ಹೂಡಿಕೆ ಮಾಡಲು ಸರಿಯಾದ ಮೊತ್ತದ ಬಗ್ಗೆ ಸಂಭಾವ್ಯ ಹೂಡಿಕೆದಾರರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಇರುಇರುತ್ತವೆ. ಜನರು ಮ್ಯೂಚುವಲ್ ಫಂಡ್ ಅನ್ನು ಇನ್ನೊಂದು ಹೂಡಿಕೆ ವಿಧಾನ ಮಾತ್ರ ಎಂದು ಭಾವಿಸುತ್ತಾರೆ. ನಿಜವಾಗಿಯೂ ಇದು ಒಂದು ಹೂಡಿಕೆ ವಿಧಾನವೇ? ಫಿಕ್ಸೆಡ್ ಡೆಪಾಸಿಟ್, ಡಿಬೆಂಚರ್ ಅಥವಾ ಕಂಪನಿಗಳ ಷೇರುಗಳ ರೀತಿಯಲ್ಲೇ ಇನ್ನೊಂದು ಹೂಡಿಕೆ ವಿಧಾನವಾಗಿ ಮ್ಯೂಚುವಲ್ ಫಂಡ್ ಇದೆಯೇ?
ಮ್ಯೂಚುವಲ್ ಫಂಡ್ ಎಂಬುದು ಹೂಡಿಕೆ ಮಾರ್ಗವಲ್ಲ. ಆದರೆ ಇದು ವಿವಿಧ ಹೂಡಿಕೆ ವಿಧಾನವನ್ನು ಆಕ್ಸೆಸ್ ಮಾಡಲು ಒಂದು ವಾಹಕವಷ್ಟೇ ಆಗಿದೆ.
ಇದನ್ನು ನೀವು ಈ ರೀತಿ ಯೋಚಿಸಬೇಕು. ನೀವು ಒಂದು ರೆಸ್ಟೋರೆಂಟ್ಗೆ ಹೋದಾಗ ಅ ಲಾ ಕಾರ್ಟೆ ಅಥವಾ ಬಫೆ/ಥಾಲಿ ಅಥವಾ ಫುಲ್ ಮೀಲ್ ಅನ್ನು ಆರ್ಡರ್ ಮಾಡುವ ಅವಕಾಶ ಹೊಂದಿರುತ್ತೀರಿ.
ಮ್ಯೂಚುವಲ್ ಫಂಡ್ ಜೊತೆಗೆ ಫುಲ್ ಥಾಲಿ ಅಥವಾ ಮೀಲ್ ಅನ್ನು ಹೋಲಿಕೆ ಮಾಡಿ. ನೀವು ಆರ್ಡರ್ ಮಾಡುವ ಬೇರೆ ಬೇರೆ ಐಟಂಗಳನ್ನು ಸ್ಟಾಕ್ಗಳು, ಬಾಂಡ್ಗಳು ಇತ್ಯಾದಿ ಎಂದು ಊಹಿಸಿಕೊಳ್ಳಿ. ಥಾಲಿ ಆರ್ಡರ್ ಮಾಡಿದರೆ ಆಯ್ಕೆ ಸುಲಭವಾಗುತ್ತದೆ, ಸಮಯ ಉಳಿಯುತ್ತದೆ ಮತ್ತು ಸ್ವಲ್ಪ ಹಣವೂ ಉಳಿಯುತ್ತದೆ.
ಪ್ರಮುಖ ಸಂಗತಿಯೆಂದರೆ ಹೂಡಿಕೆಯನ್ನು ಆದಷ್ಟು ಬೇಗ ಆರಂಭಿಸುವುದಾಗಿದೆ. ಮೊತ್ತ ಸಣ್ಣದ್ದೇ ಆಗಿದ್ದರೂ ನಿಮ್ಮ ಗಳಿಗೆ ಹೆಚ್ಚುತ್ತಿದ್ದಂತೆ ಹೂಡಿಕೆಯನ್ನು ನಿಧಾನವಾಗಿ ಹೆಚ್ಚಳಮಾಡಿ. ಇದು ದೀರ್ಘಕಾಲದಲ್ಲಿ ಉತ್ತಮ ರಿಟರ್ನ್ಸ್ ನೀಡುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತದೆ.