ನೀವು ನಗರದಲ್ಲಿ ಒಂದು ಸುತ್ತು ಹಾಕಿದಾಗ, ಕೆಲವು ಬಾರಿ ನಿಮಗೆ ಖಾಲಿ ರಸ್ತೆ ಸಿಗುತ್ತದೆ. ಆಗ ನೀವು ಗಂಟೆಗೆ 80 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು ಮತ್ತು ಟ್ರಾಫಿಕ್ ಅಥವಾ ಸ್ಪೀಡ್ ಬ್ರೇಕರ್ ಇದ್ದಾಗ ಗಂಟೆಗೆ 20 ಕಿ.ಮೀ ವೇಗದಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಂತಿಮವಾಗಿ, ನೀವು ಎಷ್ಟು ಬಾರಿ ನಿಧಾನವಾಗಿ ಪ್ರಯಾಣಿಸಬೇಕು ಅಥವಾ ವೇಗವಾಗಿ ಸಾಗಬೇಕು ಎಂಬುದನ್ನು ಅಧರಿಸಿ ಗಂಟೆಗೆ 45 ಕಿ.ಮೀ ಅಥವಾ ಗಂಟೆಗೆ 55 ಕಿ.ಮೀ ಸರಾಸರಿ ವೇಗವನ್ನು ನೀವು ಸಾಧಿಸುತ್ತೀರಿ.
ನಗರದಲ್ಲಿ ನೀವು ವೇಗವೂ ಅಲ್ಲದಂತೆ ನಿಧಾನವೂ ಅಲ್ಲದಂತೆ ಪ್ರಯಾಣ ಮಾಡುವ ಹಾಗೆ, ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದರಿಂದ ಅತ್ಯಂತ ಆರಾಮವಾಗಿ ಮಾರುಕಟ್ಟೆಯ ಏಳು ಬೀಳುಗಳಲ್ಲಿ ನೀವು ಹೂಡಿಕೆ ಮಾಡಬಹುದು. ಮಾರುಕಟ್ಟೆಯ ಏಳುಬೀಳುಗಳನ್ನು ನಿಖರವಾಗಿ ಊಹಿಸುವುದು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತು. ಹೀಗಾಗಿ, ಮಾರುಕಟ್ಟೆಯ ಏಳು ಬೀಳುಗಳಲ್ಲಿ ಹೂಡಿಕೆ/ಖರೀದಿ ಮಾಡುವುದು ಉತ್ತಮ ವಿಧಾನವಾಗಿದೆ. ಇಂತಹ ಸನ್ನಿವೇಶದಲ್ಲಿ, ಹೂಡಿಕೆಗೆ ಶಿಸ್ತುಬದ್ಧವಾದ ವಿಧಾನವು ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವನ್ನು ಉತ್ತಮವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ದೀರ್ಘ ಸಮಯದಲ್ಲಿ ಪ್ರತಿ ತಿಂಗಳೂ ನಿಗದಿತ ದಿನಾಂಕದಂದು ಮ್ಯೂಚುವಲ್ ಫಂಡ್ನಲ್ಲಿ ನಿಗದಿತ ಮೊತ್ತವನ್ನು ನೀವು ಹೂಡಿಕೆ ಮಾಡಿದಾಗ, ನಿಮ್ಮ ಹೂಡಿಕೆಯ ಮೇಲೆ ಮಾರುಕಟ್ಟೆ ಅಸ್ಥಿರತೆಯ ಹೊರೆ ಕಡಿಮೆಯಾಗುತ್ತದೆ. ಯಾಕೆಂದರೆ, ಮಾರುಕಟ್ಟೆಯಲ್ಲಿ ಕುಸಿತ ಉಂಟಾದಾಗ ಹೆಚ್ಚು ಯುನಿಟ್ಗಳನ್ನು ಮತ್ತು ಮಾರುಕಟ್ಟೆ ಏರಿಕೆ ಕಂಡಾಗ ಅದೇ ಮೊತ್ತದಲ್ಲಿ ಕಡಿಮೆ ಯುನಿಟ್ಗಳನ್ನು ಖರೀದಿಸಿರುತ್ತೀರಿ. ಹೀಗಾಗಿ,