ನಿಮಗೆ ಪರಿಸರದ ಬಗ್ಗೆ ತುಂಬಾ ಕಾಳಜಿ ಇದೆ ಮತ್ತು ಪರಿಸರದ ಕಾಳಜಿಯನ್ನು ನಿರ್ಲಕ್ಷಿಸುವ ಕಂಪನಿಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಧ್ಯೇಯಗಳಿಗೆ ಹೊಂದುವುದಿಲ್ಲ ಎಂದು ಭಾವಿಸಿಕೊಳ್ಳಿ. ಹೀಗಾಗಿ, ನೀವು ಈಗ ನಿಮ್ಮ ನೈತಿಕ ಮೌಲ್ಯಗಳಿಗೆ ಹೊಂದುವ, ಆದರೆ ಉತ್ತಮ ರಿಟರ್ನ್ಸ್ ಅನ್ನು ನೀಡುವ ಅವಕಾಶವನ್ನು ನೀವು ಎದುರು ನೋಡುತ್ತಿದ್ದೀರಿ.
ಸುಸ್ಥಿರ ಹೂಡಿಕೆಯ ವಿಶ್ವಕ್ಕೆ ಪ್ರವೇಶಿಸಿ. ಇದರಲ್ಲಿನ ವಿಶೇಷ ಫಂಡ್ಗಳು ನಿರ್ದಿಷ್ಟ ಪರಿಸರ ಸ್ನೇಹಿ ನಿಯಮಗಳಿಗೆ ಬದ್ಧವಾಗುವ ಕಂಪನಿಗಳಲ್ಲಿ ಮಾತ್ರ ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಸುಸ್ಥಿರತೆ, ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಭವಿಷ್ಯಕ್ಕೆ ಆದ್ಯತೆ ನೀಡುವ, ಎಚ್ಚರಿಕೆಯಿಂದ ಆಯ್ಕೆ ಮಾಡಿದ ಉದ್ಯಮಗಳಲ್ಲಿ ಈ ಫಂಡ್ಗಳು ಹೂಡಿಕೆ ಮಾಡುತ್ತವೆ. ಇಎಸ್ಜಿ ಫಂಡ್ಗಳನ್ನು ಪರಿಚಯಿಸುತ್ತಿದ್ದೇವೆ. ಇದರಲ್ಲಿ ಇ ಎಂದರೆ ಎನ್ವಿರಾನ್ಮೆಂಟ್ (ಪರಿಸರ), ಎಸ್ ಎಂದರೆ ಸೋಶಿಯಲ್ (ಸಾಮಾಜಿಕ) ಮತ್ತು ಜಿ ಎಂದರೆ ಗವರ್ನೆನ್ಸ್ (ಆಡಳಿತ) ಎಂದಾಗಿದೆ.
ಶುದ್ಧ ಇಂಧನಕ್ಕೆ ಆದ್ಯತೆ ನೀಡುವುದು, ತ್ಯಾಜ್ಯ ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆ ಮಾಡುವ ಕಂಪನಿಗಳಿಗೆ ಪರಿಸರ ವಿಭಾಗವು ಹೊಂದುತ್ತದೆ. ಸರಿಯಾದ ಕಾರ್ಮಿಕ ಅಬ್ಯಾಸಗಳು, ಮಾವನ ಹಕ್ಕುಗಳು ಮತ್ತು ಸಮುದಾಯ ಪ್ರಗತಿಯ ವಿಷಯಕ್ಕೆ ಆದ್ಯತೆ ನೀಡಿದ ಉದ್ಯಮಗಳನ್ನು ಸಾಮಾಜಿಕ ವಲಯವು ಒಳಗೊಂಡಿರುತ್ತದೆ. ಇನ್ನು, ಆಡಳಿತ ವಲಯದಲ್ಲಿ, ಪಾರದರ್ಶಕ ನಾಯಕತ್ವ, ನೈತಿಕ ನಿರ್ಧಾರ ಮಾಡುವಿಕೆ ಮತ್ತು ಮಂಡಳಿ ವೈವಿಧ್ಯತೆಯನ್ನು ಹೊಂದಿರುವ ಕಂಪನಿಗಳು ಒಳಗೊಂಡಿರುತ್ತವೆ.
