ಸ್ಕೀಮ್‌ನ ಪೋರ್ಟ್‌ಫೋಲಿಯೋಗೆ ಸಂಬಂಧಿಸಿದ ಹೂಡಿಕೆ ಚಟುವಟಿಕೆಗಳಿಂದ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಮಾಡಿದ ಲಾಭವನ್ನು ಆಧರಿಸಿ ಡಿವಿಡೆಂಡ್‌ಗಳನ್ನು ಪಾವತಿ ಮಾಡಲಾಗುತ್ತದೆ ಮತ್ತು ಇದು ಟ್ರಸ್ಟೀ ವಿವೇಚನೆಗೆ ಒಳಪಟ್ಟಿರುತ್ತದೆ. ಮಾರುಕಟ್ಟೆ ಬೀಳುವಾಗ ಸ್ಕೀಮ್ ನಷ್ಟ ಅನುಭವಿಸಿದರೆ, ಡಿವಿಡೆಂಡ್ ಪೇಔಟ್ ಘೋಷಣೆ ಮಾಡದಿರಲು ಟ್ರಸ್ಟೀಗಳು ನಿರ್ಧರಿಸಬಹುದು. ಡಿವಿಡೆಂಡ್ ಲಾಭ ಅಥವಾ ಆದಾಯವಾಗಿದ್ದರಿಂದ, ಇದನ್ನು ತೆರಿಗೆಗೆ ಒಳಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಡಿವಿಡೆಂಡ್‌ಗಳ ಮೇಲೆ ಅನ್ವಯಿಸುವ ತೆರಿಗೆಯನ್ನು ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ತೆರಿಗೆ (ಡಿಡಿಟಿ) ಎಂದು ಕರೆಯಲಾಗಿದೆ. ಈ ಹಿಂದೆ ಡಿವಿಡೆಂಡ್‌ಗಳಿಗೆ ಮೂಲದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಅಂದರೆ, ಹೂಡಿಕೆದಾರರಿಗೆ ವಿತರಣೆ ಮಾಡುವುದಕ್ಕೂ ಮೊದಲು ಸ್ಕೀಮ್ ಡಿಡಿಟಿ ಅನ್ನು ಪಾವತಿ ಮಾಡಬೇಕಾಗಿತ್ತು. ಇದರಿಂದ ಡಿವಿಡೆಂಡ್ ಪೇಔಟ್‌ನ ಮೊತ್ತವನ್ನು ಕಡಿಮೆ ಮಾಡುತ್ತಿತ್ತು. ಆದರೆ, ಹೂಡಿಕೆದಾರರ ಕಡೆಯಿಂದ ತೆರಿಗೆ ವಿಧಿಸಲಾಗುತ್ತಿರಲಿಲ್ಲ.
2020 ಏಪ್ರಿಲ್ 1 ರಿಂದ, ಡಿಡಿಟಿ ಅನ್ನು ತೆಗೆದುಹಾಕಲಾಗಿದೆ ಮತ್ತು ಮ್ಯೂಚುವಲ್ ಫಂಡ್ ಡಿವಿಡೆಂಡ್‌ಗಳ ಮೇಲೆ ಹೂಡಿಕೆದಾರರಿಗೆ ತೆರಿಗೆ ವಿಧಿಸಲಾಗುತ್ತದೆ. ಈಗ ಡಿವಿಡೆಂಡ್ ಆದಾಯವನ್ನು ಇತರ ಮೂಲಗಳಿಂದ ಪಡೆದ ಆದಾಯ ಎಂದು ಪರಿಗಣಿಸಲಾಗುತ್ತದೆ ಮತ್ತು ಹೂಡಿಕೆದಾರರು ತಮ್ಮ ತೆರಿಗೆ ಸ್ಲ್ಯಾಬ್‌ಗಳನ್ನು ಆಧರಿಸಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ಈ ಹಿಂದಿನ ಡಿಡಿಟಿ ತೆರಿಗೆಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ ಡಿವಿಡೆಂಡ್ ತೆರಿಗೆಯಿಂದ ಆಗುವ ಅನುಕೂಲ ಅಥವಾ ನಷ್ಟವು ವ್ಯಕ್ತಿ ತೆರಿಗೆ ಸ್ಲ್ಯಾಬ್ ಅನ್ನು ಆಧರಿಸಿರುತ್ತದೆ.
ಈ ಹಿಂದೆ, ಸ್ಕೀಮ್‌ನಿಂದ ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ತೆರಿಗೆಯನ್ನು ಕಡಿತಗೊಳಿಸಿದ ನಂತರ
ಇನ್ನಷ್ಟು ಓದಿ