ಇಂಡೆಕ್ಸ್ ಫಂಡ್‌ಗಳು ನಿರ್ದಿಷ್ಟ ಸ್ಟಾಕ್ ಮಾರ್ಕೆಟ್ ಸೂಚ್ಯಂಕಗಳ (ಬಿಎಸ್‌ಇ ಸೆನ್ಸೆಕ್ಸ್, ನಿಫ್ಟಿ 50, ನಿಫ್ಟಿ ಮಿಡ್‌ಕ್ಯಾಪ್ ಇಂಡೆಕ್ಸ್ ಇತ್ಯಾದಿ) ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ವಿನ್ಯಾಸ ಮಾಡಿದ ಮ್ಯೂಚುವಲ್ ಫಂಡ್‌ಗಳ ವಿಧಗಳಾಗಿವೆ. ಇಂಡೆಕ್ಸ್‌ನ ಸಂಯೋಜನೆಯನ್ನು ಅತ್ಯಂತ ನಿಖರವಾಗಿ ಪ್ರತಿಫಲಿಸುವ ಸೆಕ್ಯುರಿಟಿಗಳ ಪೋರ್ಟ್‌ಫೋಲಿಯೋವನ್ನು ಹೊಂದುವ ಮೂಲಕ ನಿರ್ದಿಷ್ಟ ಬೆಂಚ್‌ಮಾರ್ಕ್ ಇಂಡೆಕ್ಸ್‌ಗಳ ಹೂಡಿಕೆ ರಿಟರ್ನ್ಸ್ ಅನ್ನು ಪ್ರತಿಫಲಿಸುವ ಗುರಿಯನ್ನು ಈ ಫಂಡ್‌ಗಳು ಹೊಂದಿರುತ್ತವೆ.
ರಿಸ್ಕ್ ತೆಗೆದುಕೊಳ್ಳಲು ಬಯಸದ ಹೂಡಿಕೆದಾರರಿಗೆ ಇಂಡೆಕ್ಸ್ ಫಂಡ್‌ಗಳು ಸೂಕ್ತ ಹೂಡಿಕೆ ಆಯ್ಕೆಯಾಗಿರುತ್ತವೆ. ಏಕೆಂದರೆ, ಈ ಫಂಡ್‌ಗಳು ನಿರ್ದಿಷ್ಟ ಮಾರ್ಕೆಟ್ ಇಂಡೆಕ್ಸ್ ಅನ್ನು ಮ್ಯಾಪ್ ಮಾಡಿ, ಈಕ್ವಿಟಿ ಲಿಂಕ್ ಆಗಿರುವ ರಿಸ್ಕ್‌ಗಳಿಗೆ ಒಳಗಾಗಿರುತ್ತವೆ. ಆದಾಗ್ಯೂ, ಮಾರ್ಕೆಟ್ ಕುಸಿಯುತ್ತಿರುವಾಗ ರಿಸ್ಕ್ ಮತ್ತು ಅಸ್ಥಿರತೆ ಇರುತ್ತದೆ.
ಮ್ಯೂಚುವಲ್ ಫಂಡ್‌ಗೆ ಹೊಸಬರಾಗಿರುವ ಹೂಡಿಕೆದಾರರಿಗೂ ಇದು ಉತ್ತಮ ಆಯ್ಕೆಯಾಗಿರುತ್ತದೆ. ಏಕೆಂದರೆ, ಸಮಯ ಸರಿದ ಹಾಗೆ ಇಂಡೆಕ್ಸ್ ಕಾರ್ಯಕ್ಷಮತೆಯನ್ನು ಹೊಂದಿಸಲು ಮತ್ತು ಟ್ರ್ಯಾಕ್ ಮಾಡಲು ಇಂಡೆಕ್ಸ್ ಫಂಡ್‌ನ ಪೋರ್ಟ್‌ಫೋಲಿಯೋ ಮ್ಯಾನೇಜರ್ ಮೇಲೆ ಅವಲಂಬಿಸಿರುತ್ತದೆ.
ದೀರ್ಘಕಾಲೀನ ಹೂಡಿಕೆ ಮಾಡಿದಾಗ ಉತ್ತಮದಿಂದ ಮಧ್ಯಮ ಪ್ರಮಾಣದ ರಿಟರ್ನ್ಸ್ ಅನ್ನು ನೀಡುವುದಕ್ಕೆ ಇಂಡೆಕ್ಸ್ ಫಂಡ್‌ಗಳು ಐತಿಹಾಸಿಕವಾಗಿ ಹೆಸರಾಗಿವೆ. ಹೀಗಾಗಿ, ದೀರ್ಘಕಾಲದವರೆಗೆ ಹೂಡಿಕೆ ಮಾಡುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ.
ಇಂಡೆಕ್ಸ್ ಫಂಡ್‌ಗಳನ್ನು ಸಾಮಾನ್ಯವಾಗಿ ಮಧ್ಯಮ/ಅಧಿಕ ರಿಸ್ಕ್ ಎಂದು ಪರಿಗಣಿಸಲಾಗಿದ್ದು, ಕೆಲವು ಸಂಭಾವ್ಯ ಮಿತಿಗಳನ್ನೂ ಇವು ಹೊಂದಿದೆ ಎಂಬುದನ್ನು ನಾವು ಗಮನಿಸುವುದು ಮುಖ್ಯ. ಅವುಗಳೆಂದರೆ:
• ಇಂಡೆಕ್ಸ್ ಹೊರತಾದ
ಇನ್ನಷ್ಟು ಓದಿ