ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆಯನ್ನು ಸಾಮಾನ್ಯವಾಗಿ ರಿಟರ್ನ್ಸ್ ಅಥವಾ ಕಾರ್ಯಕ್ಷಮತೆ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ. ಮ್ಯೂಚುವಲ್ ಫಂಡ್‌ಗಳನ್ನು ಮೌಲ್ಯೀಕರಿಸಲು ಬಳಸಲಾಗುವ ಎರಡು ಅತ್ಯಂತ ಪ್ರಮುಖ ಕಾರ್ಯಕ್ಷಮತೆ ಮಾನದಂಡಗಳೆಂದರೆ:
(ಎ) ಟ್ರೇಲಿಂಗ್ ರಿಟರ್ನ್ಸ್
(ಬಿ) ರೋಲಿಂಗ್ ರಿಟರ್ನ್ಸ್
ಹೀಗಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ ರಿಟರ್ನ್ಸ್ ಅನ್ನು ಲೆಕ್ಕಾಚಾರ ಮಾಡಲು ವಿಶಾಲವಾಗಿ ಬಳಸುವ ಎರಡು ವಿಧಾನಗಳ ಹಿಂದಿನ ಪರಿಕಲ್ಪನೆಗಳನ್ನು ಮತ್ತು ಅವುಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ನಾವು ಅರ್ಥ ಮಾಡಿಕೊಳ್ಳೋಣ. ಸ್ಕೀಮ್ ಅದರ ಬೆಂಚ್‌ಮಾರ್ಕ್‌ಗೆ ಹೋಲಿಕೆ ಮಾಡಿದಾಗ ಸ್ಕೀಮ್ ಪ್ರಕಾರ ಹೆಚ್ಚು ಕಾರ್‍ಯಕ್ಷಮತೆ ಹೊಂದಿರುತ್ತದೆ ಅಥವಾ ಕಡಿಮೆ ಕಾರ್ಯಕ್ಷಮತೆ ಹೊಂದಿರುತ್ತದೆ ಎಂದು ಸ್ಕೀಮ್‌ನ ರಿಟರ್ನ್ಸ್ ಅನ್ನು ಲೆಕ್ಕ ಮಾಡುತ್ತದೆ.
ಟ್ರೇಲಿಂಗ್ ರಿಟರ್ನ್ಸ್:
ಎರಡು ನಿರ್ದಿಷ್ಟ ದಿನಾಂಕಗಳ ಮಧ್ಯೆ ಒಂದು ಫಂಡ್ ಹೇಗೆ ಕಾರ್ಯನಿರ್ವಹಿಸಿದೆ ಎಂಬುದನ್ನು ಅಳೆಯುವುದಕ್ಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಟ್ರೇಲಿಂಗ್ ರಿಟರ್ನ್ಸ್ ಎಂಬುದು ಒಂದು ವಿಧಾನವಾಗಿದೆ. ಟ್ರೇಲಿಂಗ್ ರಿಟರ್ನ್ಸ್ ಅನ್ನು ಸಾಮಾನ್ಯವಾಗಿ “ಪಾಯಿಂಟ್ ಟು ಪಾಯಿಂಟ್” ರಿಟರ್ನ್ಸ್ ಎಂದೂ ಕರೆಯಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ಫಂಡ್‌ನ ಪರ್ಫಾರ್ಮೆನ್ಸ್‌ನ ಸಂಕ್ಷಿಪ್ತ ಅವಲೋಕನವನ್ನು ಅವು ನೀಡುತ್ತವೆ. ಇವುಗಳನ್ನು ವಿವಿಧ ಕಾಲಾವಧಿಯಲ್ಲಿ ಲೆಕ್ಕ ಮಾಡಬಹುದು. ಉದಾಹರಣೆಗೆ, ಈ ದಿನಾಂಕದಿಂದ ಹಿಂದಿನ ಒಂದು ವರ್ಷದವರೆಗೆ (ವೈಟಿಡಿ), ಒಂದು ವರ್ಷ, ಮೂರು ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಲೆಕ್ಕ ಮಾಡಬಹುದು ಅಥವಾ ಫಂಡ್‌ನ ಆರಂಭದಿಂದ ಈ ದಿನದವರೆಗಿನ ಅವಧಿಯಲ್ಲೂ ಲೆಕ್ಕ ಮಾಡಬಹುದು.
ರೋಲಿಂಗ್ ರಿಟರ್ನ್ಸ್:
ರೋಲಿಂಗ್ ರಿಟರ್ನ್ಸ್