ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ಗಳನ್ನು ಒದಗಿಸುತ್ತವೆಯೇ?

ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ಗಳನ್ನು ಒದಗಿಸುತ್ತವೆಯೇ?

ಬ್ಯಾಂಕ್‌ಗಳ ಮೂಲ ವ್ಯವಹಾರವೇ ಉಳಿತಾಯ ಮತ್ತು ಸಾಲಗಳಾಗಿರುತ್ತವೆ. ಆದರೆ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆ ಉದ್ದೇಶ ಹೊಂದಿದವುಗಳು. ನೀವು ನಿಮ್ಮ ಹಣವನ್ನು ಉಳಿತಾಯ ಖಾತೆ ಅಥವಾ ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಇಟ್ಟಾಗ, ನೀವು ಉಳಿತಾಯ ಮಾಡುತ್ತಿರುತ್ತೀರಿ. ಆದರೆ ನೀವು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಇಡುತ್ತಿದ್ದಾಗ ನೀವು ಹೂಡಿಕೆಗಳನ್ನು ಮಾಡುತ್ತಿರುತ್ತೀರಿ. ಬ್ಯಾಂಕಿಂಗ್ ಮತ್ತು ಮ್ಯೂಚುವಲ್‌ ಫಂಡ್‌ಗಳು ಸಂಪೂರ್ಣ ವಿಭಿನ್ನ ವಹಿವಾಟುಗಳಾಗಿದ್ದು, ನಿರ್ದಿಷ್ಟ ಡೊಮೇನ್ ಮತ್ತು ಸಾಂಸ್ಥಿಕ ಪರಿಣಿತಿ ಬೇಕಿರುತ್ತವೆ. ಬ್ಯಾಂಕ್‌ಗಳನ್ನು ಆರ್‌ಬಿಐ ನಿಯಂತ್ರಿಸುತ್ತದೆ. ಮ್ಯೂಚುವಲ್‌ ಫಂಡ್‌ಗಳನ್ನು ಸೆಬಿ ನಿಯಂತ್ರಿಸುತ್ತದೆ. ಬ್ಯಾಂಕಿಂಗ್ ಮತ್ತು ಮ್ಯೂಚುವಲ್‌ ಫಂಡ್‌ಗಳ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಕಾರ್ಪೊರೇಟ್‌ ಕಂಪನಿಗಳು ಬಯಸಿದರೆ, ಸಂಬಂಧಿತ ನಿಯಂತ್ರಕಗಳಿಂದ ಪ್ರತ್ಯೇಕ ಲೈಸೆನ್ಸ್ ಅನ್ನು ಪಡೆಯಬೇಕು ಮತ್ತು ಈ ಎರಡೂ ವಹಿವಾಟುಗಳನ್ನು ವಿಭಿನ್ನ ಕಂಪನಿಗಳ ಅಡಿಯಲ್ಲಿ ನಡೆಸಬೇಕು.

ಮ್ಯೂಚುವಲ್‌ ಫಂಡ್‌ ವಹಿವಾಟುಗಳನ್ನೂ ನಡೆಸುವ ಕೆಲವು ಬ್ಯಾಂಕ್‌ಗಳನ್ನು ನೀವು ನೋಡಬಹುದು. ಎರಡೂ ವಿಭಿನ್ನ ಕಂಪನಿಗಳಾಗಿದ್ದು, ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಂಬಂಧ ಇರುವುದಿಲ್ಲ ಮತ್ತು ಬ್ಯಾಂಕ್ ಉತ್ತಮ ದಾಖಲೆಯನ್ನು ಹೊಂದಿದ ಮಾತ್ರಕ್ಕೆ ಖಚಿತ ರಿಟರ್ನ್ಸ್ ಅನ್ನು ಒದಗಿಸುವುದಿಲ್ಲ.

ಬಹುತೇಕ ಬ್ಯಾಂಕ್‌ಗಳು ಮ್ಯೂಚುವಲ್‌ ಫಂಡ್‌ಗಳು ಸೇರಿದಂತೆ ಹಲವು ಹಣಕಾಸು ಉತ್ಪನ್ನಗಳ ವಿತರಕರನಾಗಿ ಕೆಲಸ ಮಾಡುತ್ತವೆ. ವಿತರಣೆಗಾಗಿ ತಮ್ಮೊಂದಿಗೆ (ಬ್ಯಾಂಕ್‌ಗಳು) ಒಪ್ಪಂದ ಮಾಡಿಕೊಂಡ ಮ್ಯೂಚುವಲ್‌ ಫಂಡ್‌ಗಳಿಗೆ ಸೇಲ್ಸ್‌ ಚಾನೆಲ್‌ ಆಗಿ ಅವು ಕೆಲಸ ಮಾಡುತ್ತವೆ. ಹೀಗಾಗಿ, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೇಗೆ ಹೂಡಿಕೆ ಮಾಡುವುದು ಎಂದು ಗೊಂದಲಕ್ಕೀಡಾದರೆ ಮತ್ತು ಬ್ಯಾಂಕ್‌ ಅನ್ನು ಸಂಪರ್ಕಿಸಲು ಬಯಸಿದರೆ, ಮಾರ್ಕೆಟ್‌ನಲ್ಲಿ ಲಭ್ಯವಿರುವ ಎಲ್ಲ ಫಂಡ್‌ಗಳನ್ನೂ ಬ್ಯಾಂಕ್‌ಗಳು ಮಾರಾಟ ಮಾಡುತ್ತಿರುವುದಿಲ್ಲ ಎಂಬುದನ್ನು ನೆನಪಿಡಿ.

434

ಮ್ಯೂಚುವಲ್‌ ಫಂಡ್‌ ಸೂಕ್ತವೇ??