ರಾಷ್ಟ್ರೀಯ ಪಿಂಚಣಿ ಸ್ಕೀಮ್ ಅಥವಾ ಎನ್‌ಪಿಎಸ್ ಒಂದು ನಿವೃತ್ತಿ ಪ್ರಯೋಜನ ಸ್ಕೀಮ್ ಆಗಿದ್ದು, ಇದನ್ನು 2004 ರಲ್ಲಿ ಭಾರತ ಸರ್ಕಾರ ಪರಿಚಯಿಸಿತು. ಇನ್ನೊಂದೆಡೆ ಮ್ಯೂಚುವಲ್ ಫಂಡ್ ಒಂದು ಹೂಡಿಕೆ ಪರಿಕರವಾಗಿದ್ದು, ಷೇರುಗಳು, ಬಾಂಡ್‌ಗಳು ಅಥವಾ ಇತರ ಸೆಕ್ಯುರಿಟಿಗಳ ಪೋರ್ಟ್‌ಫೋಲಿಯೋವನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ವೃತ್ತಿಪರ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಿರುತ್ತಾರೆ.
ಎನ್‌ಪಿಎಸ್ ಹಾಗೂ ಮ್ಯೂಚುವಲ್ ಫಂಡ್ - ಎರಡೂ ಹೂಡಿಕೆಗಳನ್ನು ಅರ್ಥ ಮಾಡಿಕೊಳ್ಳುವುದು
ಎನ್‌ಪಿಎಸ್: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಒಂದು ಸ್ವಯಂಪ್ರೇರಿತ ಪಿಂಚಣಿ ಸ್ಕೀಮ್ ಆಗಿದ್ದು, ಭಾರತೀಯ ನಾಗರಿಕರಿಗೆ ನಿವೃತ್ತಿ ಆದಾಯವನ್ನು ಒದಗಿಸಲು ಭಾರತ ಸರ್ಕಾರವು ಆರಂಭಿಸಿತು. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸ್ಕೀಮ್ ಅನ್ನು ನಿಯಂತ್ರಿಸುತ್ತದೆ. ಇದು ಮಾರ್ಕೆಟ್ ಲಿಂಕ್ಡ್ ಉತ್ಪನ್ನವಾಗಿದ್ದು, ಈಕ್ವಿಟಿ, ಕಾರ್ಪೊರೇಟ್ ಡೆಟ್, ಸರ್ಕಾರಿ ಡೆಟ್ ಮತ್ತು ಪರ್ಯಾಯ ಅಸೆಟ್‌ಗಳ ಸಂಯೋಜನೆಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ.
ಎನ್‌ಪಿಎಸ್ ಎರಡು ವಿಧದ ಖಾತೆಗಳನ್ನು ಒದಗಿಸುತ್ತದೆ. ಟೈರ್ 1 ಮತ್ತು ಟೈರ್ 2. ಟೈರ್ 1 ಖಾತೆಯು ಹೂಡಿಕೆದಾರರಿಗೆ 60 ವರ್ಷವಾಗುವವರೆಗೆ ಲಾಕ್ ಆಗಿರುತ್ತದೆ. ಆದರೆ, ಟೈರ್ 2 ಸ್ವಯಂಪ್ರೇರಿತವಾಗಿದೆ ಮತ್ತು ಈ ಖಾತೆಯನ್ನು ಪಡೆಯಲು ಅರ್ಹತೆ ಪಡೆಯುವುದಕ್ಕೆ ಹೂಡಿಕೆದಾರರು ಟೈರ್ 1 ಖಾತೆಯನ್ನು ಹೊಂದಿರಬೇಕು. ಟೈರ್ 1 ಕ್ಕಿಂತ ಭಿನ್ನವಾಗಿರುವ ಟೈರ್ 2 ಖಾತೆಯಿಂದ ಹೂಡಿಕೆದಾರರು ಯಾವುದೇ ಸಮಯದಲ್ಲಿ ಹಣವನ್ನು
ಇನ್ನಷ್ಟು ಓದಿ