ಯಾವ ರೀತಿಯ ಈಕ್ವಿಟಿ ಫಂಡ್ ಅತಿ ಕಡಿಮೆ ರಿಸ್ಕ್ಗಳನ್ನು ಹೊಂದಿದೆ ಮತ್ತು ಯಾವುದು ಅತ್ಯಧಿಕ ರಿಸ್ಕ್ ಹೊಂದಿದೆ?

ಯಾವ ರೀತಿಯ ಈಕ್ವಿಟಿ ಫಂಡ್ ಅತಿ ಕಡಿಮೆ ರಿಸ್ಕ್ಗಳನ್ನು ಹೊಂದಿದೆ ಮತ್ತು ಯಾವುದು ಅತ್ಯಧಿಕ ರಿಸ್ಕ್ ಹೊಂದಿದೆ?

ಮ್ಯೂಚುವಲ್ ಫಂಡ್ಗಳು ಅವುಗಳ ವರ್ಗೀಕರಣ ಮತ್ತು ಅದರ ಪೋರ್ಟ್ಫೋಲಿಯೋಗಳನ್ನು ಆಧರಿಸಿ ಹಲವು ರಿಸ್ಕ್ ಅಂಶಗಳಿಗೆ ಒಳಪಟ್ಟಿರುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಹಲವು ರಿಸ್ಕ್ಗಳಿಗೆ ಒಳಪಟ್ಟಿರುತ್ತವೆ. ಆದರೆ, ಈ ಪೈಕಿ ಅತ್ಯಂತ ಪ್ರಮುಖವಾಗಿರುವುದು ಮಾರ್ಕೆಟ್ ರಿಸ್ಕ್ ಆಗಿರುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ವಿಭಾಗವನ್ನು ‘ಅಧಿಕ ರಿಸ್ಕ್’ ಹೂಡಿಕೆ ಉತ್ಪನ್ನಗಳು ಎಂದು ಪರಿಗಣಿಸಲಾಗಿದೆ. ಎಲ್ಲ ಈಕ್ವಿಟಿ ಫಂಡ್ಗಳು ಮಾರ್ಕೆಟ್ ಅಪಾಯಗಳಿಗೆ ತೆರೆದುಕೊಂಡಿವೆಯಾದರೂ, ರಿಸ್ಕ್ನ ಪ್ರಮಾಣವು ಫಂಡ್ನಿಂದ ಫಂಡ್ಗೆ ಮತ್ತು ಈಕ್ವಿಟಿ ಫಂಡ್ನ ವಿಧವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ.

ಲಾರ್ಜ್ ಕ್ಯಾಪ್ ಕಂಪನಿ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವ ಲಾರ್ಜ್ ಕ್ಯಾಪ್ ಫಂಡ್ಗಳು ಅಂದರೆ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಪ್ರಚಲಿತದಲ್ಲಿರುವ ಕಂಪನಿಗಳ ಸ್ಟಾಕ್ಗಳನ್ನು ಕಡಿಮೆ ರಿಸ್ಕ್ ಹೊಂದಿರುವವು ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಈ ಸ್ಟಾಕ್ಗಳನ್ನು ಮಿಡ್ ಕ್ಯಾಪ್ ಮತ್ತು ಸಣ್ಣ ಕಂಪನಿಗಳ ಸ್ಟಾಕ್ಗಳಿಗಿಂತ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿರುತ್ತದೆ. ಕಡಿಮೆ ರಿಸ್ಕ್ ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಸಾಮಾನ್ಯವಾಗಿ, ಲಾರ್ಜ್ ಕ್ಯಾಪ್ ವಿಭಾಗದಲ್ಲಿನ ವಲಯಗಳಲ್ಲಿ ವ್ಯಾಪಿಸಿಕೊಂಡ ಅತ್ಯಂತ ವೈವಿಧ್ಯಮಯ ಪೋರ್ಟ್ಫೋಲಿಯೋವನ್ನು ಹೊಂದಿರುತ್ತವೆ. 

ಫೋಕಸ್ಡ್ ಫಂಡ್ಗಳು, ಸೆಕ್ಟೋರಲ್ ಫಂಡ್ಗಳು ಮತ್ತು ಥೆಮ್ಯಾಟಿಕ್ ಫಂಡ್ಗಳು ರಿಸ್ಕ್ ವಲಯದ ಇನ್ನೊಂದು ತುದಿಯಲ್ಲಿರುತ್ತವೆ. ಯಾಕೆಂದರೆ, ಕೇಂದ್ರೀಕೃತ ಪೋರ್ಟ್ಫೋಲಿಯೋಗಳನ್ನು ಹೊಂದಿರುತ್ತವೆ. ಅಧಿಕ ರಿಸ್ಕ್ ಈಕ್ವಿಟಿ ಫಂಡ್ಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ವಲಯಗಳಿಗೆ ಸೀಮಿತವಾಗಿರುವುದರಿಂದ ತಮ್ಮ ಹೋಲ್ಡಿಂಗ್ಸ್ನಿಂದಾಗಿ ಕಾನ್ಸಂಟ್ರೇಶನ್ ರಿಸ್ಕ್ನಿಂದ ಬಳಲುತ್ತಿರುತ್ತವೆ.

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??