ನನ್ನ ಹೂಡಿಕೆಯನ್ನು ನಾನು ಯಾವಾಗ ಹಿಂಪಡೆಯಬಹುದು?

ನನ್ನ ಹೂಡಿಕೆಯನ್ನು ನಾನು ಯಾವಾಗ ಹಿಂಪಡೆಯಬಹುದು?

ಓಪನ್ ಎಂಡ್ ಸ್ಕೀಮ್‌ನಲ್ಲಿ ಹೂಡಿಕೆಯನ್ನು ಯಾವುದೇ ಸಮಯದಲ್ಲಿ ರಿಡೀಮ್ ಮಾಡಬಹುದು. ಹೂಡಿಕೆ ದಿನಾಂಕದಿಂದ 3 ವರ್ಷಗಳವರೆಗೆ ಲಾಕ್‌ ಇನ್‌ ಅವಧಿ ಹೊಂದಿರುವ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ (ಇಎಲ್‌ಎಸ್‌ಎಸ್‌)ನಲ್ಲಿ ಹೂಡಿಕೆ ಮಾಡಿಲ್ಲದೇ ಇದ್ದರೆ ಹೂಡಿಕೆ ರಿಡೆಂಪ್ಷನ್‌ನಲ್ಲಿ ಯಾವುದೇ ನಿರ್ಬಂಧ ಇರುವುದಿಲ್ಲ.

ಹೂಡಿಕೆದಾರರು ತಮ್ಮ ಹೂಡಿಕೆಯಲ್ಲಿನ ಯಾವುದೇ ಅನ್ವಯಿಕ ಎಕ್ಸಿಟ್ ಲೋಡ್‌ ಬಗ್ಗೆ ಗಮನವಿಡಬೇಕು. ಎಕ್ಸಿಟ್ ಲೋಡ್ ಎಂಬುದು ರಿಡೆಂಪ್ಷನ್‌ ವೇಳೆ ಅನ್ವಯಿಸಿದರೆ ಕಡಿತಗೊಳಿಸಿಕೊಳ್ಳಲಾಗುವ ಶುಲ್ಕಗಳಾಗಿವೆ. ಸಣ್ಣ ಹೂಡಿಕೆದಾರರು ಅಥವಾ ಸುಮ್ಮನೆ ವೀಕ್ಷಣೆಗೆಂದು ಸ್ಕೀಮ್‌ಗೆ ಪ್ರವೇಶಿಸುವುದರಿಂದ ಜನರನ್ನು ತಡೆಯಲು ಸಾಮಾನ್ಯವಾಗಿ ಎಎಂಸಿಗಳು ಎಕ್ಸಿಟ್ ಲೋಡ್ ಅನ್ನು ವಿಧಿಸುತ್ತವೆ.

ಆದರೆ ಕ್ಲೋಸ್ಡ್ ಎಂಡ್ ಸ್ಕೀಮ್‌ಗಳಲ್ಲಿ ನಿತ್ಯವೂ ಪಕ್ವತೆ ದಿನಾಂಕದಂದು ಸ್ವಯಂಚಾಲಿತವಾಗಿ ಎಲ್ಲ ಯೂನಿಟ್‌ಗಳು ರಿಡೀಮ್ ಆಗುವುದರಿಂದ ಎಕ್ಸಿಟ್ ಲೋಡ್ ಅನ್ನು ವಿಧಿಸಲಾಗುವುದಿಲ್ಲ. ಅದರೆ, ಕ್ಲೋಸ್ಡ್ ಎಂಡ್ ಸ್ಕೀಮ್‌ಗಳ ಯೂನಿಟ್‌ಗಳನ್ನು ಗುರುತಿಸಲ್ಪಟ್ಟ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಲಾಗಿರುತ್ತದೆ ಮತ್ತು ಎಕ್ಸ್‌ಚೇಂಜ್‌ ಮೂಲಕ ಮಾತ್ರವೇ ತಮ್ಮ ಯೂನಿಟ್‌ಗಳನ್ನು ಹೂಡಿಕೆದಾರರು ಮಾರಾಟ ಮಾಡಬಹುದಾಗಿರುತ್ತದೆ.

ಭಾರತದಲ್ಲಿ ಮ್ಯೂಚುವಲ್‌ ಫಂಡ್‌ಗಳು ಅತ್ಯಂತ ಲಿಕ್ವಿಡ್ ಹೂಡಿಕೆ ವಿಧಾನವಾಗಿದೆ ಮತ್ತು ಇವು ಪ್ರತಿ ಹಣಕಾಸು ಯೊಜನೆಯ ಸ್ವತ್ತು ವಿಭಾಗಕ್ಕೆ ಸೂಕ್ತವಾಗಿದೆ.

440

ಮ್ಯೂಚುವಲ್‌ ಫಂಡ್‌ ಸೂಕ್ತವೇ??