ಹೂಡಿಕೆದಾರರನ್ನು ಯಾವ ಯಾವ ರೀತಿಯ ರಿಸ್ಕ್ ಪ್ರೊಫೈಲ್‌ವಿಧಗಳಲ್ಲಿ ವಿವರಿಸಲಾಗಿದೆ?

Video

ಮ್ಯೂಚುವಲ್‌ ಫಂಡ್‌ಗಳ ರಿಸ್ಕ್‌ ವಿಧಾನದ ಆಧಾರದಲ್ಲಿ ಹೇಗೆ ನಾವು ವಿಭಿನ್ನ ವಿಭಾಗಗಳನ್ನು ಹೊಂದಿರುವಂತೆಯೇ, ಹೂಡಿಕೆದಾರರನ್ನೂ ನಾವು ಅವರ ರಿಸ್ಕ್‌ ಪ್ರೊಫೈಲ್ ಆಧರಿಸಿ ಗ್ರೂಪ್ ಮಾಡುತ್ತೇವೆ. ಹೂಡಿಕೆದಾರರನ್ನು ಅಗ್ರೆಸಿವ್, ಮಾಡರೇಟ್‌ ಮತ್ತು ಕನ್ಸರ್ವೇಟಿವ್ ರಿಸ್ಕ್ ಪ್ರೊಫೈಲ್‌ಗಳು ಎಂದು ಎರಡು ಅಂಶಗಳ ಆಧಾರದಲ್ಲಿ ವಿಭಾಗಿಸಬಹುದು? ಹೂಡಿಕೆದಾರರ ರಿಸ್ಕ್ ಪ್ರೊಫೈಲ್‌ ಅನ್ನು ಅವರ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ (ರಿಸ್ಕ್ ಸಾಮರ್ಥ್ಯ) ಮತ್ತು ರಿಸ್ಕ್ ತೆಗೆದುಕೊಳ್ಳುವ ಸಮ್ಮತಿ (ರಿಸ್ಕ್ ಅವರ್ಷನ್) ಅನ್ನು ಅವಲಂಬಿಸಿರುತ್ತದೆ. ಹೂಡಿಕೆದಾರರು ಕಡಿಮೆ ಸಮ್ಮತಿ ಮತ್ತು ರಿಸ್ಕ್‌ ಸಾಮರ್ಥ್ಯವೆರಡನ್ನೂ ಹೊಂದಿದ್ದರೆ, ಅವರನ್ನು ನಾವು ಕನ್ಸರ್ವೇಟಿವ್ ಹೂಡಿಕೆದಾರ ಎಂದು ಕರೆಯುತ್ತೇವೆ ಮತ್ತು ಅವರು ಡೆಟ್‌ ಫಂಡ್‌ಗಳು, ಬ್ಯಾಂಕ್‌ ಎಫ್‌ಡಿಗಳಂತಹ ಕಡಿಮೆ ರಿಸ್ಕ್ ಹೂಡಿಕೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವಂತೆ ಶಿಫಾರಸು ಮಾಡುತ್ತೇವೆ.

ರಿಸ್ಕ್ ತೆಗೆದುಕೊಳ್ಳಲು ಸಮ್ಮತಿ ಮತ್ತು ಸಾಮರ್ಥ್ಯ ಎರಡನ್ನೂ ಹೆಚ್ಚು ಹೊಂದಿದ್ದರೆ, ಅಂತಹ ಹೂಡಿಕೆದಾರರಿಗೆ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು, ಡೈರೆಕ್ಟ್‌ ಈಕ್ವಿಟಿಗಳಂತಹ ಅಗ್ರೆಸಿವ್‌ ರಿಸ್ಕ್ ವಿಭಾಗಗಳಲ್ಲಿ ಹೂಡಿಕೆ ಮಾಡುವಂತೆ ಶಿಫಾರಸು ಮಾಡುತ್ತೇವೆ. ಆದರೆ, ರಿಸ್ಕ್‌ ತೆಗೆದುಕೊಳ್ಳಲು ಹೂಡಿಕೆದಾರರು ಹೆಚ್ಚು ಸಮ್ಮತಿ ಮತ್ತು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದರೆ, ಮಾಡರೇಟ್ ರಿಸ್ಕ್ ಹೂಡಿಕೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ಮಾಡಲಾಗುತ್ತದೆ. ಈ ಹೂಡಿಕೆದಾರರನ್ನು ಮಾಡರೇಟ್ ಹೂಡಿಕೆದಾರರು ಎಂದು ಕರೆಯಲಾಗಿದ್ದು, ಇವರು ತಮ್ಮ ಜೀವನವನ್ನು ಗೊಂದಲಕ್ಕಿಡು ಮಾಡದೇ ಮಧ್ಯಮ ಪ್ರಮಾಣದ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಾರೆ. ಅವರು ಬ್ಯಾಲೆನ್ಸ್‌ಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತಾರೆ.

ಹೂಡಿಕೆದಾರರ ರಿಸ್ಕ್ ಸಾಮರ್ಥ್ಯ ಮತ್ತು ರಿಸ್ಕ್ ಅವರ್ಷನ್‌ ಮಿತಿಯೊಳಗೆ ಹೂಡಿಕೆದಾರರ ರಿಸ್ಕ್ ಇದ್ದರೆ ಹೂಡಿಕೆದಾರರಿಗೆ ಹೂಡಿಕೆ ಮಾಡುವುದು ಸೂಕ್ತ ಎಂದು ಪರಿಗಣಿಸಲಾಗಿದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??