ಈಕ್ವಿಟಿ ಲಿಂಕ್ಡ್ಉಳಿತಾಯ ಸ್ಕೀಮ್ಗಳೆಂದರೆ ಈಕ್ವಿಟಿ ಉದ್ದೇಶಿತ ತೆರಿಗೆ ಉಳಿತಾಯದ ಮ್ಯೂಚುವಲ್ಫಂಡ್ಗಳಾಗಿದ್ದು, ಆದಾಯ ತೆರಿಗೆ ಕಾಯ್ದೆಯ 80ಸಿ ಕಲಂ ಅಡಿಯಲ್ಲಿ ತೆರಿಗೆ ಉಳಿತಾಯವನ್ನು ಒದಗಿಸುತ್ತವೆ ಮತ್ತು ಈಕ್ವಿಟಿಗಳ ಬೆಳವಣಿಗೆ ಅನುಕೂಲವನ್ನೂ ಒದಗಿಸುತ್ತವೆ. ಈ ಎರಡು ಪ್ರಯೋಜನಗಳ ಜೊತೆಗೆ, 3 ವರ್ಷದ ಅತಿ ಕಡಿಮೆ ಲಾಕ್ಇನ್ ಅವಧಿಯನ್ನು ಅವರು ಹೊಂದಿರುತ್ತಾರೆ. ಇದು ತೆರಿಗೆ ಉಳಿತಾಯ ಉತ್ಪನ್ನಗಳ ವರ್ಗದಲ್ಲಿ ನೀವು ಪಡೆಯಬಹುದಾದ ಅತಿ ಕಡಿಮೆ ಲಾಕ್ ಇನ್ ಅವಧಿ ಇದು.
ಈಕ್ವಿಟಿ ಆಧರಿತ ಮ್ಯೂಚುವಲ್ಫಂಡ್ಆಗಿರುವುದರಿಂದ ಕೆಲವು ಇತರ ಪ್ರಯೋಜನಗಳನ್ನೂ ELSS ಒದಗಿಸುತ್ತದೆ. ನಿಮಗೆ ಹೊಂದುವ ರೀತಿಯಲ್ಲಿ SIP ಅಥವಾ ಸಗಟು ರೂಪದಲ್ಲಿ ELSS ನಲ್ಲಿ ನೀವು ಹೂಡಿಕೆ ಮಾಡಬಹುದು. ನಿಮಗೆ ಹೊಂದುವಂತೆ SIP ಅಥವಾ ಸಗಟು ರೂಪದಲ್ಲಿ ನೀವು ELSSನಲ್ಲಿ ಹೂಡಿಕೆ ಮಾಡಬಹುದು. ನೌಕರ ವರ್ಗಕ್ಕೆ SIP ಸೌಲಭ್ಯವು ಅನುಕೂಲಕರವಾಗಿದೆ. ವರ್ಷದ ಕೊನೆಯಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವುದರ ಬದಲಿಗೆ ತೆರಿಗೆ ಉಳಿತಾಯ ಮಾಡುವುದಕ್ಕಾಗಿ ಪ್ರತಿ ತಿಂಗಳೂ ನಿಗದಿತ ಮೊತ್ತವನ್ನು ತೆಗೆದಿಡಲು ಅವರು ಬಯಸಬಹುದು. ಉದ್ಯೋಗದಲ್ಲಿರುವವರೆಗೂ ಅವರು SIP ಅನ್ನು ಮುಂದುವರಿಸಬಹುದು.
3 ವರ್ಷಗಳ ಲಾಕ್ ಇನ್ ಅವಧಿ ಅಗತ್ಯದ್ದಾಗಿದ್ದರೂ, ಹೂಡಿಕೆದಾರರು ಲಾಕ್ ಇನ್ ಅವಧಿ ಮುಗಿದ ನಂತರವೂ ಹೂಡಿಕೆ ಮಾಡಿಕೊಂಡೇ ಇರಬಹುದು. ಇತರ ತೆರಿಗೆ ಉಳಿತಾಯ ಸ್ಕೀಮ್ಗಳಲ್ಲಿ ನಿಮ್ಮ ಹಣವು ಸ್ವಯಂಚಾಲಿತವಾಗಿ ಪಕ್ವವಾಗುತ್ತದೆ ಅಥವಾ ಲಾಕ್ ಇನ್ ಅವಧಿ ಮುಗಿದ ನಂತರ ಗಳಿಕೆ ನಿಲ್ಲಿಸುತ್ತದೆ. ಹೂಡಿಕೆದಾರರು ಬಯಸಿದ ಅವಧಿಯವರೆಗೂ ಹೂಡಿಕೆ ಮುಂದುವರಿಸಬಹುದು ಮತ್ತು ಹೆಚ್ಚು ಕಾಲದವರೆಗೆ ಹೂಡಿಕೆದಾರರು ಹಣ ಇಟ್ಟುಕೊಂಡಷ್ಟೂ, ಅವರ ಹೂಡಿಕೆ ರಿಸ್ಕ್ಕಡಿಮೆ ಇರುತ್ತದೆ ಮತ್ತು ರಿಟರ್ನ್ಹೆಚ್ಚು ಗಳಿಸುವ ಅವಕಾಶ ಕಾಲ ಸರಿದಂತೆ ಹೆಚ್ಚುತ್ತದೆ.
ELSS ಫಂಡ್ಗಳಲ್ಲಿ ಹೂಡಿಕೆ ಮಾಡುವ ಅನುಕೂಲಗಳು ಯಾವುವು?
436