ನಿವೃತ್ತಿಗೆ ಹಣಕಾಸು ಯೋಜನೆಯನ್ನು ಆರಂಭಿಸಲು ಸರಿಯಾದ ವಯಸ್ಸು ಯಾವುದು?

ನಿವೃತ್ತಿಗೆ ಹಣಕಾಸು ಯೋಜನೆಯನ್ನು ಆರಂಭಿಸಲು ಸರಿಯಾದ ವಯಸ್ಸು ಯಾವುದು?

ನಿಮ್ಮ ವಯಸ್ಸು ಯಾವುದೇ ಆಗಿರಲಿ ಮತ್ತು ಹಣಕಾಸು ಸ್ಥಿತಿ ಯಾವುದೇ ಇರಲಿ ಇಂದೇ ಹೂಡಿಕೆಯನ್ನು ಆರಂಭಿಸುವುದೇ ನಿವೃತ್ತಿಗಾಗಿ ಯೋಜನೆ ಮಾಡುವುದು ಮತ್ತು ಹೂಡಿಕೆ ಮಾಡುವುದಕ್ಕೆ ಸೂಕ್ತ ಸಮಯವಾಗಿದೆ. ಗುರಿಗೆ ನೀವು ಹೂಡಿಕೆ ಮಾಡಲು ಶೀಘ್ರವಾಗಿ ನಿರ್ಧರಿಸಿದಷ್ಟೂ, ನಿಮ್ಮ ಹಣ ಸಂಚಯವಾಗಲು ಹೆಚ್ಚು ಸಮಯ ಸಿಗುತ್ತದೆ. ಒಂದು ವೇಳೆ, ನೀವು ಇಂದು 30 ವರ್ಷ ವಯಸ್ಸಿನವರಾಗಿದ್ದು, ಮುಂದಿನ 30 ವರ್ಷಗಳವರೆಗೆ ಮಾಸಿಕ 2000 ರೂ. ಎಸ್‌ಐಪಿ ಮಾಡುತ್ತೀರಿ. ನಿಮ್ಮ ಹಣವು ಸಂಚಯಗೊಳ್ಳಲು ಮತ್ತು ಬೆಳೆಯಲು ಹೆಚ್ಚು ಸಮಯವನ್ನು ನೀಡುತ್ತದೆ. ನೀವು ವಾರ್ಷಿಕ ಶೇ.12 ರಷ್ಟು ಬಡ್ಡಿ ದರವನ್ನು ಪಡೆಯುತ್ತೀರಿ ಎಂದು ಊಹಿಸಿದರೆ, ನಿಮ್ಮ ನಿವೃತ್ತಿ ಮೊತ್ತವು 70 ಲಕ್ಷ ರೂ. ಆಗಿರುತ್ತದೆ. ಈ 30 ವರ್ಷಗಳಲ್ಲಿ ನೀವು 7.2 ಲಕ್ಷ ರೂ. ಅನ್ನು ಹೂಡಿಕೆ ಮಾಡಿರುತ್ತೀರಿ. 

ಒಂದು ದಶಕದ ನಂತರ ನೀವು ಇದೇ ಎಸ್‌ಐಪಿ ಅನ್ನು ಹೂಡಿಕೆ ಮಾಡಲು ಆರಂಭಿಸಿದರೆ, 4.8 ಲಕ್ಷ ರೂ.ಗಳಿಗೆ 20 ವರ್ಷಗಳಿಗೆ ನೀವು ಕೇವಲ 20 ಲಕ್ಷವನ್ನು ಪಡೆಯುತ್ತೀರಿ. 10 ವರ್ಷದ ವಿಳಂಬವನ್ನು ಹೂಡಿಕೆ ಮಾಡುವಲ್ಲಿ ನೀವು ಮಾಡಿದರೆ, ನಿಮ್ಮ ನಿವೃತ್ತಿ ಮೊತ್ತವು ಮೂರರಲ್ಲಿ ಒಂದರಷ್ಟು ಕಡಿಮೆಯಾಗುತ್ತದೆ. ದುರಾದೃಷ್ಟವಶಾತ್‌, ದೀರ್ಘಕಾಲದಲ್ಲಿ ಸಂಚಯವಾಗುವ ಶಕ್ತಿಯನ್ನು ಬಹುತೇಕ ಜನರು ತಿಳಿದುಕೊಳ್ಳುವುದಿಲ್ಲ ಮತ್ತು ನಿಧಾನವಾಗಿ ಆರಂಭಿಸುವ ಮೂಲಕ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಸೃಷ್ಟಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಕೆಲವು ವರ್ಷಗಳು ತಡವಾಗಿ ಹೂಡಿಕೆ ಆರಂಭ ಮಾಡುವುದು ಸಮಯದ ನಷ್ಟವಾಗುತ್ತದೆ. ಹೀಗಾಗಿ ಹಣವು ದುಪ್ಪಟ್ಟಾಗಲು ಅವಕಾಶ ಕಡಿಮೆ ಇರುತ್ತದೆ.

ತಮ್ಮ ಮೊದಲ ಉದ್ಯೋಗವನ್ನು ಆರಂಭಿಸುತ್ತಿದ್ದಂತೆಯೇ ಎಲ್ಲರೂ ಈ ಗುರಿಗಳಿಗೆ ಹೂಡಿಕೆ ಮಾಡಲು ಮತ್ತು ಯೋಜನೆ ಮಾಡಲು ಆರಂಭ ಮಾಡಬೇಕು. ಕೊನೆಯಲ್ಲಿ, ದೀರ್ಘಕಾಲದ ಹೂಡಿಕೆಯೇ ರೇಸ್‌ನಲ್ಲಿ ಗೆಲ್ಲುತ್ತದೆ. 

*ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ. ಮ್ಯೂಚುವಲ್ ಫಂಡ್ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??