ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಎಂದರೇನು?

ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಎಂದರೇನು? zoom-icon

ಮ್ಯೂಚುವಲ್ ಫಂಡ್ಗಳ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಮತ್ತು ಖಚಿತ ಉಳಿತಾಯ ಉತ್ಪನ್ನಗಳ ಮೇಲಿನ ಬಡ್ಡಿ ದರ ಕುಸಿಯುತ್ತಿರುವುದರಿಂದ, ಬ್ಯಾಂಕ್ ಸ್ಥಿರ ಠೇವಣಿಗಳು, ಪಿಪಿಎಫ್ಗಳು ಮತ್ತು ಎನ್ಎಸ್ಸಿಗಳಂತಹ ಸಾಂಪ್ರದಾಯಿಕ ಉತ್ಪನ್ನಗಳನ್ನು ಬಳಸುತ್ತಿದ್ದ ರಿಸ್ಕ್ ತೆಗೆದುಕೊಳ್ಳಲು ಬಯಸದ ಹೂಡಿಕೆದಾರರು ಡೆಟ್ ಫಂಡ್ಗಳ ಕಡೆಗೆ ಮುಖ ಮಾಡಿದ್ದಾರೆ. ಜನಪ್ರಿಯ ಈಕ್ವಿಟಿ ಫಂಡ್ಗಳಿಗೆ ಹೋಲಿಸಿದರೆ ಈ ಡೆಟ್ ಫಂಡ್ಗಳು ಕಡಿಮೆ ಅಸ್ಥಿರವಾಗಿರುತ್ತವೆ ಮತ್ತು ಅವರ ಸ್ಥಿರ ಠೇವಣಿಗಳು, ಪಿಪಿಎಫ್ಗಳು ಮತ್ತು ಎನ್ಎಸ್ಸಿಗಳಿಗೆ ಹೋಲಿಸಿದರೆ ಹೆಚ್ಚು ತೆರಿಗೆ ದಕ್ಷವಾಗಿವೆ ಹಾಗೂ ಉತ್ತಮ ರಿಟರ್ನ್ಸ್ ಅನ್ನು ಒದಗಿಸುವ ಸಾಧ್ಯತೆ ಹೊಂದಿದೆ ಎನ್ನುವುದನ್ನು ಇಂತಹ ಹೂಡಿಕೆದಾರರು ಕಂಡುಕೊಂಡಿದ್ದಾರೆ. ಆದರೆ, ಹೂಡಿಕೆದಾರರಿಗೆ ಡೀಫಾಲ್ಟ್ ರಿಸ್ಕ್ ಈಗಲೂ ಇರುತ್ತದೆ. ಅಂದರೆ, ಅಸಲು ಮತ್ತು ಬಡ್ಡಿ ಪಾವತಿ ಕಳೆದುಕೊಳ್ಳುವುದು ಮತ್ತು ಬಡ್ಡಿ ದರದ ರಿಸ್ಕ್, ಅಂದರೆ ಬಡ್ಡಿ ದರದಲ್ಲಿ ಬದಲಾವಣೆಯಿಂದಾಗಿ ಬೆಲೆ ಏರಿಳಿತವಾಗಬಹುದು.

ಫಂಡ್ನ ಮೆಚ್ಯುರಿಟಿ ದಿನಾಂಕಕ್ಕೆ ತಮ್ಮ ಪೋರ್ಟ್ಫೋಲಿಯೋವನ್ನು ಹೊಂದಿಸುವ ಮೂಲಕ ಡೆಟ್ ಫಂಡ್ನಲ್ಲಿ ಇರುವ ರಿಸ್ಕ್ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಟಾರ್ಗೆಟ್ ಮೆಚ್ಯೂರಿಟಿ ಫಂಡ್ಗಳು (ಟಿಎಂಎಫ್ಗಳು) ಸಹಾಯ ಮಾಡುತ್ತವೆ. ಇವು ಪ್ಯಾಸಿವ್ ಡೆಟ್ ಫಂಡ್ಗಳಾಗಿದ್ದು, ಇದಕ್ಕೆ ಹೊಂದಿಕೊಂಡಿರುವ ಬಾಂಡ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಹೀಗಾಗಿ, ಇಂತಹ ಫಂಡ್ಗಳ ಪೋರ್ಟ್ಫೋಲಿಯೋದಲ್ಲಿ ಬಾಂಡ್ ಇಂಡೆಕ್ಸ್ನಲ್ಲಿರುವ ಬಾಂಡ್ಗಳು ಇರುತ್ತವೆ ಮತ್ತು ಫಂಡ್ ಹೇಳಿರುವ ಮೆಚ್ಯುರಿಟಿಯನ್ನು ಹೊಂದಿರುವ ಮೆಚ್ಯುರಿಟಿಗಳನ್ನು ಈ ಬಾಂಡ್ಗಳು

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??