ಮ್ಯೂಚುವಲ್ ಫಂಡ್ಗಳಲ್ಲಿ ಚಾಂಚಲ್ಯದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬಾರದು?

Video

ಲಾಂಗ್ ಡ್ರೈವ್ ಹೋಗುವಾಗ ನೀವು ವೇಗ ಅಥವಾ ತಲುಪುವ ಸ್ಥಳ ಅಥವಾ ಅಲ್ಲಿಗೆ ಹೋಗುವುದು ಹೇಗೆ ಎಂಬ ಬಗ್ಗೆ ಚಿಂತೆ ಮಾಡುತ್ತೀರಾ? ಖಂಡಿತವಾಗಿಯೂ, ನೀವು ರಸ್ತೆ ಅಡ್ಡಿಗಳ ಬಗ್ಗೆ ಯೋಚಿಸುವುದಿಲ್ಲ. ಬದಲಿಗೆ ಸುರಕ್ಷಿತವಾಗಿ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪುವುದು ಹೇಗೆ ಎಂಬುದರ ಮೇಲೆ ಗಮನ ಹರಿಸುತ್ತೀರಿ. ಇದೇ ಸಂಗತಿ ಮ್ಯೂಚುವಲ್ಫಂಡ್ಗಳಲ್ಲೂ ನಡೆಯುತ್ತದೆ. ನೀವು ನಿತ್ಯದ ಎನ್ಎವಿ ಫ್ಲಕ್ಚುವೇಶನ್ಗಳ ಬಗ್ಗೆ ಚಿಂತಿಸಬಾರದು. ಆದರೆ, ನೀವು ನಿಗದಿಸಿದ ಸಮಯಕ್ಕೆ ಹಣಕಾಸು ಗುರಿಯ ಬಳಿಗೆ ನಿಮ್ಮನ್ನು ಅದು ಕೊಂಡೊಯುತ್ತಿದೆಯೇ ಎಂಬುದರ ಮೇಲೆ ಗಮನ ಹರಿಸಬೇಕು.

ಡ್ರೈವ್ ವೇಳೆ, ನಿಮ್ಮ ವೇಗವು ಹಲವು ಸಂದರ್ಭಗಳಲ್ಲಿ ಸೊನ್ನೆಗೆ ಬರುತ್ತದೆ. ಆದರೆ, ನೀವು ರಸ್ತೆ ಅಡ್ಡಿಗಳನ್ನು ದಾಟಿದ ನಂತರ ವಾಹನ ವೇಗ ಪಡೆದುಕೊಳ್ಳುತ್ತದೆ ಮತ್ತು ಪಯಣ ಮುಂದುವರಿಯುತ್ತದೆ. ಟ್ರಿಪ್ನ ಕೊನೆಯಲ್ಲಿ, ನೀವು ಸ್ಥಳಕ್ಕೆ ತಲುಪಲು ಪಡೆದುಕೊಂಡ ಸರಾಸರಿ ವೇಗ ಎಷ್ಟಾಗಿತ್ತು ಎಂಬುದು ಪ್ರಮುಖವಾಗಿದೆ. ಇದೇ ರೀತಿ, ಅಲ್ಪಾವಧಿಯಲ್ಲಿ ಒಂದು ಮ್ಯೂಚುವಲ್ ಫಂಡ್ ಹಲವು ರಸ್ತೆ ಅಡ್ಡಿಗಳನ್ನು ಎದುರಿಸಬಹುದು. ಆದರೆ, ನೀವು ಹೆಚ್ಚು ಕಾಲ ಹೂಡಿಕೆ ಮಾಡಿದಷ್ಟೂ, ಈ ಏರಿಳಿತಗಳ ಪರಿಣಾಮ ಕಡಿಮೆಯಾಗುತ್ತದೆ ಮತ್ತು ಲಾಂಗ್ ಟ್ರಿಪ್ನಲ್ಲಿ ನಿಮ್ಮ ಕಾರಿನ ಸರಾಸರಿ ವೇಗದ ಹಾಗೆಯೇ ಪಾಸಿಟಿವ್ ರಿಟರ್ನ್ಗಳಿಸುವ ನಿಮ್ಮ ಸಾಧ್ಯತೆ ಹೆಚ್ಚುತ್ತದೆ.  

ಪ್ರತಿ ಆರ್ಥಿಕತೆ ಮತ್ತು ಅದಕ್ಕೆ ಅನುಗುಣವಾಗಿ ಮಾರ್ಕೆಟ್ ಕೂಡಾ ಬೆಳವಣಿಗೆ ಮತ್ತು ಕುಸಿತಕ್ಕೆ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??