ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ರಿಸ್ಕ್‌ನ ಸೂಚಕಗಳು ಯಾವುದು?

ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ರಿಸ್ಕ್‌ನ ಸೂಚಕಗಳು ಯಾವುದು? zoom-icon

ನಿಮ್ಮ ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಹೂಡಿಕೆ ಮಾಡಲು ಸರಿಯಾದ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ನೀವು ಸರಿಯಾಗಿ ವಿಶ್ಲೇಷಿಸಬೇಕು. ಹೂಡಿಕೆದಾರರು ಸ್ಕೀಮ್ ವರ್ಗವನ್ನು ನೋಡುತ್ತಾರೆ ಮತ್ತು ಆ ವರ್ಗದಲ್ಲಿ ಉತ್ತಮವಾಗಿ ಸಾಧನೆ ತೋರುವುದನ್ನು ನೋಡುತ್ತಾರೆ. ಆದರೆ ಈ ಸ್ಕೀಮ್‌ಗಳ  ರಿಸ್ಕ್ ಇಂಡಿಕೇಟರುಗಳನ್ನು ನಿರ್ಲಕ್ಷಿಸುತ್ತಾರೆ. ನೀವು ಆಯ್ಕೆ ಮಾಡುವ ಉದ್ದೇಶಕ್ಕೆ ಸ್ಕೀಮ್‌ಗಳನ್ನು ಹೋಲಿಕೆ ಮಾಡುವಾಗ ಅವುಗಳ ರಿಸ್ಕ್ ಅನ್ನು ಹೋಲಿಕೆ ಮಾಡಲು ಮರೆಯಬೇಡಿ. ಪ್ರಮಾಣಿತ ವ್ಯತ್ಯಯ, ಬೀಟಾ ಮತ್ತು ಶಾರ್ಪ್ ಅನುಪಾತದಂತಹ ಹಲವು ರಿಸ್ಕ್ ಇಂಡಿಕೇಟರುಗಳು ಇದ್ದು, ಪ್ರತಿ ಸ್ಕೀಮ್‌ನ ಫ್ಯಾಕ್ಟ್‌ಶೀಟ್‌ನಲ್ಲಿ ನೀಡಲಾಗಿರುತ್ತದೆ, ಅತ್ಯಂತ ಪ್ರಾಥಮಿಕ ಸಂಗತಿ ಪ್ರಾಡಕ್ಟ್ ಲೇಬಲ್ ಅನ್ನು ನೋಡಲೇಬೇಕು. ಲೇಬಲ್‌ನಲ್ಲಿ ತೋರಿಸುವ ರಿಸ್ಕೋಮೀಟರ್‌ನಲ್ಲಿ ಫಂಡ್‌ನ ರಿಸ್ಕ್ ಮಟ್ಟವು ಕಾಣುತ್ತದೆ. ಈ ರಿಸ್ಕೋಮೀಟರ್‌ ಸೆಬಿಗೆ ಕಡ್ಡಾಯ ಅಗತ್ಯವಾಗಿದೆ ಮತ್ತು ಫಂಡ್‌ನಲ್ಲಿ ಇರುವ ರಿಸ್ಕ್‌ ಅನ್ನು ಇದು ಪ್ರತಿನಿಧಿಸುತ್ತದೆ. ರಿಸ್ಕ್‌ನ ಆರು ಹಂತಗಳಾದ ಕಡಿಮೆ, ಕಡಿಮೆಯಿಂದ ಮಧ್ಯಮ, ಮಧ್ಯಮ, ಮಧ್ಯಮದಿಂದ ಅಧಿಕ, ಅಧಿಕ ಮತ್ತು ಅತಿ ಅಧಿಕವನ್ನು ಅವುಗಳ ಪೋರ್ಟ್‌ಫೋಲಿಯೋದಲ್ಲಿನ ರಿಸ್ಕ್‌ನ ಮಟ್ಟವನ್ನು ಆಧರಿಸಿ ಮ್ಯೂಚುವಲ್‌ ಫಂಡ್‌ಗಳ ವಿವಿಧ ವಿಭಾಗಗಳಿಗೆ ಸಂಪರ್ಕ ಹೊಂದಿವೆ. ಈ ರೀತಿಯ ರಿಸ್ಕ್ ವಿಭಾಗೀಕರಣವನ್ನು ಸೆಬಿ ವ್ಯಾಖ್ಯಾನಿಸಿರುವುದರಿಂದ, ಇದೇ ರಿಸ್ಕ್ ವಿಭಾಗಕ್ಕೆ ಇದೇ ರೀತಿ ಫಂಡ್‌ಗಳನ್ನು ಎಲ್ಲ ಮ್ಯೂಚುವಲ್‌ ಫಂಡ್‌ಗಳು ವರ್ಗೀಕರಿಸಬೇಕಾಗುತ್ತದೆ.

ಫಂಡ್‌ನ ರಿಸ್ಕ್ ಅಂಶಕ್ಕೆ ಮೇಲ್ನೋಟವನ್ನು ಒದಗಿಸುವ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??