ರೂ. 500 ಹೂಡಿಕೆ ಮಾಡಲಿ ಅಥವಾ ರೂ.. 5 ಕೋಟಿ ಹೂಡಿಕೆಯನ್ನೇ ಮಾಡಲಿ, ರಿಟರ್ನ್ ಒಂದೇ ರೀತಿ ಇರುತ್ತದೆ. ಗೊಂದಲವಾಯಿತೇ?
ನೀವು ರಿಟರ್ನ್ಸ್ ಅನ್ನು ಶೇಕಡಾವಾರು ಆಧಾರದಲ್ಲಿ ಪರಿಗಣಿಸಬೇಕು. ಉದಾಹರಣೆಗೆ, ಒಂದು ಸ್ಕೀಮ್ ಶೇ. 12 ರಷ್ಟು ರಿಟರ್ನ್ ಹೊಂದಿದ್ದರೆ, ಆಗ ರೂ. 500 ಹೂಡಿಕೆಯು ಎರಡು ವರ್ಷಗಳಲ್ಲಿ ₹ 627.20 ಆಗುತ್ತದೆ. ಇದೇ ಸ್ಕೀಮ್ನಲ್ಲಿ ರೂ. 100,000 ಹೂಡಿಕೆ ಮಾಡಿದರೆ ಅದು ಇದೇ ಅವಧಿಯಲ್ಲಿ ರೂ. 1,25,440 ಆಗುತ್ತದೆ. ಎರಡೂ ಪ್ರಕರಣಗಳಲ್ಲಿ ಹೆಚ್ಚಳದ ಪ್ರಮಾಣ ಒಂದೇ ಆಗಿದ್ದು, ಕೇವಲ ಅಂತಿಮ ಮೊತ್ತ ಮಾತ್ರ ಬದಲಾಗುತ್ತದೆ. ಯಾಕೆಂದರೆ, ಆರಂಭದ ಹೂಡಿಕೆಯಲ್ಲಿ ವ್ಯತ್ಯಾಸ ಇರುತ್ತದೆ.
ಇಲ್ಲಿ ನಾವು ಎರಡು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಷ್ಟೇ ಮೊತ್ತ ಹೂಡಿಕೆ ಮಾಡಿದ್ದರೂ ಶೇಕಡಾವಾರು ರಿಟರ್ನ್ಸ್ ಒಂದೇ ರೀತಿ ಇರುತ್ತದೆ. ಆದಾಗ್ಯೂ, ಆರಂಭದಲ್ಲಿ ಹೂಡಿಕೆ ಮಾಡಿದ ಹೆಚ್ಚಿನ ಮೊತ್ತವು ಹೆಚ್ಚಿನ ಖಚಿತ ಮೊತ್ತ ನೀಡುತ್ತದೆ.
ಇದೆಲ್ಲವೂ ಹೂಡಿಕೆದಾರರು ಹೂಡಿಕೆಯನ್ನು ಆರಂಭಿಸಲು ಅಡ್ಡಿ ಉಂಟುಮಾಡಬಾರದು. ಇದು ಹೂಡಿಕೆಯಲ್ಲಿ ಅತ್ಯಂತ ಮಹತ್ವದ ಕ್ರಮವಾಗಿದೆ.