ಮ್ಯೂಚುವಲ್ ಫಂಡ್ಗಳು ಅವುಗಳ ವರ್ಗೀಕರಣ ಮತ್ತು ಅದರ ಪೋರ್ಟ್ಫೋಲಿಯೋಗಳನ್ನು ಆಧರಿಸಿ ಹಲವು ರಿಸ್ಕ್ ಅಂಶಗಳಿಗೆ ಒಳಪಟ್ಟಿರುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಹಲವು ರಿಸ್ಕ್ಗಳಿಗೆ ಒಳಪಟ್ಟಿರುತ್ತವೆ. ಆದರೆ, ಈ ಪೈಕಿ ಅತ್ಯಂತ ಪ್ರಮುಖವಾಗಿರುವುದು ಮಾರ್ಕೆಟ್ ರಿಸ್ಕ್ ಆಗಿರುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ವಿಭಾಗವನ್ನು ‘ಅಧಿಕ ರಿಸ್ಕ್’ ಹೂಡಿಕೆ ಉತ್ಪನ್ನಗಳು ಎಂದು ಪರಿಗಣಿಸಲಾಗಿದೆ. ಎಲ್ಲ ಈಕ್ವಿಟಿ ಫಂಡ್ಗಳು ಮಾರ್ಕೆಟ್ ಅಪಾಯಗಳಿಗೆ ತೆರೆದುಕೊಂಡಿವೆಯಾದರೂ, ರಿಸ್ಕ್ನ ಪ್ರಮಾಣವು ಫಂಡ್ನಿಂದ ಫಂಡ್ಗೆ ಮತ್ತು ಈಕ್ವಿಟಿ ಫಂಡ್ನ ವಿಧವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ.
ಲಾರ್ಜ್ ಕ್ಯಾಪ್ ಕಂಪನಿ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವ ಲಾರ್ಜ್ ಕ್ಯಾಪ್ ಫಂಡ್ಗಳು ಅಂದರೆ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಪ್ರಚಲಿತದಲ್ಲಿರುವ ಕಂಪನಿಗಳ ಸ್ಟಾಕ್ಗಳನ್ನು ಕಡಿಮೆ ರಿಸ್ಕ್ ಹೊಂದಿರುವವು ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಈ ಸ್ಟಾಕ್ಗಳನ್ನು ಮಿಡ್ ಕ್ಯಾಪ್ ಮತ್ತು ಸಣ್ಣ ಕಂಪನಿಗಳ ಸ್ಟಾಕ್ಗಳಿಗಿಂತ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿರುತ್ತದೆ. ಕಡಿಮೆ ರಿಸ್ಕ್ ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಸಾಮಾನ್ಯವಾಗಿ, ಲಾರ್ಜ್ ಕ್ಯಾಪ್ ವಿಭಾಗದಲ್ಲಿನ ವಲಯಗಳಲ್ಲಿ ವ್ಯಾಪಿಸಿಕೊಂಡ ಅತ್ಯಂತ ವೈವಿಧ್ಯಮಯ ಪೋರ್ಟ್ಫೋಲಿಯೋವನ್ನು ಹೊಂದಿರುತ್ತವೆ.
ಫೋಕಸ್ಡ್ ಫಂಡ್ಗಳು, ಸೆಕ್ಟೋರಲ್ ಫಂಡ್ಗಳು ಮತ್ತು ಥೆಮ್ಯಾಟಿಕ್ ಫಂಡ್ಗಳು ರಿಸ್ಕ್ ವಲಯದ ಇನ್ನೊಂದು ತುದಿಯಲ್ಲಿರುತ್ತವೆ. ಯಾಕೆಂದರೆ, ಕೇಂದ್ರೀಕೃತ ಪೋರ್ಟ್ಫೋಲಿಯೋಗಳನ್ನು ಹೊಂದಿರುತ್ತವೆ. ಅಧಿಕ ರಿಸ್ಕ್ ಈಕ್ವಿಟಿ ಫಂಡ್ಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ವಲಯಗಳಿಗೆ ಸೀಮಿತವಾಗಿರುವುದರಿಂದ ತಮ್ಮ ಹೋಲ್ಡಿಂಗ್ಸ್ನಿಂದಾಗಿ ಕಾನ್ಸಂಟ್ರೇಶನ್ ರಿಸ್ಕ್ನಿಂದ ಬಳಲುತ್ತಿರುತ್ತವೆ. ಫೋಕಸ್ಡ್ ಫಂಡ್ಗಳು ಜನಪ್ರಿಯ ಲಾರ್ಜ್ ಕ್ಯಾಪ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಿದ್ದರೂ, ಇವು ಸಾಮಾನ್ಯವಾಗಿ 25-30 ಸ್ಟಾಕ್ಗಳನ್ನು ಹೊಂದಿರುವುದರಿಂದ, ಕೇಂದ್ರೀಕೃತ ರಿಸ್ಕ್ ಅನ್ನು ಹೆಚ್ಚಿಸುತ್ತವೆ. ಫಂಡ್ ಮ್ಯಾನೇಜರ್ ಊಹೆ ಸರಿಯಾಗಿದ್ದರೆ, ವೈವಿಧ್ಯಮಯ ಲಾರ್ಜ್ ಕ್ಯಾಪ್ ಫಂಡ್ಗಿಂತ ಹೆಚ್ಚು ರಿಟರ್ನ್ ಅನ್ನು ನೀಡಬಹುದು. ಆದರೆ, ಇದು ವ್ಯತಿರಿಕ್ತವೂ ಆಗಬಹುದು.