ಇಲ್ಲಿ, ಇಎಸ್ಜಿ ಫಂಡ್ಗಳು ನಿರ್ದಿಷ್ಟ ಥೀಮ್ನ ಸುತ್ತ ಇರುತ್ತವೆ. ಪರಿಸರ, ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಆಡಳಿತವನ್ನು ಹೊಂದಿರುವ ಕಂಪನಿಗಳ ಮೇಲೆ ಇವು ಕೇಂದ್ರೀಕರಿಸಿರುತ್ತವೆ. ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ, ಈ ಪ್ರಮುಖ ಅಂಶಗಳ ಮೇಲೆ ಹೆಚ್ಚು ಒತ್ತು ನೀಡುವ ಆಯ್ದ ಉದ್ಯಮಗಳಲ್ಲಿ ಹೂಡಿಕೆ ಮಾಡುವುದಕ್ಕಾಗಿ ಈ ಫಂಡ್ಗಳನ್ನು ವಿನ್ಯಾಸ ಮಾಡಲಾಗಿದೆ.
ಹಾಗಾದರೆ, ಥೀಮ್ ಆಧರಿತ ಮ್ಯೂಚುವಲ್ ಫಂಡ್ಗಳು ಎಂದರೇನು?
ಥೀಮ್ ಆಧರಿತ ಫಂಡ್ಗಳು ಒಂದು ರೀತಿಯ ಮ್ಯೂಚುವಲ್ ಫಂಡ್ಗಳಾಗಿದ್ದು, ನಿರ್ದಿಷ್ಟ ಥೀಮ್ಗಳು ಅಥವಾ ಟ್ರೆಂಡ್ಗಳ ಮೇಲೆ ಕೇಂದ್ರೀಕರಿಸಿರುತ್ತವೆ. ಉದಾಹರಣೆಗೆ, ಶುದ್ಧ ಶಕ್ತಿ ಅಥವಾ ತಂತ್ರಜ್ಞಾನ. ಬೆಳವಣಿಗೆ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಹೂಡಿಕೆದಾರರಿಗೆ ರಿಟರ್ನ್ ಅನ್ನು ಜನರೇಟ್ ಮಾಡುವುದಕ್ಕಾಗಿ ನಿರ್ದಿಷ್ಟ ಥೀಮ್ಗೆ ಸಂಬಂಧಿಸಿದ ಕಂಪನಿಗಳಲ್ಲಿ ಈ ಫಂಡ್ಗಳು ಹೂಡಿಕೆ ಮಾಡುತ್ತವೆ. ಮ್ಯೂಚುವಲ್ ಫಂಡ್ ಸ್ಕೀಮ್ಗಳು ಹೂಡಿಕೆ ಮಾಡುವ ಐದು ಪ್ರಮುಖ ಥೀಮ್ಗಳೆಂದರೆ ಡಿವಿಡೆಂಡ್ ಗಳಿಕೆ, ಪಿಎಸ್ಯು, ಎಂಎನ್ಸಿ, ಇಂಧನ ಮತ್ತು ಬಳಕೆ. ಹಲವು ಸಣ್ಣ ಥೀಮ್ಗಳಾದ ಉತ್ಪಾದನೆ, ಕ್ವಾಂಟ್, ಕಮಾಡಿಟಿಗಳು, ರಫ್ತು, ಸೇವೆಗಳು ಮತ್ತು ಸಾರಿಗೆಯಲ್ಲೂ ಒಂದು ಅಥವಾ ಎರಡು ಫಂಡ್ಗಳಿವೆ.
ಥೀಮ್ ಆಧರಿತ ಫಂಡ್ಗಳನ್ನು ಸಕ್ರಿಯವಾಗಿ ನಿರ್ವಹಿಸಲಾಗುತ್ತದೆ ಮತ್ತು ಅಧಿಕ ಬೆಳವಣಿಗೆ ಅವಕಾಶಗಳನ್ನು ಒದಗಿಸುವುದು ಮತ್ತು ಅವರ ಮೌಲ್ಯಗಳು ಅಥವಾ ನಂಬಿಕೆಗಳು ಮತ್ತು ಅಧಿಕ ರಿಸ್ಕ್ಗೆ ಹೊಂದಿಕೆಯಾಗುವಂತೆ ನಿರ್ದಿಷ್ಟ ಥೀಮ್ಗೆ ತೆರೆದುಕೊಳ್ಳುವ ಅವಕಾಶವನ್ನು ನಿಮ್ಮಂತಹ ಹೂಡಿಕೆದಾರರಿಗೆ ಒದಗಿಸುವ ಗುರಿಯನ್ನು ಹೊಂದಿರುತ್ತದೆ. ಆದರೆ, ಥೀಮ್ ಆಧರಿತ ಫಂಡ್ನಲ್ಲಿ ಹೂಡಿಕೆ ಮಾಡುವ ರಿಸ್ಕ್ಗಳು ಮತ್ತು ಸಂಭಾವ್ಯ ರಿವಾರ್ಡ್ಗಳನ್ನು ನೀವು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ನಿಮಗೆ ಈ ಉತ್ಪನ್ನ ಸೂಕ್ತವಾಗಿದೆಯೇ ಎಂಬ ಬಗ್ಗೆ ನಿಮಗೆ ಅನುಮಾನವಿದ್ದರೆ ನಿಮ್ಮ ಹಣಕಾಸು ಸಲಹೆಗಾರರ ಸಲಹೆಯನ್ನು ನೀವು ಪಡೆಯಬೇಕು.
