ಭಾರತದಲ್ಲಿ ಮ್ಯೂಚುವಲ್ ಫಂಡ್ಸ್ ಅನ್ನು ಯಾರು ನಿಯಂತ್ರಿಸುತ್ತಾರೆ?

ಭಾರತದಲ್ಲಿ ಮ್ಯೂಚುವಲ್ ಫಂಡ್ಸ್ ಅನ್ನು ಯಾರು ನಿಯಂತ್ರಿಸುತ್ತಾರೆ? zoom-icon

ಮ್ಯೂಚುವಲ್ ಫಂಡ್‌ಗಳು ಆಧುನಿಕ ದಿನದ ಸುಲಭ ಹೂಡಿಕೆ ವಿಧಾನವಾಗಿದೆ. ಹೀಗಾಗಿ, ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮವನ್ನು ಯಾರು ನಿಯಂತ್ರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಭಾರತೀಯ ಷೇರು ವಿನಿಮಯ ಮಂಡಳಿ ಅಥವಾ ಸೆಬಿ ಭಾರತದಲ್ಲಿ ಮ್ಯೂಚುವಲ್ ಫಂಡ್‌ನ ಎಲ್ಲ ಅಂಶಗಳನ್ನೂ ನಿಯಂತ್ರಿಸುತ್ತದೆ. ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಪಾರದರ್ಶಕತೆ, ನ್ಯಾಯೋಚಿತತೆ ಮತ್ತು ಹೂಡಿಕೆದಾರರ ರಕ್ಷಣೆಯನ್ನು ಖಾತ್ರಿಪಡಿಸಲು ಕಟ್ಟುನಿಟ್ಟಿನ ನಿಯಮ ಮತ್ತು ನೀತಿಗಳನ್ನು ರೂಪಿಸಿದೆ.

1988 ರಲ್ಲಿ ಸೆಬಿ ಸ್ಥಾಪನೆಯಾಯಿತು ಮತ್ತು ಭಾರತೀಯ ಷೇರು ವಿನಿಮಯ ಮಂಡಳಿ ಕಾಯ್ದೆ 1992 ರ ಕಾನೂನು ಬೆಂಬಲವೂ ಅದಕ್ಕಿದೆ. 

ಟ್ರಸ್ಟ್‌ನ ರೂಪದಲ್ಲಿ ಮ್ಯೂಚುವಲ್ ಫಂಡ್ ಅನ್ನು ಸೆಟಪ್ ಮಾಡಲಾಗಿದೆ. ಇದಕ್ಕೆ ಪ್ರಾಯೋಜಕರು, ಟ್ರಸ್ಟೀಗಳು, ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (ಎಎಂಸಿ) ಮತ್ತು ಕಸ್ಟೋಡಿಯನ್ ಇರುತ್ತಾರೆ. ಕಂಪನಿಗೆ ಪ್ರಮೋಟರ್ ಇರುವ ಹಾಗೆ ಟ್ರಸ್ಟ್‌ಗೆ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಪ್ರಾಯೋಜಕರು ಇರುತ್ತಾರೆ. ಮ್ಯೂಚುವಲ್ ಫಂಡ್‌ನ ಟ್ರಸ್ಟೀಗಳು ಯುನಿಟ್‌ಹೋಲ್ಡರ್‌ಗಳ ಅನುಕೂಲಕ್ಕೆ ತಮ್ಮ ಪ್ರಾಪರ್ಟಿಯನ್ನು ಇಟ್ಟುಕೊಳ್ಳುತ್ತಾರೆ. ಸೆಬಿಯಿಂದ ಅನುಮತಿ ಪಡೆದ ಎಂಸಿಯು ವಿವಿಧ ರೀತಿಯ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಫಂಡ್‌ಗಳನ್ನು ನಿರ್ವಹಿಸುತ್ತದೆ. ಸೆಬಿಯಲ್ಲಿ ಕಸ್ಟೋಡಿಯನ್ ಕೂಡಾ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಫಂಡ್‌ನ ವಿವಿಧ ಸ್ಕೀಮ್‌ಗಳ ಸೆಕ್ಯುರಿಟಿಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಎಎಂಸಿಯ ಮೇಲ್ವಿಚಾರಣೆ ಮತ್ತು ನಿರ್ದೇಶನದ ಸಾಮಾನ್ಯ ಅಧಿಕಾರವನ್ನು ಟ್ರಸ್ಟೀಗಳು ಹೊಂದಿರುತ್ತಾರೆ. ಸೆಬಿ ನಿಯಮಗಳನ್ನು ಮ್ಯೂಚುವಲ್ ಫಂಡ್‌ ಅನುಸರಿಸುತ್ತದೆಯೇ ಎಂದು ಮತ್ತು ಮ್ಯೂಚುವಲ್ ಫಂಡ್‌ನ ಕಾರ್ಯಕ್ಷಮತೆಯನ್ನು ಅವರು ಮೇಲ್ವಿಚಾರಣೆ ಮಾಡುತ್ತಾರೆ. ಟ್ರಸ್ಟೀ ಕಂಪನಿ ಅಥವಾ ಟ್ರಸ್ಟೀ ಮಂಡಳಿಯ ಕನಿಷ್ಠ ಮೂರರಲ್ಲಿ ಎರಡು ನಿರ್ದೇಶಕರು ಸ್ವತಂತ್ರವಾಗಿರಬೇಕು ಎಂಬ ನಿಯಮವನ್ನು ಸೆಬಿ ಹೊಂದಿದೆ. ಅಂದರೆ, ಅವರು ಪ್ರಾಯೋಜಕರಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರಬಾರದು. ಅಲ್ಲದೆ, ಎಎಂಸಿಯಲ್ಲಿ 50% ನಿರ್ದೇಶಕರು ಸ್ವತಂತ್ರವಾಗಿರಬೇಕು.

