿ ದರ ಹೆಚ್ಚಿದಷ್ಟೂ ಮೆಚ್ಯುರಿಟಿಯೂ ಹೆಚ್ಚುತ್ತದೆ.

ಅವು ನಗದೀಕರಣ ಹೊಂದಿರುತ್ತವೆ: ಲಿಕ್ವಿಡ್ ಮತ್ತು ಸುರಕ್ಷಿತ ಡೆಟ್ ಆಧರಿತ ಅಸೆಟ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಅತ್ಯಧಿಕ ಲಿಕ್ವಿಡಿಟಿಯನ್ನು ಅವು ಒದಗಿಸುತ್ತವೆ.

ಕಡಿಮೆ ರಿಟರ್ನ್ಸ್: ಮೆಚ್ಯುರಿಟಿ ಹೆಚ್ಚಿದ್ದಷ್ಟೂ, ಫಿಕ್ಸೆಡ್ ಇನ್‌ಕಮ್‌ ಸೆಕ್ಯುರಿಟಿಗಳು ಹೆಚ್ಚು ರಿಟರ್ನ್ಸ್ ನೀಡುತ್ತವೆ. ಮೆಚ್ಯುರಿಟಿ ಕಡಿಮೆ ಇದ್ದರೆ, ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳ ರಿಟರ್ನ್ಸ್ ಕಡಿಮೆ ಇರುತ್ತದೆ. ಎನ್‌ಸಿಡಿಗಳು (ನಾನ್ ಕನ್ವರ್ಟಿಬಲ್ ಡಿಬೆಂಚರ್‌ಗಳು), ಜಿ ಬಾಂಡ್‌ಗಳು ಮತ್ತು ಇತರೆಗೆ ಹೋಲಿಸಿದರೆ ಕಡಿಮೆ ಅವಧಿಯ ಮೆಚ್ಯುರಿಟಿಗಳನ್ನು ಮನಿ ಮಾರ್ಕೆಟ್ ಫಂಡ್‌ಗಳು ಹೊಂದಿರುವುದರಿಂದ, ದೀರ್ಘಕಾಲೀನ ಸೆಕ್ಯುರಿಟಿಗಳಿಗಿಂತ ಅವುಗಳ ರಿಟರ್ನ್ಸ್ ಕಡಿಮೆ ಇರುತ್ತದೆ.

ಇತರ ಹೂಡಿಕೆ ಆಯ್ಕೆಗಳಂತೆಯೇ, ಮನಿ ಮಾರ್ಕೆಟ್ ಫಂಡ್‌ಗಳೂ ಕೂಡಾ ಮೆರಿಟ್‌ಗಳು ಮತ್ತು ಡೀಮೆರಿಟ್‌ಗಳನ್ನೂ ಹೊಂದಿರುತ್ತವೆ ಮತ್ತು ಅವುಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಇವೆನ್ನೆಲ್ಲ ಪರಿಗಣಿಸಬೇಕಾಗುತ್ತದೆ. ಹಾಗೆಯೇ, ದೀರ್ಘಕಾಲೀನ ಹೂಡಿಕೆಗೆ ಮನಿ ಮಾರ್ಕೆಟ್‌ ಫಂಡ್‌ಗಳು ಸೂಕ್ತವಲ್ಲ. ಆದರೆ, ಅಲ್ಪಾವಧಿಗೆ ಮಾತ್ರ ಹೂಡಿಕೆ ಮಾಡಿಕೊಂಡಿರುವವರಿಗೆ ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. 

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285

ಮ್ಯೂಚುವಲ್‌ ಫಂಡ್‌ ಸೂಕ್ತವೇ??