ವಿಭಿನ್ನ ರೀತಿಯ ಗುರಿಗಳಿಗೆ ವಿಭಿನ್ನ ಫಂಡ್‌ಗಳಿವೆಯೇ?

ವಿಭಿನ್ನ ರೀತಿಯ ಗುರಿಗಳಿಗೆ ವಿಭಿನ್ನ ಫಂಡ್‌ಗಳಿವೆಯೇ? zoom-icon

ಮಾರ್ಕೆಟ್‌ನಲ್ಲಿ ಹಲವು ಮ್ಯೂಚುವಲ್‌ ಫಂಡ್ಸ್‌ ಸ್ಕೀಮ್‌ಗಳಿದ್ದು, ಯಾವ ಸ್ಕೀಮ್‌ ಉತ್ತಮ ಎಂದು ಸಾಮಾನ್ಯವಾಗಿ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ಆದರೆ, “ಉತ್ತಮ” ಎಂಬುದರ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ

ಆದರೂ ಜನರು ಇತ್ತೀಚೆಗೆ ಅತ್ಯಧಿಕ ರಿಟರ್ನ್ಸ್ ನೀಡಿದ ಸ್ಕೀಮ್‌ಗಳನ್ನು “ಉತ್ತಮ” ಕಾರ್ಯಕ್ಷಮತೆ ಹೊಂದಿರುವ ಸ್ಕೀಮ್‌ ಎಂದು ಆಯ್ಕೆ ಮಾಡುತ್ತಾರೆ.

ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಪ್ರದರ್ಶನವಾದ ಒಂದು ಸಿನಿಮಾವನ್ನು ನೀವು ವೀಕ್ಷಿಸಿದರೆ, ಬೆಚ್ಚಗಿನ ಬಟ್ಟೆಯನ್ನೇ ಎಲ್ಲರೂ ಧರಿಸಿರುವುದನ್ನು ನೀವು ಗಮನಿಸುತ್ತೀರಿ. ಕೆಲವರಿಗೆ ಇದು ಇಷ್ಟವಾಗಬಹುದು ಮತ್ತು ಅದನ್ನು ಖರೀದಿಸಲು ಅವರು ಬಯಸಬಹುದು. ಆದರೆ, ಮುಂಬೈ ಅಥವಾ ಚೆನ್ನೈನಲ್ಲಿ ಉಣ್ಣೆಯ ಬಟ್ಟೆಯನ್ನು ಧರಿಸಿ ಓಡಾಡುವ ಜನರನ್ನು ನೀವು ಊಹಿಸಿಕೊಳ್ಳಬಹುದೇ?

ಇದೇ ಲಾಜಿಕ್ ಮ್ಯೂಚುವಲ್‌ ಫಂಡ್ಸ್‌ಗೂ ಅನ್ವಯಿಸುತ್ತದೆ. ಹೀಗಾಗಿ “ಅತ್ಯುತ್ತಮ” ಮ್ಯೂಚುವಲ್‌ ಫಂಡ್‌ ಎಂಬ ಕಲ್ಪನೆಯೇ ಚಾಲ್ತಿಯಲ್ಲಿಲ್ಲ. ಆ ಸನ್ನಿವೇಶಕ್ಕೆ ಮತ್ತು ನಿಮ್ಮ ಹೂಡಿಕೆ ಉದ್ದೇಶಕ್ಕೆ ಯಾವುದು ಸೂಕ್ತ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ದೀರ್ಘಕಾಲೀನ ಗುರಿಗಳಿಗೆ ಅಲ್ಪಾವಧಿ ಅಗತ್ಯಗಳಿಗೆ ಹೋಲಿಸಿದರೆ ವಿಭಿನ್ನ ಫಂಡ್‌ಗಳು ಲಭ್ಯವಿವೆ. ಮಾಡರೇಟ್‌ ಫಂಡ್‌ಗಳಿಂದ ಅತ್ಯಂತ ವಿಭಿನ್ನವಾಗಿರುವ ಅಗ್ರೆಸಿವ್ ಫಂಡ್‌ಗಳು ಅಥವಾ ಕನ್ಸರ್ವೇಟಿವ್‌ ಫಂಡ್‌ಗಳಿವೆ. ಸಂಪತ್ತು ಸಂಚಯ ಅಥವಾ ಲಿಕ್ವಿಡಿಟಿಗೆ ಹೋಲಿಸಿದರೆ ಆದಾಯ ಗಳಿಕೆಗಾಗಿ ವಿಭಿನ್ನ ಫಂಡ್‌ಗಳಿವೆ.

ಹೀಗಾಗಿ, ಅತ್ಯುತ್ತಮ ಫಂಡ್‌ ಅನ್ನು ಹುಡುಕಬೇಡಿ. ಅತ್ಯಂತ ಸೂಕ್ತ ಫಂಡ್‌ ಅನ್ನು ಹುಡುಕಿ.

441

ಮ್ಯೂಚುವಲ್‌ ಫಂಡ್‌ ಸೂಕ್ತವೇ??