ಈ ಫಂಡ್ಗಳು ಹೆಚ್ಚು ಅಸ್ಥಿರವಾಗಿರಬಹುದು ಮತ್ತು ಅದರಲ್ಲಿರುವ ರಿಸ್ಕ್ ಆಧರಿಸಿ ಅಥವಾ ಕಾರ್ಯಕ್ಷಮತೆಯ ಮೇಲೆ ಬೀರುವ ಬಾಹ್ಯ ಅಂಶಗಳನ್ನು ಆಧರಿಸಿ ಕಡಿಮೆ ಕಾರ್ಯಕ್ಷಮತೆ ತೋರಬಹುದು.
ಥೀಮ್ ಆಧರಿತ ಹೂಡಿಕೆ ಹೇಗೆ ಕೆಲಸ ಮಾಡುತ್ತದೆ?
ನಿರ್ದಿಷ್ಟ ಥೀಮ್ ಅಥವಾ ಟ್ರೆಂಡ್ಗೆ ಸಂಪರ್ಕಿಸಿದ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ಥೀಮ್ ಆಧರಿತ ಹೂಡಿಕೆಯು ಒಳಗೊಂಡಿರುತ್ತದೆ. ಥೀಮ್ ಆಧರಿತ ಹೂಡಿಕೆಯ ಹಿಂದಿನ ಪರಿಕಲ್ಪನೆಯೇನೆಂದರೆ, ಕಾಲಾನಂತರದಲ್ಲಿ ಕೆಲವು ಉದ್ಯಮಗಳು ಅಥವಾ ಟ್ರೆಂಡ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಈ ಥೀಮ್ಗಳಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಧಿಕ ರಿಟರ್ನ್ಗಳನ್ನು ನೀವು ಸಾಧಿಸಬಹುದಾಗಿದೆ.
ಥೀಮ್ ಆಧರಿತ ಫಂಡ್ಗಳಲ್ಲಿ ಹೂಡಿಕೆ ಮಾಡುವುದರ ಪ್ರಯೋಜನಗಳು
ಥೀಮ್ ಆಧರಿತ ಫಂಡ್ಗಳಲ್ಲಿ ಹೂಡಿಕೆ ಮಾಡುವುದರ ಕೆಲವು ಸಂಭಾವ್ಯ ಪ್ರಯೋಜನಗಳು ಇಲ್ಲಿವೆ:
- ಅಧಿಕ ಬೆಳವಣಿಗೆ ವಲಯಕ್ಕೆ ತೆರೆದುಕೊಳ್ಳುವಿಕೆ: ಥೀಮ್ ಆಧರಿತ ಫಂಡ್ಗಳು ನಿಮಗೆ, ಭವಿಷ್ಯದ ಗಮನಾರ್ಹ ಬೆಳವಣಿಗೆಯನ್ನು ಹೊಂದಿರುವ ವಲಯಗಳಿಗೆ ತೆರೆದುಕೊಳ್ಳಲು ಅನುವು ಮಾಡುತ್ತವೆ. ಉದಾಹರಣೆಗೆ, ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಹೂಡಿಕೆ ಮಾಡುವ ಒಂದು ಥೀಮ್ ಆಧರಿತ ಫಂಡ್ ಶುದ್ಧ ಇಂಧನಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯಿಂದ ಪ್ರಯೋಜನ ಪಡೆಯಬಹುದು.
