₹ 500 ರಿಂದ ಕೇವಲ ಆರಂಭ ಮಾತ್ರ

Video

ನೀವು ಮಾಸಿಕ ಕೇವಲ ₹  500 ರಿಂದ ಹೂಡಿಕೆ ಆರಂಭಿಸಬಹುದು!

ಉತ್ತಮ ಗಳಿಕೆಯನ್ನು ಮಾಡಲು ಮ್ಯೂಚುವಲ್‌ಫಂಡ್‌ಗಳಲ್ಲಿ ಭಾರಿ ಹಣವನ್ನು ಹೂಡಿಕೆ ಮಾಡಬೇಕು ಎಂದು ಜನರು ಭಾವಿಸಿದ್ದಾರೆ. ನೀವು ಮಾಸಿಕ ₹ 500 ರಿಂದ ಹೂಡಿಕೆ ಆರಂಭಿಸಿ, ನಿಮ್ಮ ಆದಾಯ ಹೆಚ್ಚಾದಂತೆ ನೀವು ನಿಧಾನವಾಗಿ ಹೂಡಿಕೆಯನ್ನು ಹೆಚ್ಚಳ ಮಾಡಬಹುದು.

ವಿಭಿನ್ನ ಬಡ್ಡಿ ದರದಲ್ಲಿ ನಿಮ್ಮ ಹೂಡಿಕೆ ಹೇಗೆ ಏರಿಕೆಯಾಗಬಹುದು ಎಂಬುದನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀವು ನೋಡಬಹುದು.

Investment

*ಇದು ಕೇವಲ ಒಂದು ಉದಾಹರಣೆ ಮಾತ್ರ. ಕೋಷ್ಟಕದಲ್ಲಿ ತೋರಿಸಿದ ರಿಟರ್ನ್ಸ್‌ಸಂಪೂರ್ಣವಾಗಿ ಊಹೆಯದ್ದಾಗಿದೆ ಮತ್ತು ತೋರಿಕೆ ಉದ್ದೇಶಕ್ಕೆ ಮಾತ್ರ. ಮ್ಯೂಚುವಲ್‌ಫಂಡ್‌ಗಳು ಯಾವುದೇ ಖಚಿತ ರಿಟರ್ನ್ಸ್‌ನ ಭರವಸೆ ನೀಡುವುದಿಲ್ಲ.

ಸಾಮಾನ್ಯ ಮನುಷ್ಯನಿಂದ ಶ್ರೀಮಂತನವರೆಗೂ ಎಲ್ಲರಿಗೂ ಮ್ಯೂಚುವಲ್‌ಫಂಡ್‌ಸೂಕ್ತವಾಗಿದೆ. ಸಣ್ಣ ಹೂಡಿಕೆದಾರರು ದೊಡ್ಡ ಗುರಿಯನ್ನು ಹಾಕಿಕೊಳ್ಳುವುದಕ್ಕೆ ಮೂರು ಸಿದ್ಧ ಸೂತ್ರಗಳಿವೆ:

a.    ಸಣ್ಣ ಮೊತ್ತವಾದರೂ ಸರಿ ಸಾಧ್ಯವಾದಷ್ಟೂ ಮೊದಲೇ ಹೂಡಿಕೆ ಆರಂಭಿಸಿ.

b.    ಮೊತ್ತ ಎಷ್ಟು ಸಣ್ಣದಾದರೂ ಸರಿ ನಿಯಮಿತವಾಗಿ ಹೂಡಿಕೆ ಮಾಡಿ.

c.    ನಿಮ್ಮ ಹೂಡಿಕೆಗೆ ಬೆಳೆಯುವ ಅವಕಾಶ ನೀಡಲು ಹೂಡಿಕೆ ಮಾಡುತ್ತಾ ಇರಿ.

ಕಾಲ ಕಳೆದಂತೆ ಪ್ರತಿ ಹೂಡಿಕೆದಾರರಿಗೂ ಸೂಕ್ತವಾಗುವಂತೆ ಮ್ಯೂಚುವಲ್‌ಫಂಡ್‌ಗಳು ಬೆಳೆದಿವೆ. ಹೂಡಿಕೆ ಮೊತ್ತ ಕಡಿಮೆಯಾಗಿದ್ದರೂ, ನಿಯತ ಹೂಡಿಕೆ ಮತ್ತು ಶಿಸ್ತುಬದ್ಧ ಅಪ್ರೋಚ್‌ನಿಂದಾಗಿ ನೀವು ಕಾಲ ಸರಿದಂತೆ ಹೆಚ್ಚಿನ ಮೊತ್ತವನ್ನು ಕೂಡಿಡಲು ಸಾಧ್ಯವಾಗುತ್ತದೆ.

438

ಮ್ಯೂಚುವಲ್‌ ಫಂಡ್‌ ಸೂಕ್ತವೇ??