ಮ್ಯೂಚುವಲ್‌ ಫಂಡ್‌ಗಳು ಸಂಪತ್ತು ಸೃಷ್ಟಿಗೆ ಸಹಾಯ ಮಾಡಬಲ್ಲದೇ?

ಮ್ಯೂಚುವಲ್‌ ಫಂಡ್‌ಗಳು ಸಂಪತ್ತು ಸೃಷ್ಟಿಗೆ ಸಹಾಯ ಮಾಡಬಲ್ಲದೇ?

ಸಂಪತ್ತು ಸೃಷ್ಟಿಸುವ ದಿಕ್ಕಿನಲ್ಲಿ ಸಾಗುತ್ತಿರುವವರಲ್ಲಿ ನಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತು ರಚಿಸಲು ವಹಿವಾಟು ಮತ್ತು ವಾಣಿಜ್ಯವು ಸಹಾಯ ಮಾಡುತ್ತದೆ. ವಿವಿಧ ಕಂಪನಿಗಳ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಉದ್ಯಮಶೀಲರ ವಹಿವಾಟುಗಳಲ್ಲಿ ನಾವು ಹೂಡಿಕೆದಾರರಾಗಬಹುದು. ಉದ್ಯಮಶೀಲರು ಮತ್ತು ಮ್ಯಾನೇಜರುಗಳು ತಮ್ಮ ವಹಿವಾಟುಗಳನ್ನು ದಕ್ಷವಾಗಿ ಮತ್ತು ಲಾಭಕರವಾಗಿ ನಡೆಸುತ್ತಾರೆ. ಆಗ ಷೇರುದಾರರಿಗೆ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ, ಸಂಪತ್ತು ಸೃಷ್ಟಿಗೆ ಮ್ಯೂಚುವಲ್‌ ಫಂಡ್‌ಗಳು ಉತ್ತಮ ವಿಧಾನವಾಗಿವೆ.

ಯಾವ ಷೇರುಗಳನ್ನು ಖರೀದಿಸಬೇಕು ಮತ್ತು ಯಾವಾಗ ಖರೀದಿಸಬೇಕು ಎಂಬುದನ್ನು ನಾವು ತಿಳಿಯುವುದು ಹೇಗೆ?

ಈ ಸಮಯದಲ್ಲೇ ನಾವು ತೆಗೆದುಕೊಳ್ಳುವ ವೃತ್ತಿಪರ ಸಹಾಯ ಗಣನೆಗೆ ಬರುತ್ತದೆ. ಹಲವು ಅವಕಾಶಗಳನ್ನು ಒಂದೇ ಬಾರಿಗೆ ಅನಾವರಣಗೊಳಿಸಲು ದೊಡ್ಡ ಮೊತ್ತವನ್ನು ಸಂಗ್ರಹಿಸುವ ಅನುಕೂಲವನ್ನೂ ಅವರು ಪಡೆಯುತ್ತಾರೆ. ಇದು ಸಮತೋಲನದ ಆಹಾರ ಕ್ರಮದ ರೀತಿ. ನಮಗೆಲ್ಲರಿಗೂ ಪ್ರೊಟೀನುಗಳು, ವಿಟಾಮಿನ್‌ಗಳು, ಕಾರ್ಬೋಹೈಡ್ರೇಟ್‌ ಇತ್ಯಾದಿ ಬೇಕಿರುತ್ತದೆ. ಒಂದು ರೀತಿಯ ಆಹಾರವನ್ನು ಸೇವಿಸಿದರೆ ಕೆಲವು ಪೌಷ್ಠಿಕಾಂಶಗಳ ಕೊರತೆ ಉಂಟಾಗುತ್ತದೆ. ಇದೇ ರೀತಿ, ವೈವಿಧ್ಯತೆಯ ಈಕ್ವಿಟಿ ಫಂಡ್‌ನಲ್ಲಿ ಆರ್ಥಿಕತೆಯ ವಿವಿಧ ಸೆಗ್ಮೆಂಟ್‌ಗಳಿಗೆ ತೆರೆದುಕೊಂಡಿದ್ದೀರಿ. ಮಾರ್ಕೆಟ್ ಕುಸಿಯುವ ಸಾಧ್ಯತೆಯಿಂದಲೂ ನೀವು ರಕ್ಷಣೆಗೆ ಒಳಪಟ್ಟಿದ್ದೀರಿ.

ವೃತ್ತಿಪರವಾಗಿ ನಿರ್ವಹಿಸಿದ, ವೈವಿಧ್ಯವಾದ ಈಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಮತ್ತು ನಿಮ್ಮ ಮತ್ತು ನಿಮ್ಮ ಮುಂದಿನ ತಲೆಮಾರಿಗೆ ಸಂಪತ್ತು ಸೃಷ್ಟಿಸಲು ದೀರ್ಘ ಅವಧಿಯವರೆಗೆ ಹೂಡಿಕೆ ಮಾಡಿಕೊಂಡಿರಿ.

439

ಮ್ಯೂಚುವಲ್‌ ಫಂಡ್‌ ಸೂಕ್ತವೇ??