ಸ್ಟಾರ್ಟಪ್ ಮಾಲೀಕರಾಗಿರುವ ನಿಮ್ಮ ಸ್ನೇಹಿತರಿಗೆ 8% ಬಡ್ಡಿ ದರದಲ್ಲಿ ನೀವು 5 ಲಕ್ಷ ರೂ. ಸಾಲ ನೀಡಿದ್ದೀರಿ (ಪ್ರಸ್ತುತ ಬ್ಯಾಂಕ್ ದರ ಶೇ. 7 ಕ್ಕಿಂತ ಹೆಚ್ಚು). ಅವರು ನಿಮಗೆ ಹಲವು ವರ್ಷಗಳಿಂದ ಪರಿಚಿತರಾಗಿದ್ದರೂ, ಸಮಯಕ್ಕೆ ಸರಿಯಾಗಿ ಆತ ಹಣವನ್ನು ವಾಪಸ್ ಮಾಡದ ಅಥವಾ ಹಣವನ್ನು ವಾಪಸ್ ಮಾಡದೆಯೇ ಇರುವ ರಿಸ್ಕ್ ಅನ್ನು ನೀವು ಹೊಂದಿರುತ್ತೀರಿ. ಹಾಗೆಯೇ, ಬ್ಯಾಂಕ್ ದರವು 8.5% ಕ್ಕೆ ಏರಿಕೆಯಾಗಿ, ನೀವು 8% ರಲ್ಲೇ ಸಿಕ್ಕಿಕೊಂಡಿರಬಹುದು.
ಇದೇ ರೀತಿ, ಡೆಟ್ ಫಂಡ್‌ಗಳು ನಿಮ್ಮ ಹಣವನ್ನು ಬಾಂಡ್‌ಗಳು ಮತ್ತು ಮನಿ ಮಾರ್ಕೆಟ್ ಸಲಕರಣೆಗಳಂತಹ ಬಡ್ಡಿ ನೀಡುವ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಫಂಡ್‌ಗಳಿಗೆ ನಿಯತ ಬಡ್ಡಿ ಪಾವತಿಯನ್ನು ಮಾಡುವ ಭರವಸೆಯನ್ನು ಈ ಸೆಕ್ಯುರಿಟಿಗಳು ನೀಡುತ್ತವೆ. ಹೀಗಾಗಿ, ಡೆಟ್ ಫಂಡ್‌ಗಳು ನೀವು ಸ್ನೇಹಿತರಿಗೆ ಸಾಲವನ್ನು ನೀಡಿದಾಗ ಇರುವಂತಹ ಮೂರು ಪ್ರಮುಖ ರಿಸ್ಕ್‌ಗಳಿಗೆ ಒಳಗಾಗುತ್ತವೆ.
- ಮೊದಲನೆಯದಾಗಿ, ಈ ಫಂಡ್‌ಗಳು ಬಡ್ಡಿ ನೀಡುವ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ, ಇವುಗಳ ಎನ್‌ಎವಿಯು ಬಡ್ಡಿ ದರ ಬದಲಾಗುತ್ತಿದ್ದಂತೆಯೇ (ಬಡ್ಡಿ ದರ ರಿಸ್ಕ್) ಬದಲಾವಣೆಗೆ ಒಳಪಡುತ್ತಿರುತ್ತದೆ. ಈ ಫಂಡ್‌ಗಳ ಬೆಲೆಯು ಬಡ್ಡಿ ದರ ಏರಿದಾಗ ಇಳಿಯುತ್ತದೆ ಮತ್ತು ಇಳಿದಾಗ ಏರುತ್ತದೆ.
- ಎರಡನೆಯದಾಗಿ, ಈ ಫಂಡ್‌ಗಳು ಕ್ರೆಡಿಟ್ ರಿಸ್ಕ್‌ಗೆ ಒಳಪಟ್ಟಿವೆ. ಅಂದರೆ ತಾವು ಹೂಡಿಕೆ ಮಾಡಿದ ಸೆಕ್ಯುರಿಟಿಗಳಿಂದ (ಉದಾ., ಬಾಂಡ್‌ಗಳು) ನಿಯತ ಪಾವತಿಗಳನ್ನು ಸ್ವೀಕರಿಸದ