ಎರಡು ಪ್ರಸಿದ್ಧ ಹೂಡಿಕೆ ಆಯ್ಕೆಗಳೆಂದರೆ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಮತ್ತು ಮ್ಯೂಚುವಲ್ ಫಂಡ್‌ಗಳು. ಈ ಎರಡೂ ಹೂಡಿಕೆ ಆಯ್ಕೆಗಳು ತಮ್ಮದೇ ಆದ ವ್ಯತ್ಯಾಸಗಳನ್ನು ಹೊಂದಿವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೀರ್ಘಾವಧಿಯ ಹೂಡಿಕೆಯ ಆಯ್ಕೆಯಾಗಿದೆ ಮತ್ತು ಇದಕ್ಕೆ ಭಾರತ ಸರ್ಕಾರದ ಬೆಂಬಲವಿದೆ. ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ಪಿಪಿಎಫ್ ನೀಡುತ್ತದೆ. ಈ ಬಡ್ಡಿ ದರವನ್ನು ಭಾರತ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೆ ನಿಗದಿಪಡಿಸುತ್ತದೆ. ಇದು ಸ್ಥಿರ ಹೂಡಿಕೆಯ ಅವಧಿಯನ್ನು ಹೊಂದಿದೆ, ವರ್ಷಕ್ಕೆ ಕನಿಷ್ಠ ಹೂಡಿಕೆಯ ಮೊತ್ತ ರೂ. 500 ಮತ್ತು ಪ್ರತಿ ಆರ್ಥಿಕ ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂಗಳಾಗಿರುತ್ತವೆ. ಮೂಲ ಮೊತ್ತ, ಗಳಿಸಿದ ಬಡ್ಡಿ ಮತ್ತು ಪಿಪಿಎಫ್ ನ ಮೆಚ್ಯೂರಿಟಿ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಪಿಪಿಎಫ್ 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಅಕಾಲಿಕ ಹಿಂಪಡೆಯುವಿಕೆಯು ಹೂಡಿಕೆ ಮಾಡಿದ 7 ನೇ ವರ್ಷದಿಂದ ಮಾತ್ರ ಸಾಧ್ಯ. ಪಿಪಿಎಫ್ ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಯಾಗಿದೆ.
ಮ್ಯೂಚುಯಲ್ ಫಂಡ್‌ಗಳು - ಮತ್ತೊಂದೆಡೆ, ವೃತ್ತಿಪರವಾಗಿ ನಿರ್ವಹಿಸಲಾದ ಹೂಡಿಕೆ ನಿಧಿಗಳು ವಿವಿಧ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುತ್ತವೆ. ಮ್ಯೂಚುಯಲ್ ಫಂಡ್ ವಿವಿಧ ವರ್ಗಗಳಲ್ಲಿ ಹೂಡಿಕೆ ಮಾಡುತ್ತದೆ, ಉದಾಹರಣೆಗೆ - ಸ್ಟಾಕ್‌ಗಳು, ಬಾಂಡ್‌ಗಳು ಮತ್ತು ಇತರ ಭದ್ರತೆಗಳು (ಸೆಕ್ಯುರಿಟಿಗಳು). ಮ್ಯೂಚುಯಲ್ ಫಂಡ್‌ಗಳನ್ನು ಎಎಂಸಿಗಳು (ಆಸ್ತಿ ನಿರ್ವಹಣಾ ಕಂಪನಿಗಳು) ಸ್ಥಾಪಿಸುತ್ತವೆ ಮತ್ತು ನಿರ್ವಹಿಸುತ್ತವೆ
ಇನ್ನಷ್ಟು ಓದಿ