ಎಫ್ಎಂಪಿಗಳಿಂದ ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಹೇಗೆ ವಿಭಿನ್ನವಾಗಿದೆ?

ಎಫ್ಎಂಪಿಗಳಿಂದ ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಹೇಗೆ ವಿಭಿನ್ನವಾಗಿದೆ? zoom-icon

ಡೆಟ್ ಮ್ಯೂಚುವಲ್ ಫಂಡ್ ಹೂಡಿಕೆದಾರರು ಎರಡು ಪ್ರಾಥಮಿಕ ರಿಸ್ಕ್ಗಳಾದ, ಬಡ್ಡಿ ದರ ರಿಸ್ಕ್ ಮತ್ತು ಕ್ರೆಡಿಟ್ ರಿಸ್ಕ್ ಅನ್ನು ಎದುರಿಸುತ್ತಾರೆ. ಇದೇ ವೇಳೆ ದೀರ್ಘಾವಧಿಯ ಜಿ-ಸೆಕ್ ಕ್ರೆಡಿಟ್ ರಿಸ್ಕ್ ಅನ್ನು ಚೆನ್ನಾಗಿ ನಿರ್ವಹಿಸುತ್ತದೆ. ಇವು ಅಧಿಕ ಬಡ್ಡಿ ದರ ರಿಸ್ಕ್ಗೆ ಒಳಪಟ್ಟಿರುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅಲ್ಪಾವಧಿಯ ಫಂಡ್ಗಳು ಅಥವಾ ಲಿಕ್ವಿಡ್ ಫಂಡ್ಗಳು ಬಡ್ಡಿ ದರದ ರಿಸ್ಕ್ ಅನ್ನು ಉತ್ತಮವಾಗಿ ನಿರ್ವಹಿಸುತ್ತವೆ. ಆದರೆ, ಕ್ರೆಡಿಟ್ ಗುಣಮಟ್ಟ ಸಮಸ್ಯೆಯಿಂದ ಬಳಲುತ್ತವೆ.

ಎಫ್ಎಂಪಿಗಳು ಮತ್ತು ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಸ್ಥಿರ ಮೆಚ್ಯುರಿಟಿಗಳನ್ನು ಹೊಂದಿವೆ. ಹೀಗಾಗಿ, ಖರೀದಿ ಮತ್ತು ಇಟ್ಟುಕೊಳ್ಳುವುದು ಎಂಬ ಕಾರ್ಯತಂತ್ರದ ಮೂಲಕ ಬಡ್ಡಿ ದರದ ಅಪಾಯವನ್ನು ನಿರ್ವಹಿಸಲು ಉತ್ತಮ ಸ್ಥಾನವನ್ನು ಇವು ಹೊಂದಿವೆ. ಆದಾಗ್ಯೂ, ಕೆಲವು ವಿಚಾರದಲ್ಲಿ ಎಫ್ಎಂಪಿಗಳಿಗೂ ಹೆಚ್ಚಿನ ಅಂಕಗಳನ್ನು ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಹೊಂದಿವೆ. ಬಡ್ಡಿ ದರದ ರಿಸ್ಕ್ ಅನ್ನು ನಿರ್ವಹಿಸುವುದರ ಜೊತೆಗೆ, ಇವು ಜಿ-ಸೆಕ್ಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಎಎಎ ರೇಟ್ ಇರುವ ಪಿಎಸ್ಯು ಬಾಂಡ್ಗಳನ್ನು ಹೊಂದಿರುವುದರಿಂದ ಎಫ್ಎಂಪಿಗಳಿಗೆ ಹೋಲಿಸಿದರೆ ಕ್ರೆಡಿಟ್ ರಿಸ್ಕ್ ಅನ್ನು ನಿರ್ವಹಿಸಲು ಉತ್ತಮ ಸ್ಥಾನವನ್ನು ಅವು ಹೊಂದಿವೆ.

ಎಫ್ಎಂಪಿಗಳು ಕ್ಲೋಸ್ ಎಂಡೆಡ್ ಫಂಡ್ಗಳಾಗಿವೆ ಮತ್ತು ಅವುಗಳನ್ನು ಎಕ್ಸ್ಚೇಂಜ್ಗಳಲ್ಲಿ ಲಿಸ್ಟ್ ಮಾಡಲಾಗಿದ್ದರೂ, ಕಡಿಮೆ ವಹಿವಾಟು ಮೌಲ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಲಿಕ್ವಿಡಿಟಿಯನ್ನು ಇವು ಒದಗಿಸುವುದಿಲ್ಲ. ಟಾರ್ಗೆಟ್ ಮೆಚ್ಯುರಿಟಿ ಬಾಂಡ್ ಫಂಡ್ಗಳು ಓಪನ್

ಇನ್ನಷ್ಟು ಓದಿ
436

ಮ್ಯೂಚುವಲ್‌ ಫಂಡ್‌ ಸೂಕ್ತವೇ??