ದೀರ್ಘಕಾಲದವರೆಗೆ ಹೂಡಿಕೆ ಮಾಡಿದ್ದಾಗ ಮಧ್ಯದಲ್ಲಿ ಮಾರ್ಕೆಟ್ ಕುಸಿದರೆ ಏನಾಗುತ್ತದೆ?

Video

ಎಸ್‌ಐಪಿಗಳ ಮೂಲಕ ದೀರ್ಘಕಾಲೀನ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಹೂಡಿಕೆದಾರರು ಈ ಅವಧಿಯಲ್ಲಿ ಮಾರ್ಕೆಟ್‌ ಕುಸಿತದ ಬಗ್ಗೆ ಚಿಂತೆ ಹೊಂದಿರುತ್ತಾರೆ. ಮಾರ್ಕೆಟ್ ಟೈಮಿಂಗ್ ಮತ್ತು ಅಸ್ಥಿರತೆಯಂತಹ ಕೆಲವು ಮ್ಯೂಚುವಲ್‌ ಫಂಡ್‌ ರಿಸ್ಕ್‌ಗಳನ್ನು ನಿವಾರಿಸುವ ಉದ್ದೇಶದಿಂದ ಎಸ್‌ಐಪಿಗಳನ್ನು ವಿನ್ಯಾಸ ಮಾಡಲಾಗಿರುತ್ತದೆ.

ಎಸ್‌ಐಪಿಗಳ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ನಿಯತವಾಗಿ ಹೂಡಿಕೆ ಮಾಡಿದಾಗ ರೂಪಾಯಿ ವೆಚ್ಚ ಸರಾಸರಿಯ ಮೂಲಕ ಮಾರ್ಕೆಟ್ ಅಸ್ಥಿರತೆಯನ್ನು ನೀವು ಗೆಲ್ಲಬಹುದು. ಇಲ್ಲಿ ನೀವು ಎನ್‌ಎವಿ ಕಡಿಮೆ ಇದ್ದಾಗ ಹೆಚ್ಚು ಯೂನಿಟ್ ಖರೀದಿ ಮಾಡುತ್ತೀರಿ ಮತ್ತು ಎನ್‌ಎವಿ ಹೆಚ್ಚು ಇದ್ದಾಗ ಕಡಿಮೆ ಯೂನಿಟ್ ಖರೀದಿ ಮಾಡಿರುತ್ತೀರಿ. ಎನ್‌ಎವಿ ಎರಡೂ ದಿಕ್ಕಿಗೆ ಚಲಿಸಿದಾಗ ದೀರ್ಘಕಾಲದಲ್ಲಿ ಪ್ರತಿ ಯೂನಿಟ್‌ನ ವೆಚ್ಚವು ಸರಾಸರಿಯಾಗುತ್ತದೆ. ಉದಾಹರಣೆಗೆ, ಪ್ರತಿ ತಿಂಗಳು ನೀವು ರೂ. 1,000/- ಅನ್ನು ಹೂಡಿಕೆ ಮಾಡಿದಾಗ, ಎನ್‌ಎವಿ ರೂ. 10 ಆಗಿದ್ದರೆ ನೀವು 100 ಯೂನಿಟ್‌ಗಳನ್ನು ಖರೀದಿಸಿರುತ್ತೀರಿ ಮತ್ತು ಎನ್‌ಎವಿ ರೂ. 5 ಕ್ಕೆ ಇಳಿದಾಗ 200 ಯೂನಿಟ್‌ಗಳನ್ನು ಖರೀದಿ ಮಾಡಿರುತ್ತೀರಿ. ದೀರ್ಘಕಾಲದಲ್ಲಿ ಮಾರ್ಕೆಟ್‌ ಎರಡೂ ಕಡೆಗೆ ಚಲಿಸುತ್ತಿದ್ದಾಗ ಪ್ರತಿ ಯೂನಿಟ್‌ನ ಸರಾಸರಿ ಬೆಲೆ ಇಳಿಕೆಯಾಗುತ್ತದೆ. ಇದರಿಂದಾಗಿ ರಿಟರ್ನ್ಸ್‌ನಲ್ಲಿ ಅಸ್ಥಿರತೆಯೂ ಕಡಿಮೆಯಾಗುತ್ತದೆ.

ನೀವು ಒಟ್ಟಾರೆ ಮೊತ್ತವನ್ನು ಹೂಡಿಕೆ ಮಾಡಿದರೆ, ಇಡೀ ಹೋಲ್ಡಿಂಗ್ ಅವಧಿಯಲ್ಲಿ ಯೂನಿಟ್‌ಗಳ ಸಂಖ್ಯೆ ಒಂದೇ ಆಗಿರುತ್ತದೆ. ಆದರೆ ಅದರ ಮೌಲ್ಯವು ಮಾರ್ಕೆಟ್ ಇಳಿದಾಗ ಎನ್‌ಎವಿ ಇಳಿಕೆಯಿಂದಾಗಿ ಕಡಿಮೆಯಾಗುತ್ತದೆ. ಒಂದು ಈಕ್ವಿಟಿ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??