- ವೈವಿಧ್ಯತೆ: ಥೀಮ್ ಆಧರಿತ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ವೈವಿಧ್ಯತೆಯ ಪ್ರಯೋಜನ ಸಿಗಬಹುದು. ಈ ಫಂಡ್ಗಳು ಸಾಮಾನ್ಯವಾಗಿ ನಿರ್ದಿಷ್ಟ ಥೀಮ್ಗೆ ಸಂಬಂಧಿಸಿದ ಕಂಪನಿಗಳ ಪೋರ್ಟ್ಫೋಲಿಯೋದಲ್ಲಿ ಹೂಡಿಕೆ ಮಾಡುತ್ತವೆ. ಇದು ರಿಸ್ಕ್ನ ವ್ಯಾಪ್ತಿ ಹೆಚ್ಚಲು ಮತ್ತು ಒಂದು ಕಂಪನಿ ಅಥವಾ ವಲಯದಲ್ಲಿ ಗಮನ ಕೇಂದ್ರೀಕರಣವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
- ವೈಯಕ್ತಿಕ ಮೌಲ್ಯಗಳ ಜೊತೆಗೆ ಹೊಂದಾಣಿಕೆ: ಥೀಮ್ ಆಧರಿತ ಫಂಡ್ಗಳು ಹೂಡಿಕೆದಾರರ ಮೌಲ್ಯಗಳು ಅಥವಾ ನಂಬಿಕೆಗಳಿಗೆ ಹೊಂದಾಣಿಕೆಯಾಗಬಹುದು. ಉದಾಹರಣೆಗೆ, ಸಾಮಾಜಿಕ ಪರಿಣಾಮವನ್ನು ಉಂಟು ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿದ ಕಂಪನಿಗಳಲ್ಲಿ ಹೂಡಿಕೆ ಮಾಡುವ ಥೀಮ್ ಆಧರಿತ ಫಂಡ್, ಹೂಡಿಕೆದಾರರ ಸಾಮಾಜಿಕ ಜವಾಬ್ದಾರಿ ಆದ್ಯತೆಗೆ ಹೊಂದಾಣಿಕೆಯಾಗಬಹುದು.
- ದೀರ್ಘಕಾಲೀನ ರಿಟರ್ನ್ಸ್ ಸಾಧ್ಯತೆ: ವೇಗವಾಗಿ ಬೆಳೆಯುತ್ತಿರುವ ಕೆಲವು ಉದ್ಯಮ ಅಥವಾ ವಲಯಕ್ಕೆ ಎಕ್ಸ್ಪೋಶರ್ ಹೊಂದಿರುವ ಥೀಮ್ ಆಧರಿತ ಫಂಡ್ಗಳು, ಆ ವಲಯವು ದೀರ್ಘಕಾಲದಲ್ಲಿ ಉತ್ತಮವಾಗಿ ಸಾಧನೆ ಮಾಡಿದರೆ ವಿಶಾಲ ಮಾರುಕಟ್ಟೆಗಿಂತ ಉತ್ತಮ ರಿಟರ್ನ್ಸ್ ನೀಡಬಹುದು. ಆದರೆ, ಹೂಡಿಕೆದಾರರು ತಮ್ಮ ರಿಸ್ಕ್ ತಾಳಿಕೊಳ್ಳುವ ಸಾಮರ್ಥ್ಯವನ್ನು ಪರಿಗಣಿಸಬೇಕು ಮತ್ತು ಹೂಡಿಕೆ ಮಾಡುವುದಕ್ಕೂ ಮೊದಲು ಸ್ಕೀಮ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಓದಬೇಕು. ಆದರೆ, ಹೂಡಿಕೆ ಮಾಡಿದ ಥೀಮ್ ಕಳಪೆ ಸಾಧನೆ ಮಾಡಿದರೆ ನಿರೀಕ್ಷೆಗಿಂತ ವಿಭಿನ್ನವಾಗಿಯೂ ಥೀಮ್ ಆಧರಿತ ಫಂಡ್ಗಳು ರಿಟರ್ನ್ಸ್ ನೀಡಬಹುದು ಎಂಬುದನ್ನು ಗಮನದಲ್ಲಿಡಬೇಕು. ಹೀಗಾಗಿ, ಥೀಮ್ ಆಧರಿತ ಫಂಡ್ಗಳು ಎಂದಿಗೂ ನೀವು ನಿರೀಕ್ಷಿಸಿದ ರಿಟರ್ನ್ಸ್ ಅನ್ನು ನೀಡದಿರಬಹುದು.
