ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದು, ಅದರಲ್ಲೂ ನೀವು ಹೊಸಬರಾಗಿದ್ದರೆ ತುಂಬಾ ಪ್ರಚೋದನಕಾರಿಯಾಗಿರಬಹುದು. ಆದರೆ, ಕೆಲವು ಪ್ರಯೋಗಿಸಿ ಯಶಸ್ವಿಯಾದ ಹೂಡಿಕೆ ವಿಧಾನಗಳಿವೆ. ಇವು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದನ್ನು ಸರಳ ಮತ್ತು ಸುಲಭಗೊಳಿಸುತ್ತವೆ. ಅಷ್ಟೇ ಅಲ್ಲ, ದೀರ್ಘಕಾಲದವರೆಗೆ ಸಂಪತ್ತು ರಚನೆಗೆ ನೆರವಾಗಬಹುದು. ಅವುಗಳೆಂದರೆ ಎಸ್‌ಐಪಿಗಳು ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು.
ನಿಗದಿತ ಅಂತರದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು (ಎಸ್‌ಐಪಿಗಳು) ನಿಮಗೆ ಅನುವು ಮಾಡುತ್ತವೆ. ನಿಯತವಾಗಿ ಸಣ್ಣ ಮೊತ್ತವನ್ನು ಇದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಂಚಯದ ಶಕ್ತಿಯನ್ನು ಬಳಸಿಕೊಳ್ಳಲು ಎಸ್‌ಐಪಿ ನಿಮಗೆ ನೆರವು ನೀಡುತ್ತದೆ.
ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವ ಸಣ್ಣ ಮೊತ್ತವು ಕಾಲಾನಂತರದಲ್ಲಿ ಗಮನಾರ್ಹ ಹೂಡಿಕೆ ಪೋರ್ಟ್‌ಫೋಲಿಯೋ ಆಗಿ ಬೆಳೆಯುವ ಸಾಧ್ಯತೆಯನ್ನು ಹೊಂದಿರುತ್ತದೆ. ಕಿರಿಕಿರಿ ರಹಿತ ಮತ್ತು ಶಿಸ್ತುಬದ್ಧವಾದ ಹೂಡಿಕೆ ವಿಧಾನವನ್ನು ಹುಡುಕುತ್ತಿರುವವರಿಗೆ ಎಸ್‌ಐಪಿಗಳು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಉತ್ಪನ್ನ/ಸ್ಕೀಮ್ ನಿಮಗೆ ಹೊಂದುತ್ತದೆಯೇ ಎಂಬ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಮ್ಯೂಚುವಲ್ ಫಂಡ್ ಪರಿಣಿತರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ.
ಸಾಮಾನ್ಯವಾಗಿ, ಎಸ್‌ಐಪಿ ಅಥವಾ ಮ್ಯೂಚುವಲ್ ಫಂಡ್‌ಗಳು ತುಂಬಾ ಸಂಕೀರ್ಣ ಎಂಬ ಕಾರಣಕ್ಕೆ ಜನರು ಇದನ್ನು ದೂರವಿಡುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಷ್ಟವಾಗಿರುತ್ತದೆ. ಹೀಗಾಗಿ, ಅವರು ಹೂಡಿಕೆ ಮಾಡುವುದಿಲ್ಲ.
ಆದರೆ,
ಇನ್ನಷ್ಟು ಓದಿ