ಲಿಸ್ಟ್ ಮಾಡಿರುವ ಎಲ್ಲ ಅಧಿಕೃತ ಸ್ಟಾಕ್ ಎಕ್ಸ್ ಚೇಂಜ್ಗಳ ಸಂಪೂರ್ಣ ಮಾರುಕಟ್ಟೆ ಬಂಡವಾಳೀಕರಣದ ಸರಾಸರಿಯೇ ಮಾರುಕಟ್ಟೆ ಬಂಡವಾಳೀಕರಣವಾಗಿದೆ ಅಥವಾ ಲಿಸ್ಟ್ ಮಾಡಿದ ಒಂದೇ ಎಕ್ಸ್ ಚೇಂಜ್ ನಲ್ಲಿನ ಸ್ಟಾಕ್ನ ಸಂಪೂರ್ಣ ಮಾರುಕಟ್ಟೆ ಬಂಡವಾಳೀಕರಣವಾಗಿದೆ. ಫಂಡ್ನ ಹೂಡಿಕೆ ಉದ್ದೇಶದ ಪ್ರಕಾರ ಕಂಪನಿಗಳಲ್ಲಿ ಫಂಡ್ ಮ್ಯಾನೇಜರುಗಳು ಹೂಡಿಕೆ ಮಾಡುತ್ತಾರೆ ಮತ್ತು ತಾವು ಯಾವುದರಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂದು ಹೂಡಿಕೆದಾರರಿಗೆ ತಿಳಿದಿದೆ. ಉದಾಹರಣೆಗೆ, ಮಿಡ್ ಕ್ಯಾಪ್ ಗ್ರೋತ್ ಫಂಡ್ಗಳು ಗ್ರೋತ್ ಉದ್ದೇಶದ ಹೂಡಿಕೆ ಶೈಲಿಯೊಂದಿಗೆ ಮಿಡ್ ಕ್ಯಾಪ್ ಸೆಗ್ಮೆಂಟ್ನಲ್ಲಿ ಅಸೆಟ್ ಅಲೋಕೇಶನ್ ಹೊಂದಿರಬಹುದು ಮತ್ತು ಇದರ ಪೋರ್ಟ್ಫೋಲಿಯೋದಲ್ಲಿ ಈ ವಿವರಗಳಿರಬೇಕು. ಇದೇ ಮ್ಯಾಂಡೇಟ್ನ ಫಂಡ್ಗಳೊಂದಿಗೆ ಹೋಲಿಕೆ ಮಾಡಲು ಹೂಡಿಕೆದಾರರಿಗೆ ಇದು ಸಹಾಯ ಮಾಡುತ್ತದೆ. ಕಾಲಕಾಲಕ್ಕೆ ಪೋರ್ಟ್ಫೋಲಿಯೋ ಬ್ಯಾಲೆನ್ಸಿಂಗ್ ಮಾಡಬೇಕು. ಯಾಕೆಂದರೆ ಎಕ್ಸ್ಚೇಂಜ್ನಲ್ಲಿ ಸ್ಟಾಕ್ ಬೆಲೆ ಬದಲಾವಣೆಗೆ ಅನುಗುಣವಾಗಿ ಮಾರುಕಟ್ಟೆ ಬಂಡವಾಳವೂ ಬದಲಾಗುತ್ತದೆ.
ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ಗಳು ಅಧಿಕ ಗ್ರೋತ್ ಸಾಧ್ಯತೆ ಹೊಂದಿರುವ ಮಿಡ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಆದರೆ, ಈ ಕಂಪನಿಗಳು ಒಂದಷ್ಟು ಸ್ಕೇಲ್ ಮತ್ತು ಸ್ಠಿರತೆಯನ್ನು ಹೊಂದಿರುವುದರಿಂದ ಸ್ಮಾಲ್ ಕ್ಯಾಪ್ಗಳಲ್ಲಿರುವ ರಿಸ್ಕ್ ಗಳನ್ನು ಇವು ಹೊಂದಿರುವುದಿಲ್ಲ. ಲಾರ್ಜ್ ಕ್ಯಾಪ್ಗಳಿಗಿಂತ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ಗಳು ಅಧಿಕ ರಿಟರ್ನ್ಸ್ ಅನ್ನು ಒದಗಿಸುತ್ತವೆ. ಆದರೆ ಸ್ಮಾಲ್ ಕ್ಯಾಪ್ ಫಂಡ್ಗಳಲ್ಲಿನ ರಿಸ್ಕ್ ಇದರಲ್ಲಿ ಇರುವುದಿಲ್ಲ.
ಉತ್ತಮ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ಗಳನ್ನು ಆಯ್ಕೆ ಮಾಡಿದಾಗ, ಪರ್ಫಾರ್ಮೆನ್ಸ್ ನಲ್ಲಿ ಸ್ಥಿರತೆಗಾಗಿ 3-5 ವರ್ಷಗಳಿಗಿಂತ ಹೆಚ್ಚಿನ ದೀರ್ಘಕಾಲದ ಪರ್ಫಾರ್ಮೆನ್ಸ್ ನೋಡಿ. ಇದಕ್ಕೆ ಸೂಕ್ತವಾದ ಬೆಂಚ್ಮಾರ್ಕ್ ರಿಟರ್ನ್ಸ್ ಜೊತೆಗೆ ಹೋಲಿಕೆ ಮಾಡಿ.