ಸೆಕ್ಟೋರಲ್ ಫಂಡ್ಗಳು ಒಂದೇ ವಲಯದ ಸ್ಟಾಕ್ಗಳಲ್ಲಿ ಉದಾ., ಅಟೋ, ಎಫ್ಎಂಸಿಜಿ ಅಥವಾ ಐಟಿಯಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ, ಗಮನಾರ್ಹ ರಿಸ್ಕ್ ಅನ್ನು ಹೊಂದಿರುತ್ತವೆ. ಯಾಕೆಂದರೆ, ಉದ್ಯಮದ ಮೇಲೆ ಉಂಟಾಗುವ ಯಾವುದೇ ಅನಪೇಕ್ಷಿತ ಪರಿಣಾಮವು ಪೋರ್ಟ್ಫೋಲಿಯೋದಲ್ಲಿರುವ ಎಲ್ಲ ಸ್ಟಾಕ್ಗಳ ಮೇಲೆ ಪರಿಣಾಮ ಬೀರುತ್ತದೆ. ಥೆಮ್ಯಾಟಿಕ್ ಪಂಡ್ಗಳು ಪ್ರಸ್ತುತ ಬೇಡಿಕೆಯಲ್ಲಿರುವ ಕೆಲವೇ ಸಂಬಂಧಿತ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತವೆ. ಆದರೆ, ದೀರ್ಘಕಾಲದಲ್ಲಿ ಇವು ಆಸಕ್ತಿಯನ್ನು ಕುಂದಿಸಬಹುದು.
ಹೂಡಿಕೆದಾರರು ಸಾಮಾನ್ಯವಾಗಿ ಈಕ್ವಿಟಿ ಫಂಡ್ಗಳು ಇತರ ಫಂಡ್ಗಳಿಗಿಂತ ಹೆಚ್ಚು ರಿಟರ್ನ್ ನೀಡುತ್ತದೆ ಎಂದು ಸಾಮಾನ್ಯೀಕರಿಸುತ್ತಾರೆ. ಆದರೆ, ಎಲ್ಲ ಈಕ್ವಿಟಿ ಫಂಡ್ಗಳೂ ಒಂದೇ ಅಲ್ಲ ಎಂಬ ವಾಸ್ತವವನ್ನೂ ಅವರು ತಿಳಿಸಬೇಕು. ಈಕ್ವಿಟಿ ಫಂಡ್ ರಿಸ್ಕ್ ಪ್ರೊಫೈಲ್ಗೆ ಅನುಗುಣವಾಗಿ ರಿಟರ್ನ್ ಶೇಕಡಾವಾರು ಕೂಡಾ ಇರುತ್ತದೆ. ಹೀಗಾಗಿ, ಹೂಡಿಕೆ ಮಾಡುವುದಕ್ಕೂ ಮುನ್ನ ವಿವಿಧ ವಲಯಗಳಲ್ಲಿ ವೈವಿಧ್ಯತೆಯ ಪ್ರಮಾಣವನ್ನು ನೋಡಿ ಮತ್ತು ನಿಮ್ಮ ಕ್ರೋಢೀಕರಣ ರಿಸ್ಕ್ಗೆ ಟಾಪ್ ಹೋಲ್ಡಿಂಗ್ಸ್ ಅನ್ನು ನೋಡಿ. ಕಡಿಮೆ ರಿಸ್ಕ್ ಅಥವಾ ಅಧಿಕ ರಿಟರ್ನ್ ಹೊಂದಿರುವ ಫಂಡ್ಗಳನ್ನು ನೋಡುವುದರ ಬದಲಿಗೆ, ನಿಮಗೆ ಸಮ್ಮತಿಯಾಗುವ ರಿಸ್ಕ್ ಮಟ್ಟಗಳನ್ನು ಹೊಂದಿರುವ ಫಂಡ್ ಅನ್ನು ನೀವು ನೋಡಬೇಕು.