ಸೆಬಿ ಈ ಮುಂದಿನವುಗಳ ಉಸ್ತುವಾರಿ ಹೊಂದಿರುತ್ತದೆ:

ನೋಂದಣಿ ಮತ್ತು ಅನುಮೋದನೆ: ಮ್ಯೂಚುವಲ್ ಫಂಡ್‌ ಅನ್ನು ಸೆಬಿಯಲ್ಲಿ ನೋಂದಣಿ ಮಾಡಬೇಕು. ಪ್ರತಿ ಸ್ಕೀಮ್‌ಗಳ ಅಡಿಯಲ್ಲಿ ಸಾರ್ವಜನಿಕರಿಂದ ಹಣವನ್ನು ಇದು ಸಂಗ್ರಹಿಸಬಹುದು.

ಹೂಡಿಕೆದಾರರ ರಕ್ಷಣೆ: ನ್ಯಾಯೋಚಿತ ಮತ್ತು ನೈತಿಕ ಅಭ್ಯಾಸಗಳನ್ನು ಅನುಸರಿಸಲಾಗುತ್ತದೆ ಎಂದು ಖಚಿತಪಡಿಸಲು ಸೆಬಿ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಇದು ಮೋಸದ ಚಟುವಟಿಕೆಗಳು ಮತ್ತು ಹೂಡಿಕೆದಾರರಿಗೆ ಅಪಾಯವನ್ನು ಉಂಟುಮಾಡಬಹುದಾದ ಹಿತಾಸಕ್ತಿ ಸಂಘರ್ಷವನ್ನು ತಡೆಯುತ್ತದೆ.

ಬಹಿರಂಗಗೊಳಿಸುವಿಕೆ ಅಗತ್ಯಗಳು: ಕಾಲಕಾಲಕ್ಕೆ ಸೆಬಿ ನಿಗದಿಪಡಿಸುವ ನಿರ್ದಿಷ್ಟ ಬಹಿರಂಗಗೊಳಿಸುವಿಕೆ ನಿಯಮಗಳಿಗೆ ಮ್ಯೂಚುವಲ್ ಫಂಡ್‌ಗಳು ಬದ್ಧವಾಗಬೇಕು.

ನೀತಿ ಸಂಹಿತೆ: ನೈತಿಕ ವರ್ತನೆ ಮತ್ತು ವೃತ್ತಿಪರ ಮಾನದಂಡಗಳನ್ನು ಖಚಿತಪಡಿಸಲು ಮ್ಯೂಚುವಲ್ ಫಂಡ್‌ಗಳು, ಫಂಡ್ ಮ್ಯಾನೇಜರ್‌ಗಳು ಮತ್ತು ಮ್ಯೂಚುವಲ್ ಫಂಡ್‌ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಇತರ ಪ್ರಮುಖ ವ್ಯಕ್ತಿಗಳಿಗೆ ನೀತಿ ಸಂಹಿತೆಯನ್ನು ಸೆಬಿ ರೂಪಿಸುತ್ತದೆ.

ಸಕಾಲಿಕ ಪರಿಶೀಲನೆಗಳು ಮತ್ತು ಪರಿಷ್ಕರಣೆಗಳು: ನಿಯಂತ್ರಕ ರೂಪುರೇಷೆಯು ಸುಸ್ಥಿರವಾಗಿರುತ್ತದೆ ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸೆಬಿ ಖಾತ್ರಿಪಡಿಸುತ್ತದೆ.

ನಿರಂತರ ಮೇಲ್ವಿಚಾರಣೆ ಮತ್ತು ನಿಗಾ: ನಿಯಂತ್ರಕ ನಿಯಮಗಳಿಗೆ ಅನುಸರಣೆ ಮಾಡಲಾಗುತ್ತದೆ ಎಂದು ಖಚಿತಪಡಿಸಲು ಮ್ಯೂಚುವಲ್ ಫಂಡ್‌ಗಳ ಮೇಲೆ ನಿರಂತರವಾಗಿ ಮೇಲ್ವಿಚಾರಣೆ ಮತ್ತು ನಿಗಾವಣೆಯನ್ನು ಸೆಬಿ ನಡೆಸುತ್ತದೆ. ಸರಿಪಡಿಸುವಿಕೆ ಕ್ರಮಗಳನ್ನು ತೆಗೆದುಕೊಳ್ಳುವ, ದಂಡ ವಿಧಿಸುವ ಅಥವಾ ಯಾವುದೇ ಉಲ್ಲಂಘನೆಗಳು ಇದ್ದಲ್ಲಿ ನಿರ್ದೇಶನಗಳನ್ನು ಪ್ರಕಟಿಸುವ ಅಧಿಕಾರವನ್ನು ಇದು ಹೊಂದಿದೆ.

ಈ ಮೇಲಿನ ಎಲ್ಲ ಕ್ರಮಗಳನ್ನು ಭಾರತೀಯ ಷೇರು ವಿನಿಮಯ ಮಂಡಳಿಯು ಸೂಕ್ತ ಎಂದು ಭಾವಿಸಿದ ಕ್ರಮಗಳ ಮೂಲಕ ಷೇರುಗಳಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಷೇರು ಮಾರುಕಟ್ಟೆಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಮತ್ತು ಷೇರು ಮಾರುಕಟ್ಟೆಯನ್ನು ನಿಯಂತ್ರಿಸಲು ಕೈಗೊಳ್ಳುತ್ತದೆ. 

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285

ಮ್ಯೂಚುವಲ್‌ ಫಂಡ್‌ ಸೂಕ್ತವೇ??