ಮ್ಯೂಚುವಲ್ ಫಂಡ್ಗಳ ಬಗ್ಗೆ ಮಾಹಿತಿಯನ್ನು ನೋಡುತ್ತಿರುವಾಗ ಎಕ್ಸ್ವೈಝೆಡ್ ಮಲ್ಟಿಕ್ಯಾಪ್ ಫಂಡ್ನಂತಹ ಫಂಡ್ ಹೆಸರಗಳನ್ನು ನೀವು ನೋಡಿದ್ದೀರಾ ಮತ್ತು ಹೆಚ್ಚು ಜನಪ್ರಿಯ ಲಾರ್ಜ್ ಕ್ಯಾಪ್ ಫಂಡ್ಗಳಿಗಿಂತ ಇವು ಹೇಗೆ ವಿಭಿನ್ನ ಎಂದು ನೀವು ಅಚ್ಚರಿಗೊಂಡಿದ್ದೀರಾ? ಹೆಸರೇ ಹೇಳುವಂತೆ, ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಮಲ್ಟಿಕ್ಯಾಪ್ ಫಂಡ್ ಹೂಡಿಕೆ ಮಾಡುತ್ತದೆ ಮತ್ತು ಈ ಮೂಲಕ ಅದರ ಪೋರ್ಟ್ಫೋಲಿಯೋದಲ್ಲಿ ಮಾರ್ಕೆಟ್ ಬಂಡವಾಳದಾದ್ಯಂತ ವೈವಿಧ್ಯತೆಯನ್ನು ಇದು ಒದಗಿಸುತ್ತಿದೆ.
2018 ಜೂನ್ನಲ್ಲಿ ಜಾರಿಗೆ ಬಂದ 2017 ಅಕ್ಟೋಬರ್ನಲ್ಲಿ ವಿತರಿಸಿದ ಸೆಬಿಯ ಉತ್ಪನ್ನ ವರ್ಗೀಕರಣ ಸುತ್ತೋಲೆಯ ಪ್ರಕಾರ, ಈಕ್ವಿಟಿ ಫಂಡ್ಗಳನ್ನು ಅದರ ಪೋರ್ಟ್ಫೋಲಿಯೋದಲ್ಲಿ ಹೊಂದಿರುವ ಷೇರುಗಳ ವಿಧಗಳನ್ನು ಆಧರಿಸಿ ಲಾರ್ಜ್ ಕ್ಯಾಪ್ಗಳು, ಮಿಡ್ ಕ್ಯಾಪ್ಗಳು ಮತ್ತು ಸ್ಮಾಲ್ ಕ್ಯಾಪ್ಗಳನ್ನಾಗಿ ವರ್ಗೀಕರಿಸಬಹುದಾಗಿದೆ. ಭಾರತದಲ್ಲಿ ವಿವಿಧ ಎಕ್ಸ್ಚೇಂಜ್ಗಳಲ್ಲಿ ಹಲವು ಸಾರ್ವಜನಿಕವಾಗಿ ಲಿಸ್ಟ್ ಆದ ಕಂಪನಿಗಳಿವೆ. ಸಂಪೂರ್ಣ ಮಾರ್ಕೆಟ್ ಬಂಡವಾಳದ ಪ್ರಕಾರ ಭಾರತದಲ್ಲಿನ ಅಗ್ರ 100 ಸಾರ್ವಜನಿಕ ಲಿಸ್ಟೆಡ್ ಕಂಪನಿಗಳನ್ನು ಲಾರ್ಜ್ ಕ್ಯಾಪ್ ಉಲ್ಲೇಖಿಸುತ್ತದೆ (ಮಾರ್ಕೆಟ್ ಬಂಡವಾಳ = ಸಾರ್ವಜನಿಕವಾಗಿ ಲಿಸ್ಟೆಡ್ ಷೇರುಗಳು * ಪ್ರತಿ ಷೇರಿನ ಬೆಲೆ). ಸಂಪೂರ್ಣ ಮಾರ್ಕೆಟ್ ಬಂಡವಾಳೀಕರಣದ ವಿಚಾರದಲ್ಲಿ ಮಿಡ್ ಕ್ಯಾಪ್ ಎಂಬುದು 101 ರಿಂದ 250 ನೇ ಕಂಪನಿಯಾಗಿದ್ದು, 251ನೇ ಕಂಪನಿಯ ನಂತರದ್ದನ್ನು ಸ್ಮಾಲ್ ಕ್ಯಾಪ್ಗಳು ಎಂದು ಕರೆಯಲಾಗುತ್ತದೆ.
ಊಹೆ ಮಾಡಬಹುದಾದ ಮತ್ತು ಸ್ಥಿರ ಬೆಳವಣಿಗೆ ಸಾಧ್ಯತೆ ಹೊಂದಿರುವ
ಇನ್ನಷ್ಟು ಓದಿ