ನಿವೃತ್ತಿಯ ವೇಳೆ ಆನ್ಯುಯಿಟಿ ರೂಪದಲ್ಲಿ ಖಚಿತ ಆದಾಯದ ಮೂಲವನ್ನು ಪಿಂಚಣಿ ಯೋಜನೆಗಳು ಒದಗಿಸುತ್ತವೆ. ಆದರೆ, ಇವು ತುರ್ತು ಪರಿಸ್ಥಿತಿಗಳಿಗೆ ತಕ್ಷಣದ ಲಿಕ್ವಿಡಿಟಿ ಒದಗಿಸುವುದಿಲ್ಲ ಮತ್ತು ವೈವಿಧ್ಯತೆ ಮತ್ತು ಹೂಡಿಕೆ ವಿಧಗಳಿಗೆ ಹೋಲಿಸಿದರೆ ಸೀಮಿತ ಆಯ್ಕೆಗಳನ್ನು ಒದಗಿಸುತ್ತವೆ. ಪಿಂಚಣಿ ಯೋಜನೆಗೆ ಪಾವತಿ ಮಾಡುವ ಪ್ರೀಮಿಯಂಗಳ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ.
ಇಎಲ್‌ಎಸ್‌ಎಸ್ ಫಂಡ್‌ನಲ್ಲಿ ನೀವು ಹೂಡಿಕೆ ಮಾಡದೇ ಇದ್ದರೆ ಮ್ಯೂಚುವಲ್ ಫಂಡ್‌ಗಳ ಮೇಲಿನ ಹೂಡಿಕೆಗೆ ತೆರಿಗೆ ವಿಧಿಸುವುದಿಲ್ಲ. ಆದರೆ ನಿಮಗೆ ಅಗತ್ಯವಿರುವ ನಿವೃತ್ತಿಯ ಯೋಜನೆಯನ್ನು ವಿನ್ಯಾಸ ಮಾಡುವಲ್ಲಿ ಹೆಚ್ಚು ವೈವಿಧ್ಯತೆ ಮತ್ತು ಅನುಕೂಲತೆಯನ್ನು ಇವು ಒದಗಿಸುತ್ತವೆ. ನೀವು ಯುವಕರಾಗಿದ್ದರೆ, ನಿಮ್ಮ ರಿಸ್ಕ್ ಆದ್ಯತೆಯನ್ನು ಆಧರಿಸಿ ಈಕ್ವಿಟಿ ಫಂಡ್‌ಗಳಲ್ಲಿ ಎಸ್‌ಐಪಿ ಅನ್ನು ನೀವು ಆರಂಭಿಸಬಹುದು. ಈ ಸಮಯದಲ್ಲಿ ನೀವು ಉತ್ತಮ ನಿಧಿಯನ್ನು ಸಂಗ್ರಹಿಸಬಹುದು. ಮತ್ತು ಇದನ್ನು ನಿಮ್ಮ ರಿಸ್ಕ್ ಅನ್ನು ಕಡಿಮೆ ಮಾಡಲು ನಿವೃತ್ತಿಯ 2-3 ವರ್ಷಗಳಿಗೂ ಮೊದಲು ಎಸ್‌ಟಿಪಿ (ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್) ಮೂಲಕ ಶಾರ್ಟ್ ಟರ್ಮ್ ಡೆಟ್ ಫಂಡ್‌ಗಳಿಗೆ ವರ್ಗಾವಣೆ ಮಾಡಬಹುದು.
ಎಸ್ಐಪಿ ಮೂಲಕ ನೀವು ನಿಮ್ಮ ನಿವೃತ್ತಿಗೆ ಉತ್ತಮ ಯೋಜನೆಯನ್ನು ರೂಪಿಸದೇ, ನಿವೃತ್ತಿಗೂ ಸ್ವಲ್ಪ ಮೊದಲು ಈ ಬಗ್ಗೆ ಯೋಚನೆ ಮಾಡಿದರೆ, ನಿಮ್ಮ ಒಟ್ಟು ಉಳಿತಾಯವನ್ನು ಹೂಡಿಕೆ ಮಾಡಿ ಮತ್ತು ನಿವೃತ್ತಿಯ ನಂತರ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತವನ್ನು ಹಿಂಪಡೆಯಲು ಎಸ್‌ಡಬ್ಲ್ಯೂಪಿ ಬಳಸಿ.
ಪಿಂಚಣಿ ಯೋಜನೆಗಳು ಸಂರಕ್ಷಣಾತ್ಮಕ
ಇನ್ನಷ್ಟು ಓದಿ