2020 ಏಪ್ರಿಲ್1 ರಿಂದ ಜಾರಿಗೆ ಬಂದ ಹೊಸ ತೆರಿಗೆ ವ್ಯವಸ್ಥೆಯು ಕೆಲವು ವಿನಾಯಿತಿಗಳನ್ನು ನಿರಾಕರಿಸಿ ಕಡಿಮೆ ತೆರಿಗೆ ದರವನ್ನು ಪಡೆಯುವುದು ಮತ್ತು ವಿನಾಯಿತಿಗಳನ್ನು ಪಡೆದು ಹೆಚ್ಚಿನ ತೆರಿಗೆ. ದರಗಳನ್ನು ಪಡೆಯುವುದರ (ಹಳೆಯ ತೆರಿಗೆ ವ್ಯವಸ್ಥೆ) ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ವೈಯಕ್ತಿಕ ಮತ್ತು ಅವಿಭಕ್ತ ಕುಟುಂಬದ ತೆರಿಗೆದಾರರಿಗೆ ನೀಡುತ್ತದೆ. ಎಲ್ಲರಿಗೂ ಹೊಸ ತೆರಿಗೆ ವ್ಯವಸ್ಥೆ ಹೊಂದದಿರಬಹುದು. ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮಾಡುವ ತೆರಿಗೆ ಉಳಿತಾಯಗಳನ್ನು ತೆರಿಗೆದಾರರು ಪರಿಶೀಲಿಸಬೇಕು.
ಮನೆ ಅಥವಾ ಶೈಕ್ಷಣಿಕ ಸಾಲ, ತೆರಿಗೆ ಕಳೆಯಬಹುದಾದ ಜೀವ ವಿಮೆ ಪಾಲಿಸಿಗಳು, 15 ಲಕ್ಷಕ್ಕಿಂತ ಹೆಚ್ಚು ಸಂಬಳ ಹೊಂದಿರುವವರು ಅಥವಾ ವಿನಾಯಿತಿಗಳ ಮೂಲಕ ಭಾರಿ ಉಳಿತಾಯ ಮಾಡುವ ತೆರಿಗೆದಾರರಿಗೆ ಹಳೆಯ ತೆರಿಗೆ ವ್ಯವಸ್ಥೆ ಹೆಚ್ಚು ಹೊಂದಿಕೆಯಾಗಬಹುದು. ಹೀಗಾಗಿ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಉಳಿತಾಯ ಮಾಡಲು ಈ ತೆರಿಗೆದಾರರು ELSS ಅನ್ನು ಬಳಸಬಹುದು. ಹಳೆಯ ತೆರಿಗೆ ವ್ಯವಸ್ಥೆಯಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ವರ್ಷದ ಕೊನೆಯಲ್ಲಿ ಭಾರಿ ಸಂಖ್ಯೆಯ ಕಾಗದ ಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಆದರೆ, ಹಳೆಯ ತೆರಿಗೆ ವ್ಯವಸ್ಥೆಯು ನಿಮಗೆ ಪ್ರಮುಖ ಹೂಡಿಕೆ ಮತ್ತು ಉಳಿತಾಯ ನಿರ್ಧಾರಗಳನ್ನು ಮಾಡಲು ಅನುವು ಮಾಡುತ್ತದೆ. ELSS, ಪಿಂಚಣಿ ಯೋಜನೆ ಅಥವಾ ಪಿಪಿಎಫ್ಆಗಲಿ ಈ ಹೂಡಿಕೆ ಅಥವಾ ಉಳಿತಾಯವನ್ನು ವಾರ್ಷಿಕ ರೂಪದಲ್ಲಿ ಮಾಡುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಕೆಲವು ತೆರಿಗೆದಾರರು ಈಗಾಗಲೇ ELSS ನಲ್ಲಿ SIP ಗಳನ್ನು
ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೀವು ELSS ನಲ್ಲಿ ಹೂಡಿಕೆ ಮಾಡಬೇಕೆ?

436