NAV ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

NAV ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ನಿವ್ವಳ ಸ್ವತ್ತು ಮೌಲ್ಯ (NAV) ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಒಂದು ಪ್ರಮುಖ ಪರಿಕಲ್ಪನೆಯಾಗಿದೆ. ಇದು ಮ್ಯೂಚುಯಲ್ ಫಂಡ್‌ನ ಪ್ರತಿ- ಯುನಿಟ್ ಮೌಲ್ಯ ಮತ್ತು ಹೂಡಿಕೆದಾರರು ಮ್ಯೂಚುಯಲ್ ಫಂಡ್‌ನಲ್ಲಿ ಪ್ರತಿ ಯೂನಿಟ್ ಅನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಬೆಲೆಯನ್ನು ಪ್ರತಿನಿಧಿಸುತ್ತದೆ. 

NAV ಅನ್ನು ಪ್ರತಿ ದಿನದ ಕೊನೆಯಲ್ಲಿ ನವೀಕರಿಸಲಾಗುತ್ತದೆ. ಮ್ಯೂಚುಯಲ್ ಫಂಡ್‌ನ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಲು ಸಹಾಯ ಮಾಡುವ ಕಾರಣ NAV ನಿರ್ಣಾಯಕವಾಗಿದೆ. ಹೂಡಿಕೆದಾರರು ವಿವಿಧ ಅವಧಿಗಳಲ್ಲಿ NAV ಅನ್ನು ಹೋಲಿಸುವ ಮೂಲಕ ಫಂಡ್‌ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ನಿರ್ಣಯಿಸಬಹುದು. NAVಯ ನಿಯಮಿತ ಲೆಕ್ಕಾಚಾರ ಮತ್ತು ಪ್ರಕಟಣೆಯು ಹೂಡಿಕೆದಾರರಿಗೆ ಅವರ ಹೂಡಿಕೆಯ ಮೌಲ್ಯದ ಬಗ್ಗೆ ಪಾರದರ್ಶಕತೆಯನ್ನು ಒದಗಿಸುತ್ತದೆ. 

NAV ಅನ್ನು ಲೆಕ್ಕಾಚಾರ ಮಾಡಲು, ನೀವು ಫಂಡ್‌ನ ಹೊಣೆಗಾರಿಕೆಗಳನ್ನು ಅದರ ಒಟ್ಟು ಆಸ್ತಿ ಮೌಲ್ಯದಿಂದ ಕಳೆಯಬೇಕು ಮತ್ತು ಅದನ್ನು ಫಂಡ್‌ನ ಒಟ್ಟು ಬಾಕಿ ಇರುವ ಯುನಿಟ್ ಗಳಿಂದ ಭಾಗಿಸಬೇಕು.          

 

ನಾನು ಹೂಡಿಕೆ ಮಾಡಲು ಸಿದ್ಧ

ಮ್ಯೂಚುವಲ್‌ ಫಂಡ್‌ ಸೂಕ್ತವೇ??