ಥೀಮ್ ಆಧರಿತ ಫಂಡ್ಗಳಿಗೆ ಸಂಬಂಧಿಸಿದ ರಿಸ್ಕ್ಗಳು
ಥೀಮ್ ಆಧರಿತ ಫಂಡ್ಗಳು ಹೂಡಿಕೆದಾರರಿಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆಯಾದರೂ, ಎಲ್ಲರಿಗೂ ಇದು ಸೂಕ್ತವಲ್ಲ. ಥೀಮ್ ಆಧರಿತ ಫಂಡ್ಗಳಲ್ಲಿ ಹೂಡಿಕೆ ಮಾಡುವಾಗ ಪರಿಗಣಿಸಬೇಕಿರುವ ಕೆಲವು ಅಪಾಯಗಳು ಇಲ್ಲಿವೆ:
1. ರಿಸ್ಕ್ ಕೇಂದ್ರೀಕರಣ
ಥೀಮ್ ಆಧರಿತ ಫಂಡ್ಗಳು ನಿರ್ದಿಷ್ಟ ವಲಯ ಅಥವಾ ಥೀಮ್ನಲ್ಲಿ ಹೂಡಿಕೆ ಮಾಡುತ್ತವೆ. ಅಂದರೆ, ಅವು ರಿಸ್ಕ್ ಕೇಂದ್ರೀಕರಣಕ್ಕೆ ತೆರೆದುಕೊಂಡಿವೆ. ಥೀಮ್ ಕಳಪೆ ಸಾಧನೆ ಮಾಡಿದರೆ ಅಥವಾ ನಿಯಂತ್ರಣದಲ್ಲಿ ಬದಲಾವಣೆಯಾದರೆ, ಫಂಡ್ನ ರಿಟರ್ನ್ಸ್ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟುಮಾಡಬಹುದು.
2. ಅಸ್ಥಿರತೆ
ಥೀಮ್ ಆಧರಿತ ಫಂಡ್ಗಳು ವೈವಿಧ್ಯಮಯ ಫಂಡ್ಗಳಿಗೆ ಹೋಲಿಸಿದರೆ ಹೆಚ್ಚು ಅಸ್ಥಿರವಾಗಿರುತ್ತವೆ. ಏಕೆಂದರೆ, ಇದು ನಿರ್ದಿಷ್ಟ ವಲಯ/ಥೀಮ್ಗೆ ತೆರೆದುಕೊಳ್ಳುವಿಕೆ ಕೇಂದ್ರೀಕರಣವನ್ನು ಹೊಂದಿರುತ್ತದೆ. ಈ ಅಸ್ಥಿರತೆಯಿಂದಾಗಿ ರಿಟರ್ನ್ಸ್ನಲ್ಲಿ ಗಮನಾರ್ಹ ಏರಿಳಿತ ಉಂಟಾಗಬಹುದು ಮತ್ತು ಕಡಿಮೆ ರಿಸ್ಕ್ ಸಹಿಸಿಕೊಳ್ಳುವ ಹೂಡಿಕೆದಾರರಿಗೆ ಸೂಕ್ತವಲ್ಲದಂತಾಗಬಹುದು.
3. ಲಿಕ್ವಿಡಿಟಿ ಅಪಾಯ
ಕೆಲವು ಥೀಮ್ ಆಧರಿತ ಫಂಡ್ಗಳು ಸ್ಮಾಲ್ ಕ್ಯಾಪ್ ಅಥವಾ ಮಿಡ್ ಕ್ಯಾಪ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುತ್ತವೆ. ಇವು ಸಾಕಷ್ಟು ಲಿಕ್ವಿಡಿಟಿಯನ್ನು ಹೊಂದಿಲ್ಲದಿರಬಹುದು. ಇದರಿಂದಾಗಿ ಮಾರುಕಟ್ಟೆ ಅಸ್ಥಿರತೆ ಅಥವಾ ಸೂಕ್ತವಲ್ಲದ ಮಾರುಕಟ್ಟೆ ಸ್ಥಿತಿಗಳಲ್ಲಿ ಹೂಡಿಕೆಯಿಂದ ನಿರ್ಗಮಿಸಲು ಸವಾಲನ್ನು ಉಂಟುಮಾಡಬಹುದು.
4. ಸಾಧನೆಯ ಅಪಾಯ
ಥೀಮ್ ಆಧರಿತ ಫಂಡ್ಗಳು ಅಧಿಕ ರಿಟರ್ನ್ಸ್ ನೀಡಬಹುದು. ಆದರೆ, ವಿಶಾಲ ಮಾರುಕಟ್ಟೆ ಅಥವಾ ವೈವಿಧ್ಯಮಯ ಫಂಡ್ಗಳಿಗಿಂತ ಹೆಚ್ಚು ಉತ್ತಮ ಸಾಧನೆ ಮಾಡುತ್ತದೆ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಥೀಮ್ ಆಧರಿತ ಫಂಡ್ಗಳಲ್ಲಿ ಹೂಡಿಕೆ ಮಾಡಲು ಆ ವಲಯ/ಥೀಮ್ನ ಬಗ್ಗೆ ಮತ್ತು ಅದರಲ್ಲಿರುವ ಕಂಪನಿಗಳ ಕಾರ್ಯಕ್ಷಮತೆಯ ಬಗ್ಗೆ ಸಮಗ್ರ ತಿಳಿವಳಿಕೆ ಅಗತ್ಯವಿರುತ್ತದೆ.
ಮಾಹಿತಿಯುಕ್ತ ಹೂಡಿಕೆ ನಿರ್ಧಾರವನ್ನು ಮಾಡುವುದಕ್ಕಾಗಿ, ಫಂಡ್ ಮತ್ತು ಅದರ ದಾಖಲೆಗಳನ್ನು ಗಮನವಿಟ್ಟು ಓದುವುದು ಅತ್ಯಂತ ಮುಖ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಥೀಮ್ ಆಧರಿತ ಫಂಡ್ಗಳಿಗೆ ಇದು ಮುಖ್ಯ. ಈ ದಾಖಲೆಗಳಲ್ಲಿನ ರಿಸ್ಕೋಮೋಟರ್, ಇತರ ಫಂಡ್ಗಳಿಗೆ ಹೋಲಿಸಿದರೆ ಸ್ಕೀಮ್ನ ರಿಸ್ಕ್ ಮಟ್ಟದ ದೃಶ್ಯ ಪ್ರತಿನಿಧಿತ್ವವನ್ನು ನೀಡುತ್ತದೆ. ಇದರ ಜೊತೆಗೆ, ಸೂಕ್ತ ಬೆಂಚ್ಮಾರ್ಕ್ಗಳು ಅಥವಾ ಇದೇ ವಿಭಾಗದಲ್ಲಿನ ಇತರ ಫಂಡ್ಗಳ ಸರಾಸರಿ ರಿಸ್ಕ್ನ ವಿರುದ್ಧ ಫಂಡ್ನ ರಿಸ್ಕ್ ಅನ್ನು ವಿಶ್ಲೇಷಿಸುವುದೂ ಉಪಯುಕ್ತವಾಗಿದೆ.
ತೀರ್ಮಾನ
ಅಧಿಕ ಬೆಳವಣಿಗೆಯ ಸೆಕ್ಟರ್ಗಳು, ವೈವಿಧ್ಯಮಯ ಪ್ರಯೋಜನಗಳಿಗೆ ಹೂಡಿಕೆದಾರನ್ನು ಎಕ್ಸ್ಪೋಶರ್ ಮಾಡುವುದು, ವೈಯಕ್ತಿಕ ಮೌಲ್ಯಗಳಿಗೆ ಹೊಂದಾಣಿಕೆ ಮಾಡುವುದು, ಸಕ್ರಿಯ ನಿರ್ವಹಣೆ ಮತ್ತು ಉತ್ತಮ ಸಾಧನೆಯ ಸಾಧ್ಯತೆಯನ್ನು ಥೀಮ್ ಆಧರಿತ ಫಂಡ್ಗಳು ಹೊಂದಿರುತ್ತವೆ. ಆದರೆ, ಥೀಮ್ ಆಧರಿತ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ರಿಸ್ಕ್ಗಳು ಮತ್ತು ಸಂಭಾವ್ಯ ರಿವಾರ್ಡ್ಗಳನ್ನು ನೀವು ಗಮನವಿಟ್ಟು ಮೌಲ್ಯೀಕರಿಸಬೇಕು. ಯಾವುದೇ ಹೂಡಿಕೆಯ ವಿಷಯದಲ್ಲಿರುವ ಹಾಗೆ, ಸೂಕ್ತ ತಪಾಸಣೆಯನ್ನು ನೀವು ಮಾಡಬೇಕು, ಹೂಡಿಕೆ ಕಾರ್ಯತಂತ್ರ, ಟ್ರ್ಯಾಕ್ ರೆಕಾರ್ಡ್ ಮತ್ತು ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ನಿಮ್ಮ ಹೂಡಿಕೆ ಗುರಿಗಳು ಮತ್ತು ರಿಸ್ಕ್ ತಾಳಿಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಮಾಹಿತಿಯುಕ್ತ ನಿರ್ಧಾರವನ್ನು ಮಾಡಬೇಕು